Advertisement

ಕಾಂಗ್ರೆಸ್ ಮುಸಲ್ಮಾನರ ಮನದಲ್ಲಿ ವಿಷ ಬೀಜ ಬಿತ್ತುತ್ತಿದೆ: ಡಿ.ಹೆಚ್. ಶಂಕರಮೂರ್ತಿ

09:46 AM Dec 19, 2019 | Team Udayavani |

ಶಿವಮೊಗ್ಗ: ಅಮಾಯಕ ಮುಸಲ್ಮಾನರ ಮನದಲ್ಲಿ ವಿಷ ಬೀಜ ಬಿತ್ತುವ ಕೆಲಸವಾಗುತ್ತಿದೆ. ದೇಶದ ಜನರು ಈ ಕಾಯ್ದೆಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬಿಜೆಪಿ ಹಿರಿಯ ಮುಖಂಡ ,ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಹೇಳಿದ್ದಾರೆ.

Advertisement

ಶಿವಮೊಗ್ಗದಲ್ಲಿ ಪೌರತ್ವ ಕಾಯ್ದೆ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಇವರು ಸಮಾಜ ಒಡೆಯುವ ಮತ್ತು ಒಂದು ಕೋಮಿಗೆ ಸೀಮಿತಗೊಳಿಸಿ ಕೋಮು ಸೌಹಾರ್ಧತೆ ಕದಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ ಎಂದು ಹರಿಹಾಯ್ದರು.

ಕಾಂಗ್ರೆಸ್ ನವರು ಮೊದಲು ಈ ಕಾಯ್ದೆಯನ್ನು ಅರ್ಥ ಮಾಡಿಕೊಳ್ಳಲಿ. ಕಾಂಗ್ರೆಸ್ ನಾಯಕರು ಸುಳ್ಳು ಹೇಳುವ ಮೂಲಕ ಒಂದು ಜನಾಂಗವನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ. ಪೌರತ್ವ ಬೆಂಬಲಿಸಿ, ಎಲ್ಲರೂ ಒಟ್ಟಾಗಿ ಹೋಗೊಣ ಎಂದು ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next