Advertisement

ಆಸೆ ಆಮಿಷಗಳಿಗೆ ಬಲಿಯಾಗ್ಬೇಡಿ

01:27 PM Jan 03, 2021 | Team Udayavani |

ದೇವನಹಳ್ಳಿ: ಗ್ರಾಪಂ ಚುನಾವಣೆಯಲ್ಲಿ ಆಯ್ಕೆ ಮಾಡಿರುವ ಕಾಂಗ್ರೆಸ್‌ ಬೆಂಬಲಿತಅಭ್ಯರ್ಥಿಗಳು ಮತದಾರರಆಶೋತ್ತರಗಳಿಗೆ ಸ್ಪಂದಿಸಬೇಕು. ಕೆಲವರು ಅಧಿಕಾರದ ಆಸೆಗಾಗಿ ಹಣದ ಆಮಿಷ ತೋರಬಹುದು. ಅದಕ್ಕೆ ಬಲಿಯಾಗುವುದು ಬೇಡ ಎಂದು ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ.ಮಂಜುನಾಥ್‌ ತಿಳಿಸಿದರು.

Advertisement

ತಾಲೂಕಿನ ಕನ್ನಮಂಗಲ ಗ್ರಾಪಂಸಭಾಂಗಣದಲ್ಲಿ ಕಾಂಗ್ರೆಸ್‌ ಬೆಂಬಲಿತಗ್ರಾಪಂ ಸದಸ್ಯರ ಪರಸ್ಪರ ಪರಿಚಯ ಹಾಗೂ ಅಭಿನಂದನಾ ಕಾರ್ಯಕ್ರಮದಲ್ಲಿಮಾತನಾಡಿದರು. ಕನ್ನಮಂಗಲ ಗ್ರಾಪಂನಲ್ಲಿಒಟ್ಟು 26 ಸದಸ್ಯ ಬಲವಿದ್ದು, ಅದರಲ್ಲಿ 1ಸ್ಥಾನ ಕಾಂಗ್ರೆಸ್‌ ಬೆಂಬಲಿತರು ಗೆದ್ದಿದ್ದಾರೆ.ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆಹೆಚ್ಚಿನ ಒತ್ತನ್ನು ಕೊಡಬೇಕು ಎಂದು ಸೂಚಿಸಿದರು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯಾವುದೇ ಅಭಿವೃದ್ಧಿ ಕಾರ್ಯ ಮಾಡಬೇಕಾದ್ರೆ ಸದಸ್ಯರು ಚರ್ಚೆ ಮಾಡಿ,ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಗ್ರಾಮಗಳಲ್ಲಿಶುದ್ಧ ಕುಡಿಯುವ ನೀರಿನ ಘಟಕ, ತ್ಯಾಜ್ಯನಿರ್ವಹಣೆ, ಬಯಲು ಶೌಚ ಮುಕ್ತ,ಒಳಚರಂಡಿ ವ್ಯವಸ್ಥೆ, ಪರಿಸರ ಸಂರಕ್ಷಣೆ,ಕಾಂಕ್ರೀಟ್‌ ರಸ್ತೆ, ಹೈಮಾಸ್ಟ್‌ ದೀಪ, ವಿವಿಧಕಾರ್ಯಕ್ರಮಗಳನ್ನು ಮಾಡಬೇಕು ಎಂದು ಹೇಳಿದರು.

ಒಂದೇ ಕುಟುಂಬ ಎಂದು ತಿಳಿಯಿರಿ: ನೂತನ ಗ್ರಾಪಂ ಸದಸ್ಯರು, ಗ್ರಾಪಂ ಕಚೇರಿಯ ಮೊದಲ ಹಂತಸ್ತಿನಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲುಆದ್ಯತೆ ನೀಡಬೇಕು. ಗ್ರಾಪಂ ನೂತನಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಇನ್ನೂ ಪ್ರಕಟಗೊಂಡಿಲ್ಲ. ಆಯ್ಕೆಗೊಂಡಿರುವ ಎಲ್ಲಾ ಸದಸ್ಯರುಒಂದೇ ಕುಟುಂಬದ ಸದಸ್ಯರುಎಂಬುವುದನ್ನು ಅರ್ಥ ಮಾಡಿಕೊಂಡುಕಾರ್ಯಾನ್ಮುಖರಾಗಬೇಕು ಎಂದು ಸಲಹೆ ನೀಡಿದರು.

ಕಾಲ ಬದಲಾಗಿದೆ: ಖಾದಿ ಬೋರ್ಡ್‌ ಮಾಜಿ ಅಧ್ಯಕ್ಷ ಪಟಾಲಪ್ಪ ಮಾತನಾಡಿ, 10 ವರ್ಷಗಳ ಹಿಂದೆ ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತಸದಸ್ಯರ ಅಪಹರಣ, ಒತ್ತಡ, ಬೆದರಿಕೆಮತ್ತು ಕಾಂಗ್ರೆಸ್‌ ಮುಖಂಡರ ಮನೆಗಳ ಮೇಲೆ ದಾಳಿಯಂತಹ ಕೆಟ್ಟ ಘಟನೆಗಳು ನಡೆಯುತ್ತಿತ್ತು. ಕಾಲ ಬದಲಾಗಿದೆ ಎಂದು ಹೇಳಿದರು.

Advertisement

ಗ್ರಾಪಂ ಸದಸ್ಯರಾದ ಕೆ.ಆರ್‌.ನಾಗೇಶ್‌, ಎಸ್‌.ಜಿ.ಮಂಜುನಾಥ್‌ ಮಾತನಾಡಿ,ಗ್ರಾಪಂ ಸ್ಥಳೀಯ ಸರ್ಕಾರ ಆಗಿರುವುದರಿಂದ ಮಾದರಿ ಗ್ರಾಮಗಳನ್ನಾಗಿ ಮಾಡುವಸಂಕಲ್ಪವನ್ನು ಪ್ರತಿ ಸದಸ್ಯರು ಮಾಡಬೇಕು.ಆರೋಗ್ಯ, ಶಿಕ್ಷಣ, ಸಾಮಾಜಿಕ ಭದ್ರತಾಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.

ಈ ವೇಳೆಯಲ್ಲಿ ಬಮೂಲ್‌ ಮಾಜಿ ನಿರ್ದೇಶಕ ಎ.ಸೋಮಣ್ಣ, ಕಸಬಾ ಹೋಬಳಿ ಮಾಜಿ ಅಧ್ಯಕ್ಷ ದುಬಾಯಿ ಮಂಜುನಾಥ್‌, ಗ್ರಾಪಂ ಸದಸ್ಯರಾದಸೋಮಶೇಖರ್‌, ಪವಿತ್ರಾ, ಎಂ.ರಶ್ಮಿ,ಕೆ.ಎನ್‌.ಕೃಷ್ಣಯ್ಯ, ಗೌರಮ್ಮ, ಪಿ.ಎನ್‌. ಅಂಬರೀಶ್‌, ನಿಮಿತಾ, ವನಜಾಕ್ಷಮ್ಮ, ಎಸ್‌.ಜಿ.ವೆಂಕಟಸ್ವಾಮಿ, ನೇತ್ರಾವತಿ, ಮೇಘಾಶ್ರೀ, ನರಸಿಂಹಮೂರ್ತಿ,ಮಂಜುನಾಥ್‌, ಲಕ್ಷ್ಮೀಕಾಂತ್‌, ಎಸ್‌.ಜಿ.ಮಂಜುನಾಥ್‌, ನಂದಿನಿ, ಗ್ರಾಪಂ ಮಾಜಿ ಸದಸ್ಯ ಚನ್ನಕೇಶವ, ಜಿಲ್ಲಾ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಸಂದೀಪ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next