Advertisement

ಮುಖ್ಯಮಂತ್ರಿ ಅಭ್ಯರ್ಥಿಯಿಲ್ಲದೇ ಚುನಾವಣೆ ಎದುರಿಸಲಿದೆ ಕಾಂಗ್ರೆಸ್‌

12:13 AM Jan 10, 2022 | Team Udayavani |

ಹೊಸದಿಲ್ಲಿ: ವಿಧಾನಸಭೆ ಚುನಾವಣೆ ನಡೆಯಲಿರುವ ಐದೂ ರಾಜ್ಯಗಳಲ್ಲಿ “ಮುಖ್ಯಮಂತ್ರಿ ಅಭ್ಯರ್ಥಿ’ಯಿಲ್ಲದೆಯೇ ಚುನಾವಣೆ ಎದುರಿಸಲು ಕಾಂಗ್ರೆಸ್‌ ನಿರ್ಧರಿಸಿದೆ.

Advertisement

ಫ‌ಲಿತಾಂಶ ಬಂದ ಅನಂತರವೇ ಸಿಎಂ ಯಾರು ಎಂದು ನಿರ್ಧರಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಂಜಾಬ್‌ನಲ್ಲಿ ಅಧಿಕಾರ ಉಳಿಸಿಕೊಳ್ಳುವ ಸವಾಲು ಕಾಂಗ್ರೆಸ್‌ಗೆ ಎದುರಾಗಿದೆ. ಇನ್ನುಳಿದಂತೆ ಉತ್ತರಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲೂ ಬಿಜೆಪಿ ವಿರುದ್ಧ ಉತ್ತಮ ಸಾಧನೆ ಮಾಡಬೇಕಾದ ಅನಿವಾರ್ಯತೆಯಿದೆ. ಪಂಜಾಬ್‌ನಲ್ಲಿ ಚರಣ್‌ಜಿತ್‌ ಸಿಂಗ್‌ ಚನ್ನಿ, ಮಣಿಪುರದಲ್ಲಿ ಮಾಜಿ ಸಿಎಂ ಒಕ್ರಾಂ ಇಬೋಬಿ ಸಿಂಗ್‌ ಇದ್ದರೂ ಅವರನ್ನೇ ಸಿಎಂ ಅಭ್ಯರ್ಥಿ ಎಂದು ಸದ್ಯಕ್ಕೆ ಘೋಷಿಸದೇ ಇರಲು ಪಕ್ಷ ನಿರ್ಧರಿಸಿದೆ.

ಗೋವಾ ಪಕ್ಷೇತರ ಶಾಸಕ ರಾಜೀನಾಮೆ:  ಚುನಾವಣೆಗೆ ಒಂದು ತಿಂಗಳು ಬಾಕಿಯಿರುವಂತೆಯೇ ಗೋವಾ ಪಕ್ಷೇತರ ಶಾಸಕ ಪ್ರಸಾದ್‌ ಗಾಂವ್ಕರ್‌ ರವಿವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಮಥುರಾದಲ್ಲಿ ದೇಗುಲ ನಿರ್ಮಿಸಲಾಗದೇ?: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವಷ್ಟು ತಾಕತ್ತು ನಮಗಿದೆ ಎಂದ ಮೇಲೆ ಮಥುರಾದಲ್ಲಿ ದೇವಾಲಯ ನಿರ್ಮಿಸಲು ನಮ್ಮಿಂದಾಗದೇ ಎಂದು ಪ್ರಶ್ನಿಸಿದ್ದಾರೆ ಉತ್ತರಪ್ರದೇಶ ಸಿಎಂ ಯೋಗಿ. ರವಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕಂಸನ ಪ್ರತಿಮೆಯನ್ನು ಸ್ಥಾಪಿಸಿದವರ ಕನಸಲ್ಲಿ ಕೃಷ್ಣ ಬರುತ್ತಾನೆಂದ ಮೇಲೆ, ತನ್ನದೇ ಭಕ್ತರ ಕನಸಲ್ಲಿ ಶ್ರೀಕೃಷ್ಣ ಬಾರದೇ ಇರುತ್ತಾನೆಯೇ ಎಂದೂ ಪ್ರಶ್ನಿಸುತ್ತಾ ಎಸ್‌ಪಿ ನಾಯಕ ಅಖೀಲೇಶ್‌ ಅವರ ಕಾಲೆಳೆದಿದ್ದಾರೆ. 325ರಷ್ಟು ಸ್ಥಾನಗಳನ್ನು ಗೆಲ್ಲುವ ಭರವಸೆಯಿದೆ. ಮಾ.10ರಂದು ಬಿಜೆಪಿ ಸಿಎಂ ಪ್ರಮಾಣ ಸ್ವೀಕರಿ ಸಲಿದ್ದಾರೆ  ಎಂದಿದ್ದಾರೆ.

ಇದನ್ನೂ ಓದಿ:ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಉಲ್ಬಣ : 340 ಮಂದಿಗೆ ಪಾಸಿಟಿವ್‌; ಶೇ.3.86 ಪಾಸಿಟಿವಿಟಿ ದರ

Advertisement

ಮೋದಿ ಫೋಟೋ ಇರದು
ಪಂಚರಾಜ್ಯಗಳಲ್ಲಿ ಚುನಾವಣ ನೀತಿ ಸಂಹಿತೆ ಜಾರಿಯಾಗಿದ್ದು, ಇಲ್ಲಿ ಜನರಿಗೆ ನೀಡಲಾಗುವ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಫೋಟೋ ಮುದ್ರಿಸದಿರಲು ನಿರ್ಧರಿಸಲಾಗಿದೆ. ಇದಕ್ಕೆ ಸಂಬಂಧಿಸಿ ಕೋವಿನ್‌ ಪೋರ್ಟಲ್‌ನಲ್ಲಿ ಬದಲಾವಣೆ ತಂದು, ಫೋಟೋ ಮುದ್ರಿತವಾಗದಂತೆ ನೋಡಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ನಡೆದ ಪಂಚರಾಜ್ಯ ಚುನಾವಣೆಗಳ ವೇಳೆಯೂ ಆರೋಗ್ಯ ಸಚಿವಾಲಯ ಇದೇ ನಿರ್ಧಾರ ಕೈಗೊಂಡಿತ್ತು.

ಪ್ರಧಾನಮಂತ್ರಿಯ ಭದ್ರತೆ ಮುಖ್ಯವಾದದ್ದೇ. ಆದರೆ ಇದೇ ಕೇಂದ್ರ ಸರಕಾರ ಹಲವು ನಾಯಕರ ಭದ್ರತೆಯನ್ನು ಹಿಂಪಡೆದಿಲ್ಲವೇ? ಅಂಥವರ ಭದ್ರತೆಗೆ ಮಹತ್ವವೇ ಇಲ್ಲವೇ?
-ಅಖಿಲೇಶ್ ಯಾದವ್,
ಎಸ್‌ಪಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next