Advertisement

ರಾಹುಲ್‌ಗೆ ಕಾಂಗ್ರೆಸ್‌ ಚುಕ್ಕಾಣಿ; ಈಗ ಅಧಿಕೃತ

07:00 AM Dec 12, 2017 | Team Udayavani |

ಹೊಸದಿಲ್ಲಿ: ನಿರೀಕ್ಷೆಯಂತೆ, ಕಾಂಗ್ರೆಸ್‌ ಉಪಾಧ್ಯಕ್ಷರಾಗಿದ್ದ ರಾಹುಲ್‌ ಗಾಂಧಿ, ಪಕ್ಷದ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಈ ಮೂಲಕ, ಕಳೆದ 19 ವರ್ಷಗಳಿಂದ ಅಧ್ಯಕ್ಷ ಸ್ಥಾನದಲ್ಲಿದ್ದ ಸೋನಿಯಾ ಗಾಂಧಿ ನಂತರ, ಗಾಂಧಿ-ನೆಹರೂ ಕುಟುಂಬದ ಐದನೇ ತಲೆ ಮಾರಿನ ವ್ಯಕ್ತಿಯೊಬ್ಬರು ಅಧ್ಯಕ್ಷ ಪಟ್ಟಕ್ಕೇರಿದಂತಾಗಿದೆ. 

Advertisement

ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದ ಕಾಂಗ್ರೆಸ್‌ ಚುನಾವಣಾ ಪ್ರಾಧಿಕಾರದ (ಸಿಇಎ) ಅಧ್ಯಕ್ಷ ಮುಲ್ಲಪಲ್ಲಿ ರಾಮಚಂದ್ರನ್‌, “”ರಾಹುಲ್‌ ಗಾಂಧಿಯವ ರನ್ನು ಬೆಂಬಲಿಸಿ ಸುಮಾರು 89 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ನಾಮಪತ್ರಗಳನ್ನು ಹಿಂಪಡೆಯುವ ಗಡುವು ಮುಗಿದು ಹೋಗಿ ರು ವುದರಿಂದ ಹಾಗೂ ಕಣದಲ್ಲಿ ರಾಹುಲ್‌ ಗಾಂಧಿಯೊಬ್ಬರೇ ಅಭ್ಯರ್ಥಿಯಾಗಿರುವುದ ರಿಂದ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ” ಎಂದರಲ್ಲದೆ, “”16ರಂದು ರಾಹುಲ್‌, ತಮ್ಮ ಅಧ್ಯಕ್ಷ ಪದವಿಯ ಅಧಿಕೃತ ಪ್ರಮಾಣ ಪತ್ರ ಪಡೆಯಲಿದ್ದಾರೆ” ಎಂದು ಹೇಳಿದ್ದಾರೆ. 

ಮೋದಿ ಅಭಿನಂದನೆ: ಕಾಂಗ್ರೆಸ್‌ ಅಧ್ಯಕ್ಷರಾಗಿ ರಾಹುಲ್‌ ಹೆಸರು ಅಧಿಕೃತವಾಗಿ ಘೋಷಣೆ ಮಾಡುತ್ತಲೇ ಟ್ವೀಟ್‌ ಮಾಡಿರುವ ಪ್ರಧಾನಿ ಮೋದಿ, ರಾಹುಲ್‌ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅವರ ಅಧ್ಯûಾವಧಿಯು ಅವರಿಗೆ ಫ‌ಲಪ್ರದವಾಗಿರಲಿ ಎಂದು ಹಾರೈಸಿದ್ದಾರೆ. 

ಮತ್ತೆ ಸಿಡಿದೆದ್ದ ಶೆಹಜಾದ್‌ 
ಕಾಂಗ್ರೆಸ್‌ ಅಧ್ಯಕ್ಷ ಗಿರಿಗೆ ರಾಹುಲ್‌ ಏರುವು ದನ್ನು ಆರಂಭದಿಂದಲೂ ವಿರೋ ಧಿಸುತ್ತಾ ಬಂದಿದ್ದ ಮಹಾರಾಷ್ಟ್ರ ಕಾಂಗ್ರೆಸ್‌ನ ಮಾಜಿ ಕಾರ್ಯದರ್ಶಿ ಶೆಹಜಾದ್‌ ಪೂನಾವಾಲ, ರಾಹುಲ್‌ ಅವರ ಅಧ್ಯಕ್ಷಗಿರಿ ಅಧಿಕೃತವಾಗಿ ಘೋಷಣೆಯಾಗುತ್ತಲೇ ಮತ್ತೆ ಕಿಡಿಕಾರಿ ದ್ದಾರೆ. ರಾಹುಲ್‌ ಅವರನ್ನು “ಅಸಾಂವಿಧಾ ನಿಕ ಪಟ್ಟದ ಅರಸ’ ಎಂದು ವಿಶ್ಲೇಷಿಸಿರುವ ಅವರು, ಆಯ್ಕೆ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದಾಗಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next