Advertisement

10 ವರ್ಷ ಬಳಿಕ ಬಂಟ್ವಾಳದ ಕೈ ತಪ್ಪಿದ ಕಾಂಗ್ರೆಸ್‌ ಟಿಕೆಟ್‌ !

09:53 AM Apr 02, 2019 | Team Udayavani |

ಬೆಳ್ತಂಗಡಿ: ದ.ಕ. ಲೋಕಸಭಾ ಕ್ಷೇತ್ರ (ಹಿಂದಿನ ಮಂಗಳೂರು ಕ್ಷೇತ್ರ ಸೇರಿ)ದ ಚುನಾ ವಣೆಗೆ ಸಂಬಂಧಿಸಿ ಬಂಟ್ವಾಳ ತಾಲೂ ಕಿಗೂ ಕಾಂಗ್ರೆಸ್‌ ಟಿಕೆಟ್‌ಗೂ ವಿಶೇಷ ನಂಟಿದೆ. 1977ರಿಂದ 2014ರ ವರೆಗೆ ನಡೆದ 11 ಚುನಾವಣೆಗಳ ಪೈಕಿ ಬರೋಬ್ಬರಿ 9 ಬಾರಿ ಬಂಟ್ವಾಳದವರೇ ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ದ್ದರು. 10 ವರ್ಷಗಳ ಬಳಿಕ ಮತ್ತೆ ಈ ಬಾರಿ ಕಾಂಗ್ರೆಸ್‌ ಟಿಕೆಟ್‌ ಮತ್ತೆ ಬಂಟ್ವಾಳದ ಕೈ ತಪ್ಪಿದೆ!

Advertisement

ಪ್ರಾರಂಭದಲ್ಲಿ ಬಿ. ರಮಾನಾಥ ರೈ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತು ಕೇಳಿ ಬಂದಾಗ ಮತ್ತೆ ಕಾಂಗ್ರೆಸ್‌ ಟಿಕೆಟ್‌ ಬಂಟ್ವಾಳದ ಪಾಲಾಗಲಿದೆ ಎನ್ನುವ ನಿರೀಕ್ಷೆಯಿತ್ತು. ಬದ ಲಾದ ರಾಜಕೀಯ ಸನ್ನಿವೇಶದಲ್ಲಿ ಅಭ್ಯ ರ್ಥಿಯೂ ಬದಲಾಗಿದ್ದಾರೆ.

11ರಲ್ಲಿ 9 ಬಾರಿ ಅಭ್ಯರ್ಥಿ ಕ್ಷೇತ್ರದ ಮತದಾರರಾದ ಬಿ. ಜನಾರ್ದನ ಪೂಜಾರಿ 1977ರಿಂದ 1998ರ ವರೆಗೆ ಹಾಗೂ 2009, 2014ರ ಚುನಾವಣೆಯಲ್ಲಿ ಅಂದರೆ
ಒಟ್ಟು 11ರಲ್ಲಿ 9 ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಯಾಗಿದ್ದರು. 1999, 2004ರ ಚುನಾವಣೆ ಯಲ್ಲಿ ಡಾ| ಎಂ. ವೀರಪ್ಪ ಮೊಲಿ ಅವರನ್ನು ಅಭ್ಯರ್ಥಿಯಾಗಿಸಲಾಗಿತ್ತು. ಅವರು ಕೂಡ ಎರಡೂ ಚುನಾವಣೆಗಳಲ್ಲಿ ಸೋತಿದ್ದರು.

ದ.ಕ. ಕ್ಷೇತ್ರದಲ್ಲೂ ಸ್ಪರ್ಧೆ
2008ರಲ್ಲಿ ಕ್ಷೇತ್ರ ಪುನರ್‌ವಿಂಗಡನೆಗೊಂಡು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದ ಬಳಿಕ ನಡೆದ ಎರಡು ಚುನಾವಣೆಗಳಲ್ಲೂ ಕಾಂಗ್ರೆಸ್‌ ಬಂಟ್ವಾಳಕ್ಕೆ ಅವಕಾಶ ನೀಡಿ, 2009, 2014ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಪೂಜಾರಿ ಅವರು ಬಿಜೆಪಿಯ ನಳಿನ್‌ ಕುಮಾರ್‌ ಕಟೀಲು ಎದುರು ಸೋಲನುಭವಿಸಿದ್ದರು.

ಹರಿಪ್ರಸಾದ್‌ ಮೂಲವೂ ಬಂಟ್ವಾಳ!
ಈ ಬಾರಿ ದ.ಕ. ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಂದು ಬಿ.ಕೆ. ಹರಿಪ್ರಸಾದ್‌ ಹೆಸರೂ ಕೇಳಿಬಂದಿತ್ತು. ಅವರ ಮೂಲವೂ ಬಂಟ್ವಾಳವಾಗಿದ್ದು, ಇವರು ತಾ|ನ ಅರಳದ ಎ. ಕೆಂಪಯ್ಯ ಅವರ ಪುತ್ರ. ಆದರೆ ಕೆಂಪಯ್ಯ ದಶಕಗಳ ಹಿಂದೆಯೇ ಬೆಂಗಳೂರಿನಲ್ಲಿ ನೆಲೆಸಿದ್ದ ಕಾರಣ ಹರಿಪ್ರಸಾದ್‌ ಹುಟ್ಟಿದ್ದು, ಓದಿದ್ದು ಬೆಂಗಳೂರಿನಲ್ಲಿಯೇ. ಈಗ ಬೆಂಗಳೂರು ಉತ್ತರ ಕ್ಷೇತ್ರದಿಂದ ಅಭ್ಯರ್ಥಿ. ಒಟ್ಟಿನಲ್ಲಿ ಜನಾರ್ದನ ಪೂಜಾರಿ, ರಮಾನಾಥ ರೈ, ಬಿ.ಕೆ. ಹರಿಪ್ರಸಾದ್‌ ಯಾರಿಗೆ ಟಿಕೆಟ್‌ ಸಿಕ್ಕಿದ್ದರೂ ಬಂಟ್ವಾಳ ತಾಲೂಕಿಗೆ ಸಿಕ್ಕಿದಂತಾಗುತ್ತಿತ್ತು, ಈಗ ಅವಕಾಶ ತಪ್ಪಿದೆ.

Advertisement

 ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next