Advertisement

ಅಫ್ಘಾನಿಸ್ತಾನದಿಂದ ದೇಶದ ಹಿಂದೂ, ಸಿಖ್ಖರನ್ನು ಕರೆತರಲು ವ್ಯವಸ್ಥೆ ಮಾಡಿ : ಕಾಂಗ್ರೆಸ್

04:00 PM Aug 09, 2021 | Team Udayavani |

ನವ ದೆಹಲಿ : ಭಾರತ ಮೂಲದ ಹಿಂದೂ ಮತ್ತು ಸಿಖ್ಖರನ್ನು ಯುದ್ಧ ಪೀಡಿತ ಅಫ್ಘಾನಿಸ್ತಾನದಿಂದ ದೇಶಕ್ಕೆ ಕರೆಸಿಕೊಳ್ಳುವಂತೆ ಕಾಂಗ್ರೆಸ್  ಕೇಂದ್ರ ಸರ್ಕಾರವನ್ನು ಇಂದು (ಸೋಮವಾರ, ಆಗಸ್ಟ್ 9) ಒತ್ತಾಯಿಸಿದೆ.

Advertisement

ಕಾಂಗ್ರೆಸ್ ನಾಯಕ ಜೈವೀರ್ ಶೆರ್ಗಿಲ್ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್‌ ಗೆ ಪತ್ರ ಬರೆದಿದ್ದು,  ಯುದ್ಧ ಪೀಡಿತ ದೇಶದಿಂದ ಹಿಂದುಗಳು ಹಾಗೂ ಸಿಖ್ಖರನ್ನು ದೇಶಕ್ಕೆ ಕರೆಸಿಕೊಳ್ಳುವಂತೆ ಕೋರಿದ್ದಾರೆ.

“ನಿಮಗೆ ತಿಳಿದಿರುವಂತೆ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿ ಹೆಚ್ಚಾಗಿದೆ, ಯುಎಸ್ ಸೈನ್ಯವನ್ನು ಹಿಂತೆಗೆದುಕೊಂಡಿದೆ, ಮತ್ತು ಅವರು ದೇಶವನ್ನು ಮತ್ತೊಮ್ಮೆ ಅಂತರಾಷ್ಟ್ರೀಯ ಭಯೋತ್ಪಾದನೆಯ ಕೇಂದ್ರವಾಗಿ ಪರಿವರ್ತಿಸಲು ನೋಡುತ್ತಿದ್ದಾರೆಂದು ಶೆರ್ಗಿಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ : ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟ: ಶೇಕಡಾ 99.9 ವಿದ್ಯಾರ್ಥಿಗಳು ಪಾಸ್, ಓರ್ವ ಮಾತ್ರ ಫೇಲ್

ಹಿಂಸೆಯ ದುರಂತ ನಡೆ ಅಲ್ಲಿ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸಿದೆ.  ಮನುಷ್ಯರಿಗೆ ಅಲ್ಲಿ ಬದುಕುವುದಕ್ಕೆ ಸಾಧ್ಯವಿಲ್ಲ. ಭಾರತದ ಮೂಲವಾಸಿಗಳಿಗೂ ಅಲ್ಲಿ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

Advertisement

ಸುಮಾರು 650 ಮಂದಿ ಸಿಖ್ ಧರ್ಮದವರು ಹಾಗೂ 50 ಕ್ಕೂ ಹೆಚ್ಚು ಮಂದಿ ಹಿಂದೂ ಧರ್ಮದವರು ಅಫ್ಘಾನಿಸ್ತಾನದ ಹಿಂಸೆಯ ನಡುವೆ ಸಿಲುಕಿಕೊಂಡಿದ್ದಾರೆ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿವೆ. ಅಲ್ಲಿ ಭಾರತದ ಮೂಲದವರೆಲ್ಲಾ ಭೀತಿಯಿಂದಿದ್ದಾರೆ. ಕೇಂದ್ರ ಸರ್ಕಾರ ಶೀಘ್ರದಲ್ಲಿ ಅವರನ್ನು ಭಾರತಕ್ಕೆ ಕರೆತರಯವಲ್ಲಿ ವ್ಯವಸ್ಥೆ ಮಾಡಬೇಖು ಎಂದಿದ್ದಾರೆ.

ಇನ್ನು, ಇಂದು ಬಿಗಿ ಉಡುಪು ಧರಿಸಿದ್ದಾರೆ ಮತ್ತು ಪುರುಷ ಸಂಬಂಧಿ ಜೊತೆಗಿಲ್ಲದ ಕಾರಣಕ್ಕೆ ಯುವತಿಯೊಬ್ಬರನ್ನು ತಾಲಿಬಾನ್ ಉಗ್ರರು ಗುಂಡಿಕ್ಕಿ ಕೊಂದು ಹಾಕಿದ ಘಟನೆ ಅಫ್ಘಾನಿಸ್ಥಾನದ ಉತ್ತರ ಬಲ್ಖ್ ಪ್ರಾಂತ್ಯದಲ್ಲಿ ನಡೆದಿದೆ.

ತಾಲಿಬಾನ್ ನಿಯಂತ್ರಣದಲ್ಲಿರುವ ಸಮರ್ ಖಂಡ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಅಫ್ಘಾನಿಸ್ಥಾನದ ರೇಡಿಯೊ ಆಜಾದಿ ವರದಿ ಮಾಡಿದೆ.

ಇದನ್ನೂ ಓದಿ : ಸಂಪುಟ ವಿಸ್ತರಣೆ ಸಮಯದಲ್ಲಿ ಅಸಮಾಧಾನ ಸಾಮಾನ್ಯ : ಸಚಿವ ಶಿವರಾಮ ಹೆಬ್ಬಾರ್ ಹೇಳಿಕೆ

Advertisement

Udayavani is now on Telegram. Click here to join our channel and stay updated with the latest news.

Next