ಕುಂದಾಪುರ: ಪತ್ರಕರ್ತೆ ಗೌರಿ ಲಂಕೇಶ್ ಅವರೊಂದು ಬರಿಯ ಜೀವನವಾಗಿರಲಿಲ್ಲ. ಅವರೊಂದು ತತ್ವವಾಗಿದ್ದರು, ಸಿದ್ಧಾಂತವಾಗಿದ್ದರು. ಅಲ್ಲದೇ ಈ ನಾಡಿನ ಜೀವಪರ ಮನಸ್ಸುಗಳಿಗೆ ಸ್ಫೂರ್ತಿಯಾಗಿದ್ದರು, ಪ್ರೇರಣೆಯಾಗಿದ್ದರು ಎಂದು ಪ್ರಗತಿಪರ ಚಿಂತಕ, ಉಪನ್ಯಾಸಕ ಜಯಪ್ರಕಾಶ್ ಶೆಟ್ಟಿ ಹೇಳಿದರು.
ಅವರು ಕುಂದಾಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಗೌರಿ ಲಂಕೇಶ್ ಶ್ರದ್ಧಾಂಜಲಿ ಸಭೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ಗೌರಿ ಲಂಕೇಶ್ ಅವರು ಕೋಮುವಾದ ಮತ್ತು ಮೂಲಭೂತವಾದವನ್ನು ತನ್ನ ಜೀವನದ ಕೊನೆಯ ಉಸಿರಿನ ತನಕವೂ ವಿರೋಧಿಸಿದ್ದರು. ಆಕೆ ಒಬ್ಬ ಮಾನವತಾವಾದಿ ಹಾಗೂ ತಾಯಿ ಹೃದಯದ ಮಹಿಳೆಯಾಗಿದ್ದರು.
ಹೆಣ್ಣನ್ನು ದೇವತೆ ಎಂದು ಪೂಜಿಸುವ ದೇಶ ಎಂದು ನಂಬಿದ್ದ ಆಕೆ, ಇಂತಹ ದೇಶದಲ್ಲಿ ಹೆಣ್ಣೊಬ್ಬಳ ಮೇಲೆ ಗುಂಡಿನ ದಾಳಿ ನಡೆಸಿ ಅಮಾನುಷವಾಗಿ ಹತ್ಯೆಗೈಯಲಾಗುತ್ತದೆ ಎಂದು ಊಹಿಸದಿರುವುದೇ ಬಹುಶಃ ಆಕೆ ದುಷ್ಕರ್ಮಿಗಳಿಗೆ ಬಲಿಯಾಗಲು ಕಾರಣವಾಯಿತು. ಗೌರಿ ಹತ್ಯೆ ಈ ದೇಶದ ಪ್ರಜಾಪ್ರಭುತ್ವದ, ಸಂವಿಧಾನದ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆದ ದಾಳಿಯಾಗಿದೆ ಎಂದು ವಿಶ್ಲೇಷಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಕಾಂಗ್ರೆಸ್ ಕಾರ್ಯದರ್ಶಿ ವಿನೋದ್ ಕ್ರಾಸ್ತಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪುರಸಭಾ ಸದಸ್ಯ ಚಂದ್ರಶೇಖರ ಖಾರ್ವಿ ವಂದಿಸಿದರು.
ನಗರ ಪ್ರಾಧಿಕಾರದ ಅಧ್ಯಕ್ಷ ವಿಕಾಸ್ ಹೆಗ್ಡೆ, ಎಪಿಎಂಸಿ ಉಪಾಧ್ಯಕ್ಷ ಗಣೇಶ್ ಶೇರೆಗಾರ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಶಿವಾನಂದ ಕೆ, ಕೆಪಿಸಿಸಿ ಐಟಿ ವಿಭಾಗದ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಮಹಿಳಾ ಕಾಂಗ್ರೆಸ್ ನ ಶೋಭಾ ಸಚ್ಚಿದಾನಂದ, ಇಂಟಕ್ ಅಧ್ಯಕ್ಷ ಲಕ್ಷ್ಮಣ ಶೆಟ್ಟಿ, ಪುರಸಭಾ ಸದಸ್ಯರಾದ ಶ್ರೀಧರ ಶೇರೆಗಾರ್, ಚಂದ್ರ ಅಮೀನ್, ಉಮೇಶ್ ಬಿ, ಕೇಶವ ಭಟ್ಟ,