ಹೊಸದಿಲ್ಲಿ: ಜೈಲು ಶಿಕ್ಷೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿದರೂ ರಾಹುಲ್ ಗಾಂಧಿ ಅವರ ಸಂಸದ ಸ್ಥಾನದ ಅನರ್ಹತೆಯನ್ನು ಇನ್ನೂ ರದ್ದು ಮಾಡದ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ. ಲೋಕಸಭೆಯ ಸ್ಪೀಕರ್ ಮತ್ತು ಪ್ರಧಾನ ಕಾರ್ಯದರ್ಶಿ ಈ ವಿಚಾರದಲ್ಲಿ ವಿಳಂಬ ತಂತ್ರಗಳನ್ನು ಅನುಸರಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
“ರಾಹುಲ್ ಗಾಂಧಿಯವರ ಶಿಕ್ಷೆಗೆ ತಡೆ ನೀಡುತ್ತಿರುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಅದರ ಅರ್ಥವೇನು? ಅಂದರೆ ಅವರು ಮತ್ತೆ ಸಂಸತ್ ಕಲಾಪದಲ್ಲಿ ಭಾಗವಹಿಸುವ ಅವಕಾಶ ಪಡೆಯುತ್ತಿದ್ದಾರೆ ಎಂದು ಅರ್ಥವಲ್ಲವೆ? ಯಾವ ವೇಗದಲ್ಲಿ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿದ್ದರೋ, ಅದೇ ವೇಗದಲ್ಲಿ ಅವರ ಅನರ್ಹತೆಯನ್ನು ರದ್ದು ಮಾಡಬೇಕು” ಎಂದು ಚೌಧರಿ ಹೇಳಿದ್ದಾರೆ.
ಶುಕ್ರವಾರ ರಾತ್ರಿ ಸ್ಪೀಕರ್ ಅವರಿಗೆ ಕರೆ ಮಾಡಿ ಈ ವಿಚಾರವನ್ನು ಪ್ರಸ್ತಾಪಿಸಿದಾಗ ಸ್ಪೀಕರ್ ಅವರನ್ನು ಇಂದು ಭೇಟಿಯಾಗುವಂತೆ ಸೂಚಿಸಿದ್ದರು. ಆದರೆ ಇಂದಿನ ಸಭೆಯಲ್ಲಿ ಈ ವಿಷಯವನ್ನು ಪ್ರಧಾನ ಕಾರ್ಯದರ್ಶಿಯನ್ನು ಭೇಟಿಯಾಗಲು ಸೂಚಿಸಿದ್ದಾರೆ. ಹೀಗಾಗಿ ಅವರು ವಿಳಂಬ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ಇದನ್ನೂ ಓದಿ:ಕೋವಿಡ್ ಬಳಿಕ ಬಿಟೌನ್ ಬಾಕ್ಸ್ ಆಫೀಸ್‌ನಲ್ಲಿ ಮೋಡಿ ಮಾಡಿದ ರೊಮ್ಯಾಂಟಿಕ್ ಸಿನಿಮಾಗಳು
“ಸ್ಪೀಕರ್ ಅವರ ಸಲಹೆಯಂತೆ ಇಂದು ಬೆಳಗ್ಗೆ ಮತ್ತೆ ಕರೆ ಮಾಡಿದೆ. ಆಗ ಅವರು ಪ್ರಧಾನ ಕಾರ್ಯದರ್ಶಿ ಅವರ ಬಳಿ ಮಾತನಾಡಲು ಹೇಳಿದರು. ಮತ್ತು ದಾಖಲೆಗಳ ನ್ನು ಒಪ್ಪಿಸಲು ಹೇಳಿದರು. ಪ್ರಧಾನ ಕಾರ್ಯದರ್ಶಿಯವರಿಗೆ ಕರೆ ಮಾಡಿದರೆ, ಅವರು ತನ್ನ ಕಚೇರಿ ಇಂದು ಮುಚ್ಚಿದೆ. ಹೀಗಾಗಿ ದಾಖಲೆಗಳನ್ನು ಸ್ಪೀಕರ್ ಗೆ ತಲುಪಿಸಿ ಎಂದರು. ನಾನು ಪತ್ರವನ್ನು ಪೋಸ್ಟ್ ಮೂಲಕ ಕಳುಹಿಸಿದ್ದೇನೆ. ಅವರು ಅದಕ್ಕೆ ಸಹಿ ಹಾಕಿದ್ದಾರೆ ಆದರೆ ಸ್ಟಾಂಪ್ ಹಾಕಿಲ್ಲ. ಕಲಾಪ ನಡೆಯಬೇಕು ಮತ್ತು ರಾಹುಲ್ ಗಾಂಧಿ ಅವರು ಮತ್ತೆ ಸದನದಲ್ಲಿ ಭಾಗವಹಿಸಬೇಕು. ನ್ಯಾಯಾಲಯದಿಂದ ಅವರಿಗೆ ಪರಿಹಾರ ದೊರೆತ ನಂತರ, ಅವರು ಹಿಂತಿರುಗಲು ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ನಾವು ಸ್ಪೀಕರ್ ಗೆ ವಿನಂತಿಸುತ್ತೇವೆ”ಎಂದು ಚೌಧರಿ ಹೇಳಿದರು.