Advertisement

Congress ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಮೇಲುಗೈ: ಡಾ| ನಾಸಿರ್‌ ಹುಸೇನ್‌

11:52 PM Oct 20, 2023 | Team Udayavani |

ಮಂಗಳೂರು: ಪಕ್ಷದಿಂದ ನಡೆಸಿರುವ ಆಂತರಿಕ ಸಮೀಕ್ಷೆ ಪ್ರಕಾರ ಮುಂಬರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಲಿದ್ದು, ಇದು 2024ರ ಲೋಕಸಭೆ ಚುನಾವಣೆಗೂ ದೊಡ್ಡ ಉತ್ತೇಜನ ನೀಡಲಿದೆ ಎಂದು ರಾಷ್ಟ್ರೀಯ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸದಸ್ಯ ಮತ್ತು ರಾಜ್ಯಸಭಾ ಸದಸ್ಯ ಡಾ| ಸೈಯದ್‌ ನಾಸಿರ್‌ ಹುಸೇನ್‌ ಹೇಳಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿ, ಬಿಜೆಪಿಯವರು ದ್ವೇಷ ರಾಜಕಾರಣ ನಡೆಸಿದರೂ ನಾವು ನಿರುದ್ಯೋಗ, ಬಡತನ, ಬೆಲೆಏರಿಕೆ, ಭ್ರಷ್ಟಾಚಾರ ವಿರುದ್ಧದ ನಿಲುವು, ಮಣಿಪುರ ಹಿಂಸಾಚಾರ, ಅದಾನಿ ವಿಷಯಗಳ ಆಧಾರದಲ್ಲಿ ವಿಚಾರ ಪ್ರಸ್ತುತಪಡಿಸುತ್ತೇವೆ. ಇದು ಮುಂದಿನ ಚುನಾವಣೆಗಳಲ್ಲಿ ಸಕಾರಾತ್ಮಕ ಪರಿಣಾಮ ಬೀರಲಿದೆ. ಭಾರತ್‌ ಜೋಡೊ ಯಾತ್ರೆಯ ಫಲವಾಗಿ ಹಿಮಾಚಲ ಪ್ರದೇಶ, ಕರ್ನಾಟಕದಲ್ಲಿ ಗೆದ್ದಿದೇವೆ. ಅದೇ ರೀತಿ ಮಿಜೋರಾಂ ಸಹಿತ ಎಲ್ಲ ಐದೂ ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರ ಪಡೆಯುವುದು ನಿಶ್ಚಿತ ಎಂದು ಪ್ರತಿಪಾದಿಸಿದರು.

ಕರಾವಳಿಯಲ್ಲಿ ಕೋಮು ಆಧಾರದ ಧ್ರುವೀಕರಣವನ್ನು ಕಾಂಗ್ರೆಸ್‌ ಸರಕಾರ ಸಹಿಸುವುದಿಲ್ಲ. ಕಾನೂನನ್ನು ಕಠಿನವಾಗಿ ಕಾರ್ಯರೂಪಕ್ಕೆ ತರಲಿದ್ದೇವೆ. ಅನೈತಿಕ ಪೊಲೀಸ್‌ಗಿರಿ, ದ್ವೇಷ ಭಾಷಣ, ದ್ವೇಷದ ಕೃತ್ಯಗಳನ್ನು ನಿಲ್ಲಿಸದಿದ್ದರೆ ಕರಾವಳಿ ಪ್ರದೇಶ ಈ ಹಿಂದಿನಂತೆ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಇಲ್ಲಿ ಹೂಡಿಕೆಗೂ ಯಾರೂ ಬರುವುದಿಲ್ಲ. ಅದಕ್ಕಾಗಿ ಈ ಭಾಗದಲ್ಲಿ ಶಾಂತಿ ಸ್ಥಾಪನೆಯ ಉದ್ದೇಶ ಹೊಂದಿದ್ದು ಕಾಂಗ್ರೆಸ್‌ ಪಕ್ಷವನ್ನೂ ಮತ್ತೆ ಕಟ್ಟುವ ಕಾರ್ಯ ಮಾಡುತ್ತಿದ್ದೇವೆ ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಅಬ್ದುಲ್‌ ಜಬ್ಟಾರ್‌, ಮಾಜಿ ಶಾಸಕರಾದ ಜೆ.ಆರ್‌. ಲೋಬೊ, ಐವನ್‌ ಡಿ’ಸೋಜಾ, ಮುಖಂಡರಾದ ಇಬ್ರಾಹಿಂ ಕೋಡಿಜಾಲ್‌, ಇನಾಯತ್‌ ಆಲಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next