Advertisement

28 ವರ್ಷದ ನಂತರ ಬಿಜೆಪಿಯಿಂದ “ಕಸಬಾಪೇಠ’ಕಸಿದ ಕಾಂಗ್ರೆಸ್‌

09:16 PM Mar 02, 2023 | Team Udayavani |

ನವದೆಹಲಿ: ಮಹಾರಾಷ್ಟ್ರದ ಕಸಬಾಪೇಠ ವಿಧಾನಸಭಾ ಕ್ಷೇತ್ರದಲ್ಲಿ 28 ವರ್ಷಗಳ ನಂತರ ಕಾಂಗ್ರೆಸ್‌ ಜಯಗಳಿಸಿದೆ! ಇಲ್ಲಿಯವರೆಗೆ ಈ ಕ್ಷೇತ್ರದಲ್ಲಿ ಬಿಜೆಪಿಯದ್ದೇ ಪಾರುಪತ್ಯವಾಗಿತ್ತು!

Advertisement

ಇದಕ್ಕೂ ಮುನ್ನ ಶಾಸಕಿಯಾಗಿದ್ದ ಮುಕ್ತಾ ತಿಲಕ್‌ ನಿಧನಾಂತರ ಇಲ್ಲಿಗೆ ಮರು ಚುನಾವಣೆ ಘೋಷಣೆಯಾಯಿತು. ಕಾಂಗ್ರೆಸ್‌ನ ರವೀಂದ್ರ ಧಾಂಗೇಕರ್‌, ಬಿಜೆಪಿಯ ಹೇಮಂತ ರಸನೆ ಪರಸ್ಪರ ತೊಡೆ ತಟ್ಟಿದ್ದರು.

ಧಾಂಗೇಕರ್‌ 12,000 ಮತಗಳ ಅಂತರದಿಂದ ಗೆದ್ದರು. ಚುನಾವಣಾ ಫ‌ಲಿತಾಂಶ ಪ್ರಕಟವಾಗುವುದಕ್ಕೆ ಮುನ್ನವೇ ಕಾಂಗ್ರೆಸ್‌ ನಾಯಕ ನಾನಾ ಪಟೋಲೆ ತಮ್ಮ ಅಭ್ಯರ್ಥಿ ಗೆದ್ದಿರುವುದಾಗಿ ಘೋಷಿಸಿದರು. ಕೂಡಲೇ ಕಾಂಗ್ರೆಸ್‌ ಕಾರ್ಯಕರ್ತರು ಮತಯೆಣಿಕೆ ಕೇಂದ್ರದೆದುರು ಸಂಭ್ರಮ ಆರಂಭಿಸಿದರು. ಇನ್ನು ಪುಣೆಯ ಚಿಂಚಾಡದಲ್ಲಿ ಲಕ್ಷ್ಮಣ ಜಗತಾಪ್‌ ನಿಧನ ಹೊಂದಿದ್ದರಿಂದ ಅವರ ಪತ್ನಿ ಅಶ್ವಿ‌ನಿ ಜಗತಾಪ್‌ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದರು. ಅಂತರ 35,000 ಮತಗಳು. ಏಕನಾಥ ಶಿಂಧೆ ಶಿವಸೇನಾ ಮತ್ತು ಬಿಜೆಪಿ ಸಮ್ಮಿಶ್ರ ಸರ್ಕಾರ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ನಡೆದ ಮೊದಲ ಚುನಾವಣೆಯಿದು. ಇಲ್ಲಿ ಆಡಳಿತಾರೂಢ ಪಕ್ಷಗಳಿಗೆ ಸಮಬಲದ ಫ‌ಲಿತಾಂಶ ಲಭ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next