Advertisement

ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳಿಗೆ ಭರ್ಜರಿ ಗೆಲುವು

01:59 PM Jan 02, 2021 | Team Udayavani |

ಬೆಳಗಾವಿ: ಬಿಜೆಪಿಯ ಮೂವರು ಸಚಿವರಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದು, ಕಮಲಕ್ಕೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಭಾರೀ ಮುಖಭಂಗವಾಗಿದೆ.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕಾಂಗ್ರೆಸ್‌ ಪಕ್ಷದ ಚಿಕ್ಕೋಡಿಜಿಲ್ಲಾಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ ಚಿಕ್ಕೋಡಿ,ಅಥಣಿ ಸೇರಿ ಎಂಟು ವಿಧಾನಸಭಾ ಕ್ಷೇತ್ರದಲ್ಲಿ 218 ಗ್ರಾಪಂಗಳಿದ್ದು, ಅವುಗಳಲ್ಲಿ ಕಾಂಗ್ರೆಸ್‌113 ಪಂಚಾಯಿತಿಯಲ್ಲಿ ಬಹುಮತಪಡೆದರೆ, ಬಿಜೆಪಿ 79 ಗ್ರಾಪಂಗಳಲ್ಲಿ ಅಧಿಕಾರ ಪಡೆದಿದೆ. ಇನ್ನೂ 26 ಗ್ರಾಪಂಗಳಲ್ಲಿ ತಟಸ್ಥರುಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿದ್ದಾರೆ . ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ 35 ಗ್ರಾಪಂನಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿದೆ ಎಂದು ಹೇಳಿದರು.

ನಿಪ್ಪಾಣಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗ್ರಾಪಂಗಳಲ್ಲಿ, ಬಿಜೆಪಿ ಏಳರಲ್ಲಿ ಹಾಗೂಐದರಲ್ಲಿ ತಟಸ್ಥರು ಬಹುಮತ ಪಡೆದಿದ್ದಾರೆ.ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಕಾಂಗ್ರೆಸ್‌ 18ಹಾಗೂ ಬಿಜೆಪಿ ಏಳರಲ್ಲಿ ಬಹುಮತ ಪಡೆದಿದೆ. ಅಥಣಿಯಲ್ಲಿ ಕಾಂಗ್ರೆಸ್‌ 11 ರಲ್ಲಿ ಬಿಜೆಪಿ12 ರಲ್ಲಿ ಹಾಗೂ ತಟಸ್ಥರು 7 ಗ್ರಾಪಂ ಗಳಲ್ಲಿಬಹುಮತ ಪಡೆದಿದ್ದಾರೆ. ಕಾಗವಾಡ ಕ್ಷೇತ್ರದಲ್ಲಿ ಕಾಂಗ್ರೆಸ್‌ ಆರು ಗ್ರಾಪಂದಲ್ಲಿ ಮತ್ತು ಬಿಜೆಪಿ 14ರಲ್ಲಿ ಬಹುಮತ ಗಳಿಸಿವೆ. ರಾಯಬಾಗದಲ್ಲಿಕಾಂಗ್ರೆಸ್‌ ಮತ್ತು ಬಿಜೆಪಿ ತಲಾ ಎಂಟರಲ್ಲಿಬಹುಮತ ಪಡೆದಿದ್ದರೆ ತಟಸ್ಥರು 10 ರಲ್ಲಿಹೆಚ್ಚಿನ ಸ್ಥಾನ ಗಳಿಸಿದ್ದಾರೆ. ಕುಡಚಿಯಲ್ಲಿಕಾಂಗ್ರೆಸ್‌ 11 ಗ್ರಾಪಂನಲ್ಲಿ ಮತ್ತು ಬಿಜೆಪಿ ಏಳರಲ್ಲಿ ಅಧಿಕಾರ ಹಿಡಿಯಲಿದೆ. ಮೂರು ಗ್ರಾಪಂದಲ್ಲಿ ತಟಸ್ಥರು ಮೇಲುಗೈ ಸಾಧಿಸಿದ್ದಾರೆ. ಹುಕ್ಕೇರಿಯಲ್ಲಿ ಕಾಂಗ್ರೆಸ್‌ 10 ರಲ್ಲಿ ಅಧಿಕಾರಹಿಡಿಯಲಿದ್ದರೆ ಬಿಜೆಪಿ 23 ಕಡೆ ಬಹುಮತಗಳಿಸಿದೆ. ಯಮಕನಮರಡಿಯಲ್ಲಿ ಎಲ್ಲ 35ಗ್ರಾ ಪಂಗಳು ಕಾಂಗ್ರೆಸ್‌ ಪಾಲಾಗಿವೆ ಎಂದು ಚಿಂಗಳೆ ಮಾಹಿತಿ ನೀಡಿದರು.

ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 3837 ಅಭ್ಯರ್ಥಿಗಳು ಗ್ರಾಪಂಗೆಸ್ಪರ್ಧಿಸಿದ್ದರು. ಈ ಪೈಕಿ ಕಾಂಗ್ರೆಸ್‌ 1889ಬಿಜೆಪಿ 1738, ಪಕ್ಷೇತರ 210 ಜನರು ಆಯ್ಕೆಗೊಂಡಿದ್ದಾರೆ ಎಂದು ಚಿಂಗಳೆ ಹೇಳಿದರು.ಇನ್ನು ಬೆಳಗಾವಿ ಲೋಕಸಭಾ ಕ್ಷೇತ್ರವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿಬೆಳಗಾವಿ ಗ್ರಾಮೀಣ ಕ್ಷೇತ್ರದ 44ಗ್ರಾಪಂಗಳಲ್ಲಿ 33 ಗ್ರಾಪಂ. ಕಾಂಗ್ರೆಸ್‌ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಖಾನಾಪುರದಲ್ಲಿ 51 ಗ್ರಾ.ಪಂ ಪೈಕಿ 26 ಪಂಚಾಯಿತಿಯಲ್ಲಿ ಕಾಂಗ್ರೆಸ್‌ಬಹುಮತ ಪಡೆದುಕೊಂಡಿದೆ. ಕಿತ್ತೂರುವಿಧಾನಸಭಾ ಕ್ಷೇತ್ರದಲ್ಲಿ 32 ಪಂಚಾಯಿತಿಗಳಪೈಕಿ 17 ಪಂಚಾಯಿತಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಬಹುಮತ ಪಡೆದಿದ್ದಾರೆ.

ಬೈಲಹೊಂಗಲ ಕ್ಷೇತ್ರದ 27 ಗ್ರಾಪಂ ಪೈಕಿ 15 ಪಂಚಾಯಿತಿ ಕಾಂಗ್ರೆಸ್‌ ಪಾಲಾಗಿವೆ. ಸವದತ್ತಿ ವಿಧಾನಸಭಾ ಕ್ಷೇತ್ರದ 28 ಗ್ರಾಪಂ ಪೈಕಿ 15ಪಂಚಾಯಿತಿಗಳು ಕಾಂಗ್ರೆಸ್‌ ತೆಕ್ಕೆಗೆ ಸೇರಿವೆ.ಮೂರು ಗ್ರಾಪಂಗಳಲ್ಲಿ ಸಮಾನ ಸ್ಥಿತಿ ಇದೆಎಂದು ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷವಿನಯ ನಾವಲಗಟ್ಟಿ ಮಾಹಿತಿ ನೀಡಿದರು. ರಾಮದುರ್ಗ ಕ್ಷೇತದ 33 ಪಂಚಾಯಿತಿಗಳಪೈಕಿ, 20 ಗ್ರಾಪಂ ಕೈ ಸೇರಿವೆ. ಗೋಕಾಕ ಮತ್ತುಅರಭಾವಿ ಕ್ಷೇತ್ರದಲ್ಲಿ ಯಾವುದೇ ಗ್ರಾಮಪಂಚಾಯಿತಿಗಳಲ್ಲಿ ಕಾಂಗ್ರೆಸ್‌ ಬಹುಮತಪಡೆದಿಲ್ಲ. ಆದರೆ ಅಲ್ಲಿಯೂ ಕಾಂಗ್ರೆಸ್‌ಬೆಂಬಲಿತ ಎರಡು, ಮೂರರಂತೆ ಅಭ್ಯರ್ಥಿಗಳು ಗೆಲುವು ಪಡೆದಿದ್ದಾರೆ ಎಂದು ಹೇಳಿದರು.

Advertisement

ಗ್ರಾಪಂ ಸದಸ್ಯರು ಕಾಂಗ್ರೆಸ್‌ ಗೆ ಸೇರ್ಪಡೆ: ಇದೇ ಸಂದರ್ಭದಲ್ಲಿ ಬಂಬರಗಾ ಗ್ರಾಮಪಂಚಾಯತಿಗೆ ನೂತನವಾಗಿ ಆಯ್ಕೆಯಾದ ಪಕ್ಷೇತರ ಸದಸ್ಯರು ಶಾಸಕ ಸತೀಶ ಜಾರಕಿಹೊಳಿನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಜಿಪಂ ಸದಸ್ಯ ಸಿದ್ದು ಸುಣಗಾರ, ರಾಮಣ್ಣ ಗುಳ್ಳಿ, ಸುರೇಶ ನಾಯ್ಕ, ಭೀಮಗೌಡ ಪಾಟೀಲ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next