Advertisement

ಜ. 25ರ ಬಂದ್ ಹಿಂದೆ “ಕೈವಾಡ”ವೇಕೆ? ಬಿಎಸ್ ವೈ, ಸಿಎಂ ಹೇಳೋದೇನು!

04:56 PM Jan 22, 2018 | Sharanya Alva |

ಬೆಂಗಳೂರು/ಮೈಸೂರು/ಹುಬ್ಬಳ್ಳಿ: ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ವಾಟಾಳ್ ನಾಗರಾಜ್ ಜ.25ರಂದು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಕನ್ನಡ ಪರ ಸಂಘಟನೆಗಳಲ್ಲಿಯೇ ಅಪಸ್ವರ ತಲೆದೋರಿದ್ದು, ಮತ್ತೊಂದೆಡೆ ಕರ್ನಾಟಕ ಬಂದ್ ಮುಖ್ಯಮಂತ್ರಿ ಸಿದ್ದರಾಮಯ್ಯ(ಸರ್ಕಾರಿ) ಪ್ರಾಯೋಜಿತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಆರ್.ಅಶೋಕ್ ಆರೋಪಿಸಿದ್ದಾರೆ.

Advertisement

ಜನವರಿ 25ರಂದು ಬೆಂಗಳೂರಿನಲ್ಲಿ ಬಿಜೆಪಿ ಪರಿವರ್ತನಾ ಸಮಾವೇಶ ಇದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್ ಗೆ ಸಿದ್ದರಾಮಯ್ಯನವರು ಕುಮ್ಮಕ್ಕು ನೀಡಿದ್ದಾರೆ. ಜ.25ರಂದು ಬಂದ್ ಅಗತ್ಯವಿಲ್ಲ. ಕರ್ನಾಟಕ ಬಂದ್ ಗೆ ಬಿಜೆಪಿ ಬೆಂಬಲವಿಲ್ಲ. ಆದರೆ ಮಹದಾಯಿ ಹೋರಾಟಕ್ಕ ನಮ್ಮ ಬೆಂಬಲ ಇದೆ ಎಂದು ಬಿಎಸ್ ಯಡಿಯೂರಪ್ಪ ಮೈಸೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.

ಮೈಸೂರು ಭಾಗಕ್ಕೂ ಮಹದಾಯಿಗೂ ಏನು ಸಂಬಂಧ? ಕಾಂಗ್ರೆಸ್ ನವರಿಗೆ ಮಹದಾಯಿ ವಿವಾದ ಬಗೆಹರಿಯೋದು ಬೇಕಾಗಿಲ್ಲ. ನೀರು ಬಿಡೋದು ಬೇಕಾಗಿಲ್ಲ. ಗೋವಾ ಸರ್ಕಾರ ಕುಡಿಯುವ ನೀರು ಬಿಡಲು ಸಿದ್ಧ ಎಂದಿದೆ. ಆದರೆ ಗೋವಾದಲ್ಲಿ ಕಾಂಗ್ರೆಸ್ಸಿಗರೇ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ದೂರಿದರು.

ಇದು ಮುಖ್ಯಮಂತ್ರಿ ಪ್ರಾಯೋಜಿತ ಬಂದ್: ಶೆಟ್ಟರ್

ಜನವರಿ 25ರ ಕರ್ನಾಟಕ ಬಂದ್ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಾಯೋಜಿತವಾಗಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಮಹದಾಯಿ ವಿಚಾರದಲ್ಲಿ ರಾಹುಲ್ ಗಾಂಧಿ ಪ್ರತಿಕ್ರಿಯಿಸಿಲ್ಲ. ಈ ಬಗ್ಗೆ ಸರ್ವಪಕ್ಷ ಸಭೆಗೂ ಮೊದಲು ಕಾಂಗ್ರೆಸ್ ಮಹದಾಯಿ ವಿಚಾರದಲ್ಲಿ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಹೇಳಿದರು.

Advertisement

ಬಿಜೆಪಿ ಸರ್ಕಾರವಿದ್ದಾಗ ಇವರ ಮಾತು ಕೇಳಿದ್ರಾ?

ಬಿಜೆಪಿ ಸರ್ಕಾರವಿದ್ದಾಗ ಇವರ ಮಾತು ಕೇಳಿದ್ರಾ? ಸರ್ಕಾರ ಏಕೆ ಕರ್ನಾಟಕ ಬಂದ್ ಮಾಡಿಸುತ್ತೆ? ಬಂದ್ ಮಾಡಿದ್ರೆ ಕೋಟ್ಯಂತರ ರೂ. ನಷ್ಟವಾಗುತ್ತೆ, ಜನರಿಗೆ ತೊಂದರೆಯಾಗುತ್ತೆ. ಬಿಜೆಪಿಗರಿಗೆ ಸಾಮಾನ್ಯ ಜ್ಞಾನ, ಬುದ್ಧಿ ಇಲ್ವಾ? ಇದೆಲ್ಲಾ ಆಧಾರ ರಹಿತ ಹೇಳಿಕೆಗಳು…ಇದು ಬೆಂಗಳೂರಿನಲ್ಲಿ ಕರ್ನಾಟಕ ಬಂದ್ ಸರ್ಕಾರಿ ಪ್ರಾಯೋಜಿತ ಎಂಬ ಬಿಜೆಪಿ ಮುಖಂಡರ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ನೀಡಿದ ಪ್ರತಿಕ್ರಿಯೆ.

ಕನ್ನಡ ಸಂಘಟನೆಗಳು ಸರ್ಕಾರದ ಮಾತು ಕೇಳ್ತಾವೇನ್ರಿ? ಬೇಕಿದ್ದರೆ ಸಂಘಟನೆಗಳ ಹತ್ತಿರ ಬಿಜೆಪಿ ಮುಖಂಡರೇ ಮಾತನಾಡಲಿ. ಎಲ್ಲವನ್ನೂ ರಾಜಕೀಯದ ಕನ್ನಡ ಹಾಕಿ ನೋಡಬಾರದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next