ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟದ ಚರ್ಚೆ ಜೋರಾದ ಬೆನ್ನಗಿ ಈವರೆಗೆ ಸಂಪುಟದ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಇಲ್ಲದ ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪಅವರ ಪುತ್ರ ಬಿ. ವೈ ವಿಜಯೇಂದ್ರ ಹೆಸರು ಮುನ್ನಲೆಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್, ಬಿಜೆಪಿ ವಿರುದ್ದ ಕಿಡಿ ಕಾರಿದ್ದು, ತನ್ನ ಅಧಿಕೃತ ಟ್ವೀಟರ್ ಖಾತೆಯ ಮೂಲಕ ‘ತಾವು ವಿಪಕ್ಷಗಳಿಗೆ ಆರೋಪಿಸುತ್ತಿದ್ದ ಅದೇ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲು ಬಿಜೆಪಿ ರಾಜ್ಯ ಸರ್ಕಾರ ಬಹಳ ಉತ್ಸಾಹದಿಂದೆ’ ಎಂದು ಹೇಳಿದೆ.
ಇದನ್ನೂ ಓದಿ : ಕಾಂಗ್ರೆಸ್, ಚೀನಾದ ಕಮ್ಯುನಿಷ್ಟ್ ಪಕ್ಷದಿಂದ ಫಂಡ್ ಪಡೆದಂತೆ ವರ್ತಿಸುತ್ತಿದೆ : ನೂಪುರ ಶರ್ಮಾ
ಬಿ. ವೈ ವಿಜಯೇಂದ್ರ ಅವರಿಗೆ ರಾಜ್ಯದ ಉಪ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಬಿ. ಎಸ್ ಯಡಿಯೂರಪ್ಪ ಒತ್ತಡ ಹೇರಿದ್ದಾರೆ ಎಂಬ ವರದಿಯ ತುಣುಕೊಂದನ್ನು ಪೋಸ್ಟ್ ಮಾಡುವುದರೊಂದಿಗೆ, ‘ಸಿಎಂ ನಂತರ ಈಗ ಬಿವೈವಿ ಸರದಿ..! ಎಂಪಿ, ಎಂ ಎಲ್ ಎ, ಎಂ ಎಲ್ ಸಿ ಯಾವುದೇ ಚುನಾಯಿತ ಪ್ರತಿನಿಧಿಯೇ ಅಲ್ಲದ ಬಿ ವೈ ವಿಜಯೇಂದ್ರ ರಿಗೆ ಸಂಪುಟ ಸ್ಥಾನ’ ಎಂದು ಆಕ್ರೋಶ ಹೊರಹಾಕಿದೆ.
ಇನ್ನು, ಯಡಿಯೂರಪ್ಪನವರೇ, ಧೃತರಾಷ್ಟ್ರನ ಪುತ್ರ ಪ್ರೇಮವೇ ಕುರುಕ್ಷೇತ್ರಕ್ಕೆ ಕಾರಣ ತಿಳಿದಿದೆಯೇ ಎಂದು ಮಾರ್ಮಿಕವಾಗಿ ಪ್ರಶ್ನೆ ಮಾಡಿದೆ.
ಇದನ್ನೂ ಓದಿ : ಜನರ ಮೇಲೆ ಆರ್ಥಿಕ ಹೊರೆ ಹೇರುವ ಕೆಲಸದಲ್ಲಿ ಕೇಂದ್ರ ಯಶಸ್ವಿಯಾಗಿದೆ : ರಾಹುಲ್ ವ್ಯಂಗ್ಯ