Advertisement
ಫಲಿತಾಂಶ ಬಂದ ಅನಂತರವೇ ಸಿಎಂ ಯಾರು ಎಂದು ನಿರ್ಧರಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಂಜಾಬ್‌ನಲ್ಲಿ ಅಧಿಕಾರ ಉಳಿಸಿಕೊಳ್ಳುವ ಸವಾಲು ಕಾಂಗ್ರೆಸ್‌ಗೆ ಎದುರಾಗಿದೆ. ಇನ್ನುಳಿದಂತೆ ಉತ್ತರಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲೂ ಬಿಜೆಪಿ ವಿರುದ್ಧ ಉತ್ತಮ ಸಾಧನೆ ಮಾಡಬೇಕಾದ ಅನಿವಾರ್ಯತೆಯಿದೆ. ಪಂಜಾಬ್‌ನಲ್ಲಿ ಚರಣ್‌ಜಿತ್ ಸಿಂಗ್ ಚನ್ನಿ, ಮಣಿಪುರದಲ್ಲಿ ಮಾಜಿ ಸಿಎಂ ಒಕ್ರಾಂ ಇಬೋಬಿ ಸಿಂಗ್ ಇದ್ದರೂ ಅವರನ್ನೇ ಸಿಎಂ ಅಭ್ಯರ್ಥಿ ಎಂದು ಸದ್ಯಕ್ಕೆ ಘೋಷಿಸದೇ ಇರಲು ಪಕ್ಷ ನಿರ್ಧರಿಸಿದೆ.
Related Articles
Advertisement
ಮೋದಿ ಫೋಟೋ ಇರದುಪಂಚರಾಜ್ಯಗಳಲ್ಲಿ ಚುನಾವಣ ನೀತಿ ಸಂಹಿತೆ ಜಾರಿಯಾಗಿದ್ದು, ಇಲ್ಲಿ ಜನರಿಗೆ ನೀಡಲಾಗುವ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಮೋದಿ ಫೋಟೋ ಮುದ್ರಿಸದಿರಲು ನಿರ್ಧರಿಸಲಾಗಿದೆ. ಇದಕ್ಕೆ ಸಂಬಂಧಿಸಿ ಕೋವಿನ್ ಪೋರ್ಟಲ್‌ನಲ್ಲಿ ಬದಲಾವಣೆ ತಂದು, ಫೋಟೋ ಮುದ್ರಿತವಾಗದಂತೆ ನೋಡಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ನಡೆದ ಪಂಚರಾಜ್ಯ ಚುನಾವಣೆಗಳ ವೇಳೆಯೂ ಆರೋಗ್ಯ ಸಚಿವಾಲಯ ಇದೇ ನಿರ್ಧಾರ ಕೈಗೊಂಡಿತ್ತು. ಪ್ರಧಾನಮಂತ್ರಿಯ ಭದ್ರತೆ ಮುಖ್ಯವಾದದ್ದೇ. ಆದರೆ ಇದೇ ಕೇಂದ್ರ ಸರಕಾರ ಹಲವು ನಾಯಕರ ಭದ್ರತೆಯನ್ನು ಹಿಂಪಡೆದಿಲ್ಲವೇ? ಅಂಥವರ ಭದ್ರತೆಗೆ ಮಹತ್ವವೇ ಇಲ್ಲವೇ?
-ಅಖಿಲೇಶ್ ಯಾದವ್,
ಎಸ್‌ಪಿ ನಾಯಕ