Advertisement

ರಾಜಸ್ಥಾನದ ಎಲ್ಲ 25 ಲೋಕಸಭೆ ಸೀಟು ಕಾಂಗ್ರೆಸ್‌ ಗೆಲ್ಲಲಿದೆ : ಡಿಸಿಎಂ ಸಚಿನ್‌ ಪೈಲಟ್‌

09:55 AM May 05, 2019 | Sathish malya |

ಜೈಪುರ : ರಾಜಸ್ಥಾನದ ಎಲ್ಲ 25 ಲೋಕಸಭಾ ಕ್ಷೇತ್ರಗಳನ್ನು ಕಾಂಗ್ರೆಸ್‌ ಗೆಲ್ಲುವುದು ನಿಶ್ಚಿತ ಎಂದು ರಾಜಸ್ಥಾನ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಪೈಲಟ್‌ ಹೇಳಿದ್ದಾರೆ.

Advertisement

ಬಿಜೆಪಿ ಸರಕಾರ ಕಳೆದ ಐದು ವರ್ಷಗಳ ತನ್ನ ಆಡಳಿತೆಯಲ್ಲಿ ತಾನು ಜನರಿಗಾಗಿ ಏನು ಮಾಡಿದ್ದೇನೆ ಎಂಬುದನ್ನು ಮನವರಿಕೆ ಮಾಡುವಲ್ಲಿ ಸೋತಿರುವುದೇ ಕಾಂಗ್ರೆಸ್‌ ಗೆಲುವಿಗೆ ಕಾರಣವಾಗಲಿದೆ ಎಂಬ ವಿಶ್ವಾಸವನ್ನು ರಾಜಸ್ಥಾನದ ಉಪ ಮುಖ್ಯಮಂತ್ರಿಯಾಗಿರುವ ಪೈಲಟ್‌ ವ್ಯಕ್ತಪಡಿಸಿದರು.

ಆಡಳಿತೆ, ಹೂಡಿಕೆ ಇತ್ಯಾದಿ ವಿಷಯಗಳ ಮೇಲೆ ಚುನಾವಣಾ ಪ್ರಚಾರಾಭಿಯಾನಗಳು ನಡೆಯಬೇಕು. ಕಾಂಗ್ರೆಸ್‌ ಪಕ್ಷ ಧನಾತ್ಮಕ ಅಭಿಯಾನ ನಡೆಸಿದೆ; ಆದರೆ ಬಿಜೆಪಿ ತನ್ನ ರಿಪೋರ್ಟ್‌ ಕಾರ್ಡ್‌ ಜನರಿಗೆ ತೋರಿಸಿಲ್ಲ; ಉದ್ಯೋಗಾವಕಾಶಗಳು ಯುವ ಜನರಿಗೆ ಅತೀ ಮುಖ್ಯ; ಅದರ ಬಗ್ಗೆ ಬಿಜೆಪಿ ಮಾತನಾಡುತ್ತಿಲ್ಲ ಎಂದು ಪೈಲಟ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next