Advertisement

ಬೂತ್‌ ಮಟ್ಟದಲ್ಲಿ ಕಾಂಗ್ರೆಸ್‌ ಬಲವರ್ಧನೆ ಶ್ರಮಿಸಿ:ಶಾಸಕ ರಾಜಾ ವೆಂಕಟಪ್ಪ

05:57 PM Sep 18, 2021 | Team Udayavani |

ಸುರಪುರ: ಕೇತ್ರದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೂತ್‌ ಮಟ್ಟದಿಂದ ಬಲವರ್ಧನೆಗೊಳಿಸಲು ಕಾರ್ಯಕರ್ತರು ಶ್ರಮಿಸಬೇಕು ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಬೇಕು. ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು.

Advertisement

ತಾಲೂಕಿನ ತಿಂಥಣಿ ಮತ್ತು ದೇವಾಪುರ ಗ್ರಾಮಗಳಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ನ ಪ್ರಜಾ ಪ್ರತಿನಿಧಿ ಪಂಚಾಯಿತಿ ಕಮಿಟಿ ಸಭೆಯಲ್ಲಿ ಅವರು ಮಾತನಾಡಿ, ಬಿಜೆಪಿ ಬಣ್ಣದ ಮಾತಿಗೆ ಮರುಳಾಗಬಾರದು. ಬಿಜೆಪಿ ಸರಕಾರ ಮಾಡುತ್ತಿರುವ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಜನ ವಿರೋಧಿ, ರೈತ ವಿರೋಧಿ ಭ್ರಷ್ಟ ಸರಕಾರಕ್ಕೆ ಮುಂದಿನ ಚುನಾವಣೆಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ ಮಾತನಾಡಿದರು. ಇದೇ ವೇಳೆ ಬಸವಂತ್ರಾಯ ಗುತ್ತಿ, ಕೃಷ್ಣಾ ಕಂಡಕ್ಟರ್‌, ನಾರಾಯಣ ಸುಗಂ, ಸಾಯಬಣ್ಣ
ಕಂಡಕ್ಟರ್‌ ‌ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಎಪಿಎಂಸಿ ಸದಸ್ಯ ಮಲ್ಲಣ್ಣ ಸಾಹುಕಾರ ಮುಧೋಳ, ಮುಖಂಡರಾದ ಬಸವರಾಜ ಬಾಕ್ಲಿ, ಬಸನಗೌಡ ಪಾಟೀಲ್‌, ನಂದನಗೌಡ ಪಾಟೀಲ್‌, ಹಣಮಂತ್ರಾಯ ಮಕಾಶಿ, ಮಾರ್ಥಂಡ ಪೂಜಾರಿ, ಯೂಸೂಫ್‌ ಕಂಡಕ್ಟರ್‌, ಭೀಮರಾಯ ಶಿಕಾರಿ, ಶರಣಗೌಡ ಬಿರಾದಾರ್‌, ಗೋಪಾಲ ಹಾವಿನಾಳ, ರಂಗಪ್ಪ ಎಮ್ಮಿ, ದೇವ ಬಾಗ್ಲಿ, ವೀರೇಶ ಮುಷ್ಠಳ್ಳಿ, ಲಿಂಗೋಜಿರಾವ್‌ ದಳಪತಿ, ಚನ್ನಪ್ಪಗೌಡ, ಶರಣಗೌಡ ದೇವಾಪುರ, ಹುಸೇನ್‌ ವಠಾರ, ಸಂತೋಷ ವಿಶ್ವಕರ್ಮ, ಬಸವಂತ್ರಾಯ ಶೆಳ್ಳಗಿ, ಪ್ರಾಣೇಶ ಬಡಿಗೇರ್‌, ಸಾಯಬಣ್ಣ ಕಂಡಕ್ಟರ್‌, ಗಚ್ಚಪ್ಪ ಪೂಜಾರಿ, ಕಾಶಪ್ಪ ತಳವಾರ ಇದ್ದರು.

ತಿಂಥಣಿ ಸಭೆ: ತಾಲೂಕಿನ ತಿಂಥಣಿಗ್ರಾಮದಲ್ಲಿಯೂ ಕಾಂಗ್ರೆಸ್‌ನ ಪ್ರಜಾ ಪ್ರತಿನಿಧಿ ಪಂಚಾಯಿತಿ ಕಮಿಟಿ ಸಭೆ ಜರುಗಿತು. ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿದರು. ಪಕ್ಷದ ಮುಖಂಡರಾದ ಮಾನಯ್ಯ ಬಂಡೋಳ್ಳಿ, ಶರಣಗೌಡ ಬಂಡೋಳಿ, ಸಲೀಂಸಾಬ್‌ ತಿಂಥಣಿ, ದ್ಯಾವಪ್ಪ ಭೀಮಣ್ಣ, ಕವಲದಾರ್‌, ತಿಪ್ಪಣ್ಣ ಕುರ್ಲೆ, ಮಲ್ಲಿಕಾರ್ಜುನ, ಮೊಹ್ಮದ್‌ ಅಲಿ ಇದ್ದರು. ದೇವಾಪುರ ಮತ್ತು ತಿಂಥಣಿ ಗ್ರಾಮಗಳಲ್ಲಿ ನಡೆದ ಸಭೆಯಲ್ಲಿ ಆಯಾ ಗ್ರಾಪಂ ವ್ಯಾಪ್ತಿಯ ಮುಖಂಡರು ಮತ್ತು ಕಾರ್ಯಕರ್ತರು ಭಾಗಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next