Advertisement

ನೇಕಾರರ ಧ್ವನಿಯಾಗಲು ಕಾಂಗ್ರೆಸ್‌ ಬೆಂಬಲಿಸಿ

01:03 PM Apr 13, 2019 | pallavi |
ತೇರದಾಳ/ರಬಕವಿ: ಜಿಲ್ಲೆಯ ನೇಕಾರ ಸಮಸ್ಯೆಗಳನ್ನು ಕಣ್ಣಾರೆ ಕಂಡಿದ್ದೇನೆ. ಅವರ ಮಗ್ಗಗಳು ಸ್ಥಗಿತಗೊಂಡಿವೆ.
ನಿಮ್ಮ ಆಶೀರ್ವಾದ ಸಿಕ್ಕು ಲೋಕಸಭಾ ಸಂಸದೆಯಾದರೆ ನೇಕಾರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದಾಗಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವೀಣಾ ಕಾಶಪ್ಪನವರ ಹೇಳಿದರು.
ಮಹಾದೇವಪ್ಪ ಮಲ್ಲಪ್ಪ ಭದ್ರನವರ ಜವಳಿ ಅಂಗಡಿ ಆವರಣದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ದಲಿತರ, ಮಹಿಳೆಯರ, ಯುವಕರ ಪರವಾಗಿ ಸದಾಕಾಲ ಅಭಿವೃದ್ಧಿಗೆ ಮಾಡುವೆ. ಜಿಲ್ಲೆಯನ್ನು ಅಭಿವೃದ್ಧಿ ಮಾಡುವೆ ಎಂದರು.
ಎಸ್‌.ಆರ್‌. ಪಾಟೀಲ ಮಾತನಾಡಿ, ನೇಕಾರರ ಸಲುವಾಗಿ 2013ರಲ್ಲಿ ಸಿದ್ದರಾಮಯ್ಯನವರು ಸಾಲಮನ್ನಾ ಮಾಡಿದ್ದಾರೆ. ಮೈತ್ರಿ ಪಕ್ಷಗಳು ನೇಕಾರ ಬಗ್ಗೆ ಅಪಾರ ಕಳಕಳಿ ಹೊಂದಿದೆ. ಜಿಎಸ್‌ಟಿಯಿಂದ ಸಮಸ್ಯೆ ಹೆಚ್ಚಾಗಿದೆ. ನೇಕಾರರ ಮೇಲೆ ಕೆಟ್ಟ ಪರಿಣಾಮ ಬೀರಿದೆ. ವೀಣಾ ಕಾಶಪ್ಪನವರ ಜಿಲ್ಲಾದ್ಯಂತ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಅವರಿಗೆ ಬೆಂಬಲ ಕೊಡಿ ಎಂದು ಮನವಿ ಮಾಡಿದರು.
ಜೆಡಿಎಸ್‌ ಮುಖಂಡ ಬಸವರಾಜ ಕೊಣ್ಣೂರ ಮಾತನಾಡಿ, ಕಾರ್ಯಕರ್ತರು ವೀಣಾ ಕಾಶಪ್ಪನವರ ಗೆಲುವಿಗೆ ಶ್ರಮಿಸಬೇಕು. ಜಿಲ್ಲೆಯಲ್ಲಿ ಬದಲಾವಣೆ ತರಬೇಕಿದೆ. ಮನೆಗಳು ವೀಣಾ ಕಾಶಪ್ಪನವರಿಗೆ ಒಂದು ಅವಕಾಶ ನೀಡಿ, ಸಮೃದ್ಧ ಬಾಗಲಕೋಟೆ ನಿರ್ಮಾಣಕ್ಕೆ ಅವಕಾಶ ನೀಡಬೇಕು ಎಂದು ಹೇಳಿದರು.
ತೇರದಾಳ, ರಬಕವಿಯಲ್ಲಿ ತೆರೆದ ವಾಹನದಲ್ಲಿ ನಿಂತು ಮತಯಾಚಿಸಿದರು. ಮಾಜಿ ಶಾಸಕ ವಿಜಯಾಂದ ಕಾಶಪ್ಪನವರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಾರಸ್ಮಲ್‌ ಜೈನ್‌, ಮಾಜಿ ಸಚಿವೆ ಉಮಾಶ್ರೀ, ವೀರಣ್ಣ ಮತ್ತಿಕಟ್ಟಿ, ರವೀಂದ್ರ ಕಲಬುರ್ಗಿ, ಡಾ| ಎಂ.ಎಸ್‌. ದಡ್ಡೇನ್ನವರ ಉಪಸ್ಥಿತರಿದ್ದರು.
ಬಿಜೆಪಿಯವರು ಸುಳ್ಳುಗಳನ್ನೇ ಬಂಡವಾಳವಾಗಿಸಿಕೊಂಡು ಅಧಿಕಾರ ನಡೆಸಿದ್ದಾರೆ. ಆರ್ಥಿಕ ವ್ಯವಸ್ಥೆ ಹದಗೆಡಲು ಬಿಜೆಪಿಯ ನೋಟ್‌ ಅಮಾನ್ಯಕರಣವೇ ಕಾರಣವಾಗಿದೆ. ಇದರಿಂದ ಬಡವರ, ರೈತರು, ಮಹಿಳೆಯರು, ಯುವಕರ ಹಿತ ಕಾಯಲಿಲ್ಲ. ಜನವಿರೋಧಿ  ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಆದ್ದರಿಂದ ಈ ಬಾರಿಯ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾದರೆ
ಕಾಂಗ್ರೆಸ್‌ ಅಭ್ಯರ್ಥಿ ವೀಣಾ ಕಾಶಪ್ಪನವರ ಅವರನ್ನು ಆಯ್ಕೆ ಮಾಡಬೇಕಿದೆ.
ಉಮಾಶ್ರೀ, ಮಾಜಿ ಸಚಿವೆ
Advertisement

Udayavani is now on Telegram. Click here to join our channel and stay updated with the latest news.

Next