Advertisement
ಮಂಗಳವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಇವತ್ತಿನ ಸ್ಥಿತಿಯಲ್ಲಿ ಕಾಂಗ್ರೆಸ್ ದೇಶದಲ್ಲಿ ಇಪ್ಪತ್ತು ಸ್ಥಾನಗೆಲ್ಲುವುದು ಕಷ್ಟ. ಕೌರವರ ಪಕ್ಷದಲ್ಲಿದ್ದ ದುಯೋಧನನ ಸಹೋದರ ಯುಯೂತ್ಸು ಕುರುಕ್ಷೇತ್ರ ಯುದ್ಧ ಸಮಯದಲ್ಲಿ ಧರ್ಮದ ಪರ ಇರೋರು ಬನ್ನಿ ಎಂದು ಕರೆದಾಗ ಆತ ಪಾಂಡವರ ಪರ ಬಂದ, ದೇಶಬೇಕು ಅನ್ನೋ ವಿಭೀಷಣರು, ನರೇಂದ್ರ ಮೋದಿ ಪ್ರಧಾನಿಯಾಗಬೇಕು ದೇಶ ಉಳಿಯಬೇಕು ಎನ್ನುವವರು ಬಿಜೆಪಿಗೆ ಬನ್ನಿ ಎಂದು ಕಾಂಗ್ರೆಸ್‌ನವರಿಗೆ ಕರೆ ನೀಡಿದರು. ರಾಜ್ಯಸಭೆಗೆ ಸೋನಿಯಾಗಾಂಧಿ ಕರ್ನಾಟಕದಿಂದ ಸ್ಪರ್ಧೆ ವಿಚಾರಕ್ಕೆ ಅವರು ಎಲ್ಲಿ ಬೇಕಾದರೂ ನಿಂತುಕೊಳ್ಳಲಿ ಎಂದರು.
Related Articles
Advertisement
‘ಕಾಂಗ್ರೆಸ್‌ನಿಂದ ಮತ್ತೆ ಕೆಲವರು ಬರುವ ಸಾಧ್ಯತೆ ಇದೆ. ಮೋದಿ ಪ್ರಧಾನಿಯಾಗಬೇಕು ಎನ್ನುವವರು ಕಾಂಗ್ರೆಸ್ ಬಿಟ್ಟು ಬನ್ನಿ ಅದರಲ್ಲಿ ಲಕ್ಷ್ಮಣ್ ಸವದಿ ಸೇರಿರಬಹುದು, ಇನ್ನೊಬ್ಬರು ಸೇರಿರಬಹುದು. ಕಾಂಗ್ರೆಸ್‌ನ ಕೆಲವರು ನಮ್ಮ ಸಂಪರ್ಕದಲ್ಲಿದ್ದಾರೆ. ಕೆಲವರು ಬಹಿರಂಗ ವಾಗಿ, ಕೆಲವರು ಅಂತರಂಗವಾಗಿ ಇದ್ದಾರೆ.’
‘ನರೇಂದ್ರ ಸ್ವಾಮಿಯವರು ಮಂತ್ರಿಗಿರಿಗಾಗಿ ಅರ್ಜಿ ಮೇಲೆ ಅರ್ಜಿ ಹಾಕಿಕೊಂಡು ಗಮನ ಸೆಳೆಯುತ್ತಿದ್ದಾರೆ. ಯಾರು ಅದೇ ರೀತಿ ಇರುತ್ತಾರೆ ಅಂತವರು ಮಾತ್ರ ಅಂತಹ ಪದ ಬಳಕೆ ಮಾಡುತ್ತಾರೆಂದು ನರೇಂದ್ರ ಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
ಅವರ ಮಾತಿನ ದಾಟಿ ನೋಡಿದರೇ ”ವನ್ ಹೀ ಈಸ್ ಸೀಡ್‌ಲೆಸ್” ಆಕಾರಣಕ್ಕೆ ಅವರ ಬಾಯಿಂದ ಅಂತಹ ಮಾತು ಬಂದಿದೆ. ಸೀಡ್ ಲೆಸ್ ಅಂದರೆ ಗೋತ್ತಲ್ಲ ಅದರಲ್ಲಿ ಬೀಜ ಇರಲ್ಲ, ಹುಟ್ಟಲ್ಲ. ರಾಜಕೀಯವಾಗಿ ಸೀಡ್‌ಲೆಸ್ ಅದಕ್ಕೆ ಅವರು ಆ ಪದ ಬಳಸಿದ್ದಾರೆ ಎಂದು ಕಟುವಾಗಿ ಟೀಕಿಸಿದರು.
ಕೋರ್ಟ್ ನಿರ್ದೇಶನದಂತೆ ದತ್ತಪೀಠಕ್ಕೆ ಮುಜರಾಯಿ ಇಲಾಖೆಯಿಂದ ಅರ್ಜಿ ಕರೆದು ಹಿಂದೂ ಅರ್ಚಕರನ್ನು ಆಯ್ಕೆ ಮಾಡಲಾಗಿದೆ. ಕಳೆದ ಒಂದು ವರ್ಷದಿಂದ ಸಂಬಳ ನೀಡಿಲ್ಲವೆಂದರೇ ಅದು ನಾಚಿಕೆಗೇಡಿನ ಸಂಗತಿ. ಅರ್ಚಕರಿಗೆ ಸಂಬಳ ಕೊಡುಗವ ಯೋಗ್ಯತೆಯೂ ಇಲ್ಲದ ಪರಿಸ್ಥಿತಿಯಲ್ಲಿ ಸರ್ಕಾರ ಇದೆ. ಅರ್ಚಕರಿಗೆ ಸಂಬಳ ಕೊಡಿವ ಯೋಗ್ಯತೆ ಇಲ್ಲದಿದ್ದರೇ ಮುಜರಾಯಿ ಇಲಾಖೆಯೊಳಗೆ ಹಿಂದೂ ದೇವಾಲಯಗಳನ್ನು ಯಾಕೆ ಇಟ್ಟುಕೊಂಡಿದ್ದೀರಿ, ಸರ್ಕಾರಕ್ಕೆ ದೇವಾಲಯಗಳ ಹುಂಡಿ ಮೇಲೆ ಮಾತ್ರ ಆಸೆನಾ ಎಂದು ಪ್ರಶ್ನಿಸಿದರು.