Advertisement

ಬಿಜೆಪಿ ಆಡಳಿತದಲ್ಲಿ ಕಾನೂನು ಎಂಬುದು ಪುಸ್ತಕದ ಬದನೆಕಾಯಿಯಾಗಿದೆ: ಕಾಂಗ್ರೆಸ್

02:52 PM Jul 03, 2021 | Team Udayavani |

ಬೆಂಗಳೂರು: ವಂಚನೆ ಪ್ರಕರಣದಲ್ಲಿ ಶ್ರೀರಾಮುಲು ಅವರ ಪಿಎ ಬಂಧಿಸಿದ ವೇಗದಲ್ಲಿಯೇ ಬಿಡುಗಡೆಗೊಳಿಸಿದ್ದು ರಾಜ್ಯದಲ್ಲಿ ಪೊಲೀಸರಿಗೆ ಸ್ವತಂತ್ರವಿಲ್ಲದ ವಾತಾವರಣಕ್ಕೆ ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Advertisement

ಕರ್ನಾಟಕ ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಈ ಬಗ್ಗೆ ಟ್ವೀಟ್ ಮಾಡಲಾಗಿದ್ದು, ಸಚಿವ ಶ್ರೀರಾಮುಲು ಪಿ ಎ ವಿರುದ್ದ ಎಫ್ ಐಆರ್ ಆಗಿದ್ದರೂ ಕೋರ್ಟಿಗೆ ಹಾಜರುಪಡಿಸದೆ ಬಿಡುಗಡೆಗೊಳಿಸಿದ್ದು ಏಕೆ? ಪ್ರಭಾವ ಬೀರಿದ್ದು ಯಾರು? ಬಿಜೆಪಿ ಆಡಳಿತದಲ್ಲಿ ಕಾನೂನು ಎಂಬುದು ಪುಸ್ತಕದ ಬದನೆಕಾಯಿಯಾಗಿದೆ ಎಂದು ಟೀಕಿಸಿದೆ.

ಇದನ್ನೂ ಓದಿ:ಎರಡೂ ಡೋಸ್ ಲಸಿಕೆ ಪಡೆದರೆ ಶೇ.98ರಷ್ಟು ಕೋವಿಡ್ ಸಾವಿನಿಂದ ರಕ್ಷಣೆ: ಕೇಂದ್ರ

ಅರೆಸ್ಟ್ ಮಾಡಿ ಎಂದಾಗ ಅರೆಸ್ಟ್ ಮಾಡುವುದು, ಬಿಡುಗಡೆ ಮಾಡಿ ಎಂದಾಗ ಬಿಡುಗಡೆ ಮಾಡುವುದಕ್ಕೆ ಪೊಲೀಸರು ವಿಜಯೇಂದ್ರ ಮನೆಯ ಕಾಲಾಳುಗಳಂತಗಿದ್ದಾರೆಯೇ? ಎಫ್ ಐಆರ್ ದಾಖಲಾಗಿದ್ದರೂ ಆರೋಪಿಯನ್ನ ಬಿಡುಗಡೆ ಮಾಡುವುದರ ಹಿಂದೆ ಭ್ರಷ್ಟ ಹಣದ “ಸೆಟಲ್ಮೆಂಟ್” ನಡೆದಿರುವಂತಿದೆ. ಬಸವರಾಜ್ ಬೊಮ್ಮಾಯಿ ಅವರೇ, ಪೊಲೀಸ್ ಇಲಾಖೆ ನಿಮ್ಮ ಪಕ್ಷದ ಅನುಕೂಲಕ್ಕೆ ಇರುವುದೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next