Advertisement

Congress ಮೊದಲ ಪಟ್ಟಿ ಬಿಡುಗಡೆ; ರಾಜ್ಯದ 7 ಹುರಿಯಾಳುಗಳ ಹೆಸರು ಪ್ರಕಟ

07:54 PM Mar 08, 2024 | Team Udayavani |

ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಶುಕ್ರವಾರ 39 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ.

Advertisement

ಎಐಸಿಸಿ ಕಚೇರಿಯಲ್ಲಿ ಶುಕ್ರವಾರ ರಾತ್ರಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರಾದ ಕೆ.ಸಿ. ವೇಣುಗೋಪಾಲ್, ಅಜಯ್ ಮಾಕೆನ್ ಮತ್ತು ಪವನ್ ಖೇರ್ ಅವರು ಅಭ್ಯರ್ಥಿಗಳ ಹೆಸರು ಪ್ರಕಟಿಸಿದರು.ರಾಹುಲ್ ಗಾಂಧಿ ಮತ್ತೆ ವಯನಾಡಿನಿಂದ ಸ್ಪರ್ಧಿಸಲಿದ್ದಾರೆ. ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ರಾಜನಂದಗಾಂವ್‌ನಿಂದ ಸ್ಪರ್ಧಿಸಲಿದ್ದಾರೆ.ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ ಸುಧಾಕರನ್ ಕಣ್ಣೂರಿನಿಂದ ಸ್ಪರ್ಧಿಸಲಿದ್ದಾರೆ. ತಿರುವನಂತಪುರಂ ನಿಂದ ಡಾ.ಶಶಿ ತರೂರ್ ಮತ್ತೆ ಕಣಕ್ಕಿಳಿಯಲಿದ್ದಾರೆ. ಕೆ.ಸಿ.ವೇಣುಗೋಪಾಲ್ ಆಲಪ್ಪುಳದಿಂದ ಕಣಕ್ಕಿಳಿಯಲಿದ್ದಾರೆ.

ಕರ್ನಾಟಕದ ಅಭ್ಯರ್ಥಿಗಳು

ಬೆಂಗಳೂರು ಗ್ರಾಮಾಂತರ-ಡಿ.ಕೆ.ಸುರೇಶ್ (ಹಾಲಿ ಸಂಸದ)

ವಿಜಯಪುರ(SC)-ರಾಜು ಅಲಗೂರು
ಹಾವೇರಿ- ಆನಂದ ಸ್ವಾಮಿ ಗಡ್ಡದೇವರಮಠ
ತುಮಕೂರು- ಮುದ್ದಹನುಮೇಗೌಡ
ಮಂಡ್ಯ- ಸ್ಟಾರ್ ಚಂದ್ರು (ವೆಂಕಟರಾಮೇಗೌಡ)
ಶಿವಮೊಗ್ಗ- ಗೀತಾ ಶಿವರಾಜ್ ಕುಮಾರ್
ಹಾಸನ- ಶ್ರೇಯಸ್ ಪಟೇಲ್

Advertisement

ಕಾಸರಗೋಡು- ರಾಜ್ ಮೋಹನ್

ರಾಹುಲ್ ಗಾಂಧಿ ಅವರು ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಮಣಿಪುರದಿಂದ ಆರಂಭಿಸಿ ಮುಂಬಯಿಯಲ್ಲಿ ಮುಕ್ತಾಯಗೊಳಿಸಲಿದ್ದಾರೆ. ಯಾತ್ರೆಯ ವೇಳೆ ಹಲವು ಯೋಜನೆ ಮತ್ತು ಕಾರ್ಯಕ್ರಮಗಳ ಬಗ್ಗೆ ಘೋಷಣೆ ಮಾಡಿದ್ದೇವೆ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ನಮ್ಮ ಸರಕಾರ ಗ್ಯಾರಂಟಿಗಳನ್ನು ಈಡೇರಿಸುವ ಕೆಲಸ ಮಾಡಿದೆ ಎಂದು ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next