ರಾಣಿಬೆನ್ನೂರ: ದೇಶದಲ್ಲಿ ಸುಮಾರು 50 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಇದೀಗ ಮುಳುಗುವ ಹಡಗಿನಂತಾಗಿದೆ ಎಂದು ಕ್ಷೇತ್ರದ ಉಸ್ತುವಾರಿ ಹಾಗೂ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ ಪೂಂಜಾ ಭವಿಷ್ಯ ಹೇಳಿದರು.
ಅವನತಿಯತ್ತ ಕಾಂಗ್ರೆಸ್: ಕಾಂಗ್ರೆಸ್ ಪಕ್ಷ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅಧಃಪತನಗೊಳ್ಳಲಿದೆ. ಕಾಂಗ್ರೆಸ್ ಹೀನಾಯ ಸ್ಥಿತಿಗೆ ಬರಲು ಗಾಂಧಿ ಮನೆತನದ ಕುಟುಂಬ ರಾಜಕಾರಣವೇ ಪ್ರಮುಖ ಕಾರಣ. ಆ ಪಕ್ಷದಲ್ಲಿ ಉತ್ತಮ ನಾಯಕರಿದ್ದರೂ ಅವರನ್ನು ಬದಿಗೊತ್ತಿ ಗಾಂಧಿ ಕುಟುಂಬದವರ ಹಸ್ತಕ್ಷೇಪದಿಂದ ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗಿದೆ. ಕಾಂಗ್ರೆಸ್ ಕಾರ್ಯಕರ್ತರು-ಅಭಿಮಾನಿಗಳು ಆ ಪಕ್ಷದ ಕಾರ್ಯವೈಖರಿಯಿಂದ ಬೇಸತ್ತು ಇತರ ಪಕ್ಷಗಳ ಕಡೆಗೆ ಒಲವು ತೋರುತ್ತಿದ್ದಾರೆ ಎಂದರು.
ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಪ್ರಧಾನಿ ಮೋದಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದು, ದಿನದ 18 ಗಂಟೆಗಳ ಕಾಲ ಅವಿರತ ಶ್ರಮಿಸುತ್ತಿದ್ದಾರೆ. ಮೋದಿಯವರನ್ನು ಮತ್ತೂಮ್ಮೆ ಪ್ರಧಾನಿಯನ್ನಾಗಿಸಲು ಜನರೇ ತೀರ್ಮಾನಿದ್ದಾರೆ. ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿಯವರನ್ನು ಆಯ್ಕೆ ಮಾಡಿ ಪ್ರಧಾನಿ ಮೋದಿ ಕೈ ಬಲಪಡಿಸಬೇಕು ಎಂದರು.
ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನರ, ನಗರಾಧ್ಯಕ್ಷ ಚೋಳಪ್ಪ ಕಸವಾಳ, ಶಿವಕುಮಾರ ಮುದ್ದಪ್ಪಳವರ, ಸಿದ್ದರಾಜ ಕಲಕೋಟಿ, ಸಿದ್ದಪ್ಪ ಚಿಕ್ಕಬಿದರಿ, ದೀಪಕ್ ಹರಪನಹಳ್ಳಿ ಇತರರು ಇದ್ದರು.
Advertisement
ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2014ರ ಲೋಕಸಭೆ ಚುನಾವಣೆಯಲ್ಲಿ ಕೇವಲ 40 ಸ್ಥಾನ ಪಡೆದು ಹೀನಾಯ ಸ್ಥಿತಿಗೆ ಬರುವ ಮೂಲಕ ವಿಪಕ್ಷದಲ್ಲೂ ಇರಲು ಅಸಾಧ್ಯವಾಯಿತೆಂದು ಟೀಕಿಸಿದರು.
Related Articles
Advertisement
ರಾಜ್ಯದ ಮೈತ್ರಿ ಸರ್ಕಾರ ಇದ್ದೂ ಇಲ್ಲದಂತಾಗಿದೆ. ಅಭಿವೃದ್ಧಿಯತ್ತ ಹೆಚ್ಚು ಗಮನ ಹರಿಸುತ್ತಿಲ್ಲ. ಹಳೇ ಮೈಸೂರು ಭಾಗಕ್ಕೆ ಹೆಚ್ಚು ಆದ್ಯತೆ ನೀಡುವ ಜತೆಗೆ ಉತ್ತರ ಕರ್ನಾಟಕ ನಿರ್ಲಕ್ಷಿಸಿದೆ. ಅಪ್ಪ, ಮಕ್ಕಳು, ಮೊಮ್ಮಕ್ಕಳು, ಸಂಬಂಧಿಕರು, ಸೊಸೆಯಂದಿರ ಪಕ್ಷವಾಗಿ ಜೆಡಿಎಸ್ ಅಸ್ತಿತ್ವದಲ್ಲಿದೆ. ಇಂತಹ ಸಮ್ಮಿಶ್ರ ಸರ್ಕಾರ ಬದಿಗೊತ್ತಿ ಕೇಂದ್ರದಲ್ಲಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ತರಬೇಕು.
•ಹರೀಶ ಪೂಂಜಾ,