Advertisement

ಮಳೆ ಅವಾಂತರ; 7 ಸಚಿವರು ಬಿಲ ಸೇರಿಕೊಂಡಿದ್ದೇಕೆ?: ಕಾಂಗ್ರೆಸ್ ಪ್ರಶ್ನೆ

05:52 PM Sep 05, 2022 | Team Udayavani |

ಬೆಂಗಳೂರು: ನಗರವನ್ನು ಪ್ರತಿನಿಧಿಸುವ 7 ಸಚಿವರು ಜಟ್ಕಾ ಕಟ್, ಹಲಾಲ್ ಕಟ್‌ ವಿಚಾರ ಮಾತಾಡಲು ಓಡೋಡಿ ಬರ್ತಾರೆ.ಸಾವರ್ಕರ್ ವಿಚಾರ ಮಾತಾಡಲು ಮುನ್ನುಗ್ಗುತ್ತಾರೆ. ಆದರೆ ಬೆಂಗಳೂರು ಮಳೆ ಅವಾಂತರಕ್ಕೆ ಮಾತ್ರ ಬಾಯಿ ಬಿಡದೆ ಬಿಲ ಸೇರಿಕೊಂಡಿದ್ದೇಕೆ?ಬೆಂಗಳೂರಿನ ಬಗ್ಗೆ ಮಾತಾಡಲೂ ಸಹ ಸಚಿವರಿಗೆ 40% ಕಮಿಷನ್ ಕೊಡಬೇಕೆ? ಎಂದು ಕಾಂಗ್ರೆಸ್ ಸರಣಿ ಟ್ವೀಟ್ ಗಳ ಮೂಲಕ ಬಿಜೆಪಿ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದೆ.

Advertisement

ಮೊನ್ನೆ ನರೇಂದ್ರ ಮೋದಿ ಅವರು ಮಂಗಳೂರಿನಲ್ಲಿ ನಿಂತು ಡಬಲ್ ಇಂಜಿನ್ ಅಭಿವೃದ್ಧಿಯಾಗುತ್ತಿದೆ ಎಂದಿದ್ದು ಇದೇನಾ ಬಸವರಾಜ್ ಬೊಮ್ಮಾಯಿ ಅವರೇ? ರಸ್ತೆ ಮೇಲೆ ನೀರು, ನೀರಿನೊಳಗೆ ರಸ್ತೆಯ ಗುಂಡಿ, ಬೆಂಗಳೂರಲ್ಲಿ ಸಂಚರಿಸುವ ವಾಹನಗಳಿಗೆ ಸಿಂಗಲ್ ಇಂಜಿನ್ ಸಾಲದು, ಡಬಲ್ ಇಂಜಿನ್‌ಗಳೇ ಬೇಕು! ಇದೇ ಬಿಜೆಪಿಯ ಡಬಲ್ ಇಂಜಿನ್ ಅಭಿವೃದ್ಧಿ! ಎಂದು ಲೇವಡಿ ಮಾಡಿದೆ.

ಇರುವ ಒಂದು ಬೆಂಗಳೂರನ್ನೇ ಸಮರ್ಪಕವಾಗಿ ನಿರ್ವಹಿಸಲಾಗದವರು 6 ಹೊಸ ನಗರವನ್ನು ನಿರ್ಮಿಸುವ ಯೋಗ್ಯತೆ ಇದೆಯೇ? ಗುರುವಿಗೆ ತಕ್ಕ ಶಿಷ್ಯ ಎಂಬಂತೆ ಮೋದಿಯವರಂತೆ ಬೊಮ್ಮಾಯಿಯವರೂ ಬಣ್ಣ ಬಣ್ಣದ ಸುಳ್ಳು ಹೇಳುವುದನ್ನು ಚೆನ್ನಾಗಿ ಕಲಿತಿದ್ದಾರೆ!ಮುಳುಗಿದ ಬೆಂಗಳೂರಿಗೆ ಪರಿಹಾರವೇನು, ಅದನ್ನು ಮೊದಲು ಹೇಳಿ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದೆ.

ಇದೇನಾ ಪಾರದರ್ಶಕತೆ?

ಬಿಜೆಪಿಯ ಸಚಿವರು, ಶಾಸಕರು ಪಾಲು ಹಂಚಿಕೊಂಡು ಪಿಎಸ್ ಐ ಹಗರಣವನ್ನು ನಡೆಸಿದ್ದಾರೆ.ರಾಜಕಾರಿಣಿಗಳ, ಸಚಿವರ ಹಸ್ತಕ್ಷೇಪವಿಲ್ಲದೆ ಇಷ್ಟು ವ್ಯಾಪಕವಾದ ಹಗರಣ ನಡೆಯಲು ಸಾಧ್ಯವೇ ಇಲ್ಲ.ಬಸವರಾಜ್ ಬೊಮ್ಮಾಯಿ ಅವರೇ, ಪಿಎಸ್ ಐ ಅಕ್ರಮದಲ್ಲಿ ನಿಮ್ಮ ಸಂಪುಟದ ಸಚಿವರ ಹೆಸರು ಬಂದರೂ ಸುಮ್ಮನಿದ್ದೀರಿ, ನಿಮ್ಮ ಶಾಸಕರ ಹೆಸರು ಬಂದರೂ ಸುಮ್ಮನಿದ್ದೀರಿ.ಇದೇನಾ ಪಾರದರ್ಶಕತೆ? ಎಂದು ಪ್ರಶ್ನಿಸಿದೆ.

Advertisement

ಪಿಎಸ್ ಐ ಹಗರಣದ ತನಿಖೆಯನ್ನು ಕೇವಲ ಅಧಿಕಾರಿಗಳ ಮಟ್ಟದಲ್ಲೇ ಮೊಟಕುಗೊಳಿಸಿ ವಿಧಾಸೌಧದಲ್ಲಿನ ಭ್ರಷ್ಟ ಕುಳಗಳು ಬಚಾವಾಗಲು ಯತ್ನಿಸಿವೆ. ಯಾರನ್ನೂ ಬಿಡುವ ಪ್ರಶ್ನೆ ಇಲ್ಲ, ನಮ್ಮದು ಪಾರದರ್ಶಕ ತನಿಖೆ ಎಂದಿದ್ದ ಬಸವರಾಜ್ ಬೊಮ್ಮಾಯಿ ಅವರೇ,ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ್ ಅವರ ತನಿಖೆ ನಡೆಸದಿರುವುದೇಕೆ?ನಿಮ್ಮ ಶಾಸಕ ಬಸವರಾಜ್ ದಡೇಸಗೂರರವರನ್ನು ತನಿಖೆ ಮಾಡುವುದು ಯಾವಾಗ? ಎಂದು ಪ್ರಶ್ನಿಸಿದೆ.

ಪಿಎಸ್‌ಐ ಹಗರಣದ ಮೂಲ ಇರುವುದು ವಿಧಾನಸೌಧದಲ್ಲೇ ಎಂಬ ನಮ್ಮ ಪ್ರತಿಪಾಧನೆಗೆ ಈಗ ಸಾಕ್ಷ್ಯ ಸಿಕ್ಕಿದೆ. ಬಿಜೆಪಿ ಶಾಸಕ ಬಸವರಾಜ್ ದಡೇಸಗೂರ ಅವರು ಅಭ್ಯರ್ಥಿಯ ಬಳಿ 15 ಲಕ್ಷ ಪಡೆದಿರುವುದು ಬೆಳಕಿಗೆ ಬಂದಿದೆ. ಈ ಅಕ್ರಮದಲ್ಲಿ ಇಡೀ ಬಿಜೆಪಿಯೇ ಬಾಗಿಯಾಗಿರುವುದು ನಿಶ್ಚಿತ. ಬಸವರಾಜ್ ಬೊಮ್ಮಾಯಿ ಅವರೇ, ತನಿಖೆ ವಿಸ್ತರಿಸಿ ಶಾಸಕರನ್ನು ಬಂಧಿಸುವುದು ಯಾವಾಗ? ಎಂದು ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next