ಇಳಕಲ್ಲ: ಹುನಗುಂದ ಹಾಗೂ ಇಳಕಲ್ಲ ತಾಲೂಕಿನ ಗ್ರಾಮ ಪಂಚಾಯತಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದು, ಬಿಜೆಪಿ ಹೀನಾಯ ಸೋಲು ಅನುಭವಿಸಿದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಪಟ್ಟಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುನಗುಂದ ತಾಲೂಕಿನ 14 ಗ್ರಾಮ ಪಂಚಾಯತ್‌ಗಳಲ್ಲಿ 11 ಗ್ರಾಮ ಪಂಚಾಯತ್‌ಗೆ ಚುನಾವಣೆ ನಡೆದಿದ್ದು,ಸುಮಾರು 10 ಗ್ರಾಮ ಪಂಚಾಯತ್‌ಗಳಲ್ಲಿನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳೇ ಜಯ ಸಾಧಿಸಿದ್ದಾರೆ. ಇಳಕಲ್ಲ ತಾಲೂಕಿನ16 ಗ್ರಾಮ ಪಂಚಾಯತಗಳಲ್ಲಿ ಕನಿಷ್ಠ13 ಗ್ರಾಪಂಗಳು ಕಾಂಗ್ರೆಸ್ ಬೆಂಬಲಿತರ ಪಾಲಾಗುವುದು ನಿಶ್ಚಿತ. ಎರಡು ತಾಲೂಕಿನಲ್ಲಿ ಶೇ. 90 ಕಾಂಗ್ರೆಸ್ ಪಕ್ಷದಬೆಂಬಲಿತ ಅಭ್ಯಥಿಗಳು ಜಯಭೇರಿ ಬಾರಿಸಿದ್ದಾರೆ. ಇದಕ್ಕೆ ಶಾಸಕ ದೊಡ್ಡನಗೌಡ ಪಾಟೀಲರ ದುರಾಡಳಿತವೇ ಕಾರಣ ಎಂದರು.
ಚುನಾವಣಾ ಪ್ರಚಾರದಲ್ಲಿ ನಾನು ಭಾಗವಹಿಸದಂತೆ ನನ್ನ ಹಾಗೂ ನನ್ನ ಪಕ್ಷದ ಮುಖಂಡರ ಮೇಲೆ ಅನೇಕ ಖೊಟ್ಟಿಪ್ರಕರಣ ದಾಖಲಿಸಿದ್ದರು. ಇಂತಹಗೊಡ್ಡು ಬೆದರಿಕೆಗೆ ಹೆದರುವವನಲ್ಲ. ಅಧಿ ಕಾರಿಗಳು ಶಾಸಕ ದೊಡ್ಡನಗೌಡಪಾಟೀಲರ ಏಜೆಂಟ್‌ರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮ ಪಂಚಾಯತಚುನಾವಣೆಯಲ್ಲಿ ಶಾಸಕರಿಗೆಹಿನ್ನಡೆಯಾಗಿದ್ದರಿಂದ ಕಾಂಗ್ರೆಸ್‌ಮುಖಂಡರು ಹಾಗೂ ಹುನಗುಂದತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ದೊಡ್ಡಮನಿ ಅವರ ಮೇಲೆಖೊಟ್ಟಿ ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದರು.
ವಿಪರ್ಯಾಸವೆಂದರೇ ಅವರುನಿನ್ನೆ ಊರಲ್ಲೇ ಇರಲಿಲ್ಲ. ಆದರೂ ಕೇಸ್ ಹಾಕಿರುವುದು ಇಲ್ಲಿನ ಪೊಲೀಸ್‌ಇಲಾಖೆಯ ಅಧಿ ಕಾರಿಗಳು ಶಾಸಕರಕೈಗೊಂಬೆಗಳು ಎನ್ನುವುದಕ್ಕೆ ಇದಕ್ಕಿಂತಬೇರೆ ನಿದರ್ಶನ ಬೇಕಿಲ್ಲ. ಎರಡು ತಾಲೂಕಿನಲ್ಲಿ ಪೊಲೀಸರು ಖೊಟ್ಟಿಪ್ರಕರಣ ಹಾಕುತ್ತಿರುವುದು ಕೇವಲ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಮಾತ್ರ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹುನಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರದೊಡ್ಡಮನಿ, ಮುಖಂಡರಾದ ಸಂಗಣ್ಣ ಓಲೇಕಾರ, ಬಲಕುಂದಿ ಗ್ರಾಪಂ ಮಾಜಿಅಧ್ಯಕ್ಷ ಶರಣಪ್ಪ ರಾಠೊಡ, ಶ್ರೀನಿವಾಸಗುರಂ, ದತ್ತು ಜಾಧವ, ಶಂಕರಪ್ಪ ನೆಗಲಿ, ಪರಸಪ್ಪ ವಡ್ಡರ, ಸಿದ್ದಪ್ಪ ಮಾದರ, ಮಲ್ಲಪ್ಪ ತುಂಬಗಿ ಉಪಸ್ಥಿತರಿದ್ದರು.