Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಹಿಟ್ ಆ್ಯಂಡ್ ರನ್ ಮಾಡುತ್ತಿದ್ದಾರೆ. ಪಿಎಸ್ಐ ನೇಮಕಾತಿ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ದಾಖಲೆಗಳಿಲ್ಲದೆ ಆರೋಪ ಮಾಡುತ್ತಿದ್ದಾರೆ. ಒಮ್ಮೆ ಗೃಹ ಸಚಿವ, ಇನ್ನೊಮ್ಮೆ ಅಶ್ವತ್ಥ ನಾರಾಯಣ್, ಇನ್ನೊಮ್ಮೆ ಸಿಎಂ ರಾಜೀನಾಮೆ ಕೊಡಬೇಕು ಎನ್ನುತ್ತಾರೆ. ಮೊದಲು ಅರೋಪಗಳಿಗೆ ದಾಖಲಾತಿ ಕೊಡಲಿ. ದಾಖಲೆ ಇಲ್ಲದೇ ಕೇವಲ ಇವರ ಮಾತುಗಳನ್ನ ಯಾರು ಕೇಳುತ್ತಾರೆ? ಸಣ್ಣ ಖರ್ಗೆ ಅವರು ದಾಖಲಾತಿ ಇಲ್ಲದೆ ಆರೊಪ ಮಾಡುತ್ತಾರೆ. ಸಿಐಡಿ ಅವರು ನೋಟಿಸ್ ಕೊಟ್ಟಿದ್ದಾರೆ, ಅಲ್ಲಿ ಹೋಗಿ ದಾಖಲಾತಿ ಕೊಡಲಿ. ಆಧಾರ ರಹಿತ ಆರೋಪ ಅವರ ಬದ್ದತೆಯನ್ನು ತೋರಿಸುತ್ತದೆ ಎಂದರು.
Related Articles
Advertisement
ಡಿಸಿಎಂ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ನಾನು ಯಾವುದನ್ನೂ ಅಪೇಕ್ಷೆ ಪಟ್ಟಿಲ್ಲ. ಇದು ಪಕ್ಷಕ್ಕೆ ಬಿಟ್ಟ ವಿಚಾರ ಎಂದರು.
ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಕೊಟ್ಟೇ ಕೊಡುತ್ತೇವೆ. ನಮ್ಮ ಸರ್ಕಾರ ಕೊಟ್ಟ ಮಾತನ್ನು ನಡೆಸುತ್ತದೆ. ಸ್ವಾಮೀಜಿಗಳ ಮನವೊಲಿಕೆ ಮಾಡುತ್ತಿದ್ದೇವೆ ಎಂದು ಸಚಿವ ಶ್ರೀರಾಮುಲು ಹೇಳಿದರು.