Advertisement

EVM ವಿರೋಧಿ ಅಭಿಯಾನದಲ್ಲಿ ಕಾಂಗ್ರೆಸ್ :ವೀರಪ್ಪ ಮೊಯಿಲಿ ಕೆಂಡಾಮಂಡಲ

12:14 PM Apr 12, 2017 | Team Udayavani |

ಹೊಸದಿಲ್ಲಿ : ಇಲೆಕ್ಟ್ರಾನಿಕ್‌ ಓಟಿಂಗ್‌ ಮಶೀನ್‌ (ಇವಿಎಂ) ವಿರುದ್ಧದ ಅಭಿಯಾನದಲ್ಲಿ ತನ್ನ ಪಕ್ಷವೂ ಸೇರಿಕೊಂಡಿರುವುದನ್ನು ಹಿರಿಯ ಕಾಂಗ್ರೆಸ್‌ ನಾಯಕ ವೀರಪ್ಪ ಮೊಯಿಲಿ ಅವರು ತೀವ್ರವಾಗಿ ಟೀಕಿಸಿ ಕಿಡಿಕಾರಿದ್ದಾರೆ.

Advertisement

ತನ್ನದೇ ಕಾಂಗ್ರೆಸ್‌ ಪಕ್ಷ ಇವಿಎಂ ತಿರುಚಿವಿಕೆ ಅಭಿಯಾನದಲ್ಲಿ ಸೇರಿಕೊಂಡಿರುವುದಕ್ಕೆ ತೀವ್ರ ಅತೃಪ್ತಿ, ಹತಾಶೆ ಮತ್ತು ಜುಗುಪ್ಸೆಯನ್ನು ವ್ಯಕ್ತಪಡಿಸಿರುವ ಮೊಯಿಲಿ ಈ ಬಗ್ಗೆ ಹೇಳಿದ್ದು ಹೀಗೆ :

ಇವಿಎಂ ಗಳು ಎಲ್ಲ ಶಂಕೆಗಳನ್ನೂ ಮೀರಿರುವ ಸಾಧನವಾಗಿದೆ. ನಾನೋರ್ವ ಮಾಜಿ ಕಾನೂನು ಸಚಿವ. ಇವಿಎಂ ಗಳನ್ನು ಪರಿಚಯಿಸಲಾಗಿದ್ದೇ ನನ್ನ ಕಾಲದಲ್ಲಿ. ಕೆಲವೊಂದು ದೂರುಗಳು ಆಗಲೂ ಬಂದಿದ್ದವು. ಆಗ ನಾವು ಅವುಗಳನ್ನು ಪರಿಶೀಲಿಸಿದೆವು. ಹಾಗಿರುವಾಗ ನಾವು ಇತಿಹಾಸವನ್ನು ಮರೆಯಬಾರದು. ಇವಿಎಂ ವಿರುದ್ಧ ಯಾರೋ ಕೆಲವರು ಅಪಸ್ವರ ಎತ್ತಿ ಒಂದು ಆಂದೋಲನ ಆರಂಭಿಸಿದ್ದಾರೆ ಎಂದ ಮಾತ್ರಕ್ಕೆ ನಾವು ವಿಚಾರ-ವಿವೇಕ ಇಲ್ಲದೆ ಆ ಆಂದೋಲನಕ್ಕೆ ಧುಮುಕಬಾರದು. 

ವಿರೋಧ ಪಕ್ಷಗಳು ಮೊನ್ನೆ ಸೋಮವಾರ ಚುನಾವಣಾ ಆಯುಕ್ತರನ್ನು ಭೇಟಿಯಾಗಿ ತಮಗೆ ಇವಿಎಂಗಳಲ್ಲಿನ ವಿಶ್ವಾಸ ಸಂಪೂರ್ಣ ನಾಶವಾಗಿ ಹೋಗಿದೆ ಎಂದು ಹೇಳಿದ್ದರು. ಮಾತ್ರವಲ್ಲದೆ ವೋಟರ್‌ ವೆರಿಫೈಡ್‌ ಪೇಪರ್‌ ಆಡಿಟ್‌ ಟ್ರಯಲ್‌ (ವಿವಿಪ್ಯಾಟ್‌) ಯಂತ್ರವನ್ನು ಹಾಗೂ ಪೇಪರ್‌ ಬ್ಯಾಲಟ್‌ಗಲನ್ನು ಮುಂಬರುವ ಚುನಾವಣೆಗಳಲ್ಲಿ ಬಳಸುವಂತೆ ಆಗ್ರಹಿಸಿದ್ದರು. 

ಕಾಂಗ್ರೆಸ್‌, ತೃಣಮೂಲ ಕಾಂಗ್ರೆಸ್‌, ಎನ್‌ಸಿಪಿ ಮತ್ತು ಎಡ ಪಕ್ಷಗಳು ಸೇರಿದಂತೆ ಒಟ್ಟು 13 ವಿರೋಧ ಪಕ್ಷಗಳನ್ನು ಒಳಗೊಂಡ ನಿಯೋಗವೊಂದು ಚುನಾವಣಾ ಮಂಡಳಿಯನ್ನು ಭೇಟಿಯಾಗಿ ಕಳೆದ ಫೆಬ್ರವರಿ ಮಾರ್ಚ್‌ ತಿಂಗಳಲ್ಲಿ ನಡೆದಿದ್ದ ಪಂಚ ರಾಜ್ಯ ಚುನಾವಣೆಗಳು ಹಾಗೂ ಭಾನುವಾರ ಹಲವು ರಾಜ್ಯಗಳಲ್ಲಿ ನಡೆದಿದ್ದ ಉಪ ಚುನಾವಣೆಗಳಲ್ಲಿ ಇವಿಯಂಗಳನ್ನು ತಿರುಚಲಾಗಿದೆ ಎಂದು ಆರೋಪಿಸಿದರು. 

Advertisement

ಈ ನಿಯೋಗವನ್ನು ಕಾಂಗ್ರೆಸ್‌ ಸೇರುವಲ್ಲಿ ಯಾರೂ ನಮಗೆ ಮುಂಚಿತವಾಗಿ ತಿಳಿಸಿಲ್ಲ; ಸಮಾಲೋಚಿಸಿಲ್ಲ ಎಂದು ಮೊಯಿಲಿ ಹೇಳಿದ್ದು ನಾವು ಇವಿಎಂ ವಿರುದ್ಧದ ಅಭಿಯಾನಕ್ಕೆ ಸೇರಲೇಬಾರದಿತ್ತು ಎಂದು ಖಂಡ ತುಂಡವಾಗಿ ಹೇಳಿರುವುದನ್ನು ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ. 

ಮುಂದುವರಿದು ಮೊಯಿಲಿ ಹೇಳಿದರು : ಇವಿಎಂಗಳು ಚೆನ್ನಾಗಿಯೇ ಇವೆ. ನಮ್ಮ ಯುಪಿಎ ಕಾಲದಲ್ಲಿ ನಾವದನ್ನು ಕೂಲಂಕಷವಾಗಿ ಪರಿಶೀಲಿಸಿದ್ದೇವೆ, ಪರೀಕ್ಷಿಸಿದ್ದೇವೆ. ಚುನಾವಣೆಗಳಲ್ಲಿನ ನಮ್ಮ ಸೋಲಿಗೆ ಇವಿಎಂ ಗಳೇ ಕಾರಣ ಎನ್ನಬಾರದು. ಸೋಲುತ್ತಲೇ ಇರುವವರು ಮಾತ್ರವೇ ಇವಿಎಂ ಗಳನ್ನು ತಮ್ಮ ಸೋಲಿಗೆ ಕಾರಣೀಭೂತ ಗೊಳಿಸುತ್ತಾರೆ. ಅಲ್ಲದಿದ್ದರೆ ಇವಿಎಂಗಳಲ್ಲಿ ಯಾವುದೇ ಸಮಸ್ಯೆ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next