Advertisement

Congress: ಪ್ಯಾಲೆಸ್ತೀನ್‌ ಪರ ಕಾಂಗ್ರೆಸ್‌ ನಿರ್ಣಯ: ಬಿಜೆಪಿ ಆಕ್ರೋಶ

11:53 PM Oct 10, 2023 | Team Udayavani |

ಹೊಸದಿಲ್ಲಿ: ಇಸ್ರೇಲ್‌-ಪ್ಯಾಲೆಸ್ತೀನ್‌ನ ಹಮಾಸ್‌ ಉಗ್ರರ ನಡುವೆ ಯುದ್ಧ ಏರ್ಪ ಟ್ಟಿದೆ. ಈ ಸಮಯದಲ್ಲಿ ಪ್ಯಾಲೆಸ್ತೀನ್‌ ಅನ್ನು ಬೆಂಬಲಿಸಿ ಕಾಂಗ್ರೆಸ್‌ ನಿರ್ಣಯ ತೆಗೆದುಕೊಂಡಿದೆ. ಕಾಂಗ್ರೆಸ್‌ನ ಈ ನಿರ್ಧಾರದ ಕುರಿತು ಬಿಜೆಪಿ ನಾಯಕರ ಆಕ್ರೋಶ ತೀವ್ರಗೊಂಡಿದೆ.

Advertisement

“ಉಗ್ರರನ್ನು ಕಾಂಗ್ರೆಸ್‌ ಬೆಂಬಲಿಸುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ. ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ಹೇಗೆ ದಾಳಿ ಮಾಡಿದ್ದಾರೆ ಎಂಬುದನ್ನು ವೀಡಿಯೋಗಳ ಮೂಲಕ ನಾವೆಲ್ಲ ಗಮನಿಸಿದ್ದೇವೆ. ಆದರೆ ಕಾಂಗ್ರೆಸ್‌ನವರು ಈಗಲೂ ಹಮಾಸ್‌ ಮತ್ತು ಪ್ಯಾಲೆಸ್ತೀನ್‌ ಅನ್ನು ಬೆಂಬಲಿಸುತ್ತಿ ದ್ದಾರೆ. ಈ ಮೂಲಕ ಕಾಂಗ್ರೆಸ್‌ ಭಯೋ ತ್ಪಾದನೆಗೆ ಬೆಂಬಲ ನೀಡುತ್ತಿದೆ’ ಎಂದು ಬಿಜೆಪಿ ಸಂಸದ ಮನೋಜ್‌ ತಿವಾರಿ ಕಿಡಿಕಾರಿದ್ದಾರೆ.

“ಹಮಾಸ್‌-ಇಸ್ರೇಲ್‌ ಯುದ್ಧದಲ್ಲಿ ದೇಶದ ನಿಲುವನ್ನು ಬದಿಗೊತ್ತಿ, ಕಾಂಗ್ರೆಸ್‌ ಈ ರೀತಿ ನಿರ್ಣಯ ತೆಗೆದುಕೊಂಡಿರುವುದು ದುರ ದೃಷ್ಟಕರ. ಇದರಲ್ಲೂ ಕೂಡ ಕಾಂಗ್ರೆಸ್‌ ತುಷ್ಟೀಕರಣ ರಾಜಕೀಯ ಮಾಡುತ್ತಿದೆ ಹಾಗೂ ಹಮಾಸ್‌ ಉಗ್ರರನ್ನು ಬೆಂಬಲಿಸುತ್ತಿದೆ’ ಎಂದು ಮಧ್ಯಪ್ರದೇಶ ಬಿಜೆಪಿ ಮುಖ್ಯಸ್ಥ ವಿ.ಡಿ. ಶರ್ಮಾ ಆರೋಪಿಸಿದ್ದಾರೆ.

“ಕಾಂಗ್ರೆಸ್‌ ಯಾವಾಗಲೂ ಭಯೋತ್ಪಾದನೆಯನ್ನು ಬೆಂಬಲಿಸುವ ಬಗ್ಗೆ ಯಾರಿಗಾದರೂ ಅನುಮಾನವಿದ್ದರೆ, ಅದಕ್ಕೆ ಸ್ಪಷ್ಟ ಪುರಾವೆ ಇಲ್ಲಿದೆ. ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರ ದಾಳಿಯ ಹೇಯ ಕೃತ್ಯವನ್ನು ಖಂಡಿಸುವ ಬದಲು, ಪ್ಯಾಲೆಸ್ತೀನ್‌ ಅನ್ನು ಬೆಂಬಲಿಸುವ ನಿರ್ಣಯವನ್ನು ಕಾಂಗ್ರೆಸ್‌ ಮುಸ್ಲಿಂ ಲೀಗ್‌ ತೆಗೆದುಕೊಂಡಿದೆ. ಕಾಂಗ್ರೆಸ್‌ ಅಧಿಕಾರಾವಧಿಯಲ್ಲಿ ಅಷ್ಟೊಂದು ಭಯೋತ್ಪಾದಕ ದಾಳಿಗಳು ಏಕೆ ನಡೆದವು ಎಂಬುದು ಈಗ ಸ್ಪಷ್ಟವಾಗಿದೆ’ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next