Advertisement

ಸರಕಾರ ಎಡವಿದಲ್ಲಿ ಎಚ್ಚರಿಸುವ ಕಾರ್ಯ ಮಾಡುತ್ತದೆ ಕಾಂಗ್ರೆಸ್ ಟಾಸ್ಕ್ ಪೋರ್ಸ್

09:05 AM Apr 05, 2020 | Team Udayavani |

ಮಂಗಳೂರು: ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ಒಳಗೊಂಡ ಟಾಸ್ಕ್‌ಪೋರ್ಸ್ ರಚನೆಯಾಗಿದ್ದು, ಸರಕಾರ ಎಡವಿದಲ್ಲಿ ಎಚ್ಚರಿಸುವ ಕಾರ್ಯ ಮಾಡುತ್ತದೆ. ಜನರಿಗೆ ಸಹಾಯ ಮಾಡುವ ಗುರಿ ಹೊಂದಿದೆ ಎಂದು ಮಾಜಿ ಶಾಸಕ‌ ಜೆ. ಆರ್ ಲೋಬೋ ಹೇಳಿದರು.

Advertisement

ಮಂಗಳೂರು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ನಿಯಂತ್ರಣಕ್ಕೆ ಕಾಂಗ್ರೆಸ್ ‌ನಿಂದ‌ ಟಾಸ್ಕ್‌ಪೋರ್ಸ್ ರಚನೆ ಮಾಡಲಾಗಿದೆ. ನಾವು ಜವಾಬ್ದಾರಿಯುತ ಕೆಲಸ ಮಾಡುತ್ತೇವೆ, ಸರ್ಕಾರಕ್ಕೆ ಸಲಹೆ ನೀಡುತ್ತೇವೆ ಎಂದರು.

ಸಮಿತಿಯಲ್ಲಿ ಎಂಟು ಉಪಸಮಿತಿಯನ್ನು ಮಾಡುತ್ತೇವೆ. ಆಹಾರ ಉಪಸಮಿತಿ, ಆರೋಗ್ಯ ಉಪಸಮಿತಿ, ಸಾಮಾಜಿಕ ಜಾಲತಾಣ‌ ಸಮಿತಿ ಹೀಗೆ ಒಟ್ಟು 8 ಉಪಸಮಿತಿ ಮಾಡಲಾಗುವುದು, ಇದರೊಂದಿಗೆ ವಾರ್ ರೂಮ್ ನಿರ್ಮಾಣ ಮಾಡಿದ್ದು, ಸಮಸ್ಯೆ ಬಂದಲ್ಲಿ ಕರೆ ಮಾಡಬಹುದು ಎಂದು ಮಾಜಿ ಶಾಸಕರು ಮಾಹಿತಿ ನೀಡಿದರು.

ಕೋವಿಡ್-19 ರಾಷ್ಟ್ರೀಯ ವಿಪತ್ತು, ಇದರಲ್ಲಿ ರಾಜಕೀಯ ಬೇಡ. ಎಂದು ಮಂಗಳೂರಿನಲ್ಲಿ ಮಾಜಿ ಶಾಸಕ‌ ಜೆ. ಆರ್ ಲೋಬೋ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next