Advertisement

ಕೇಂದ್ರದ ವೈಫಲ್ಯಗಳ ವಿರುದ್ಧ ಕಪ್ಪು ಪತ್ರ ಬಿಡುಗಡೆಗೊಳಿಸಿದ ಕಾಂಗ್ರೆಸ್; ಮೋದಿ ಅಭಿನಂದನೆ!

01:37 PM Feb 08, 2024 | Team Udayavani |

ನವದೆಹಲಿ: ಕೇಂದ್ರದ ಯುಪಿಎ ಸರ್ಕಾರದ ಆರ್ಥಿಕ ದುರುಪಯೋಗದ ಕುರಿತ ಶ್ವೇತಪತ್ರ ಬಹಿರಂಗಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿರುವ ನಡುವೆಯೇ, ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಗುರುವಾರ (ಫೆ.8) ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವೈಫಲ್ಯಗಳ ಕುರಿತ ಕಪ್ಪು ಪತ್ರ ಬಿಡುಗಡೆಗೊಳಿಸಿದರು.

Advertisement

ಇದನ್ನೂ ಓದಿ:Metro Station: ಕುಸಿದು ಬಿದ್ದ ಮೆಟ್ರೋ ನಿಲ್ದಾಣದ ಭಾಗ… ನಾಲ್ವರ ಸ್ಥಿತಿ ಗಂಭೀರ

ಕಾಂಗ್ರೆಸ್‌ ಬಿಡುಗಡೆಗೊಳಿಸಿರುವ ಕಪ್ಪು ಪತ್ರ ಎನ್‌ ಡಿಎ ಸರ್ಕಾರಕ್ಕೆ “ನಜರ್‌ ಕಾ ಕಾಲಾ ಟೀಕಾ(ದೃಷ್ಟಿ ಬೊಟ್ಟು) ಎಂದು ಬಣ್ಣಿಸಿರುವ ಪ್ರಧಾನಿ ಮೋದಿ, ರಾಜ್ಯಸಭೆಯ ಕಲಾಪದಲ್ಲಿ ಮಲ್ಲಿಕಾರ್ಜುನ್‌ ಖರ್ಗೆ ಅವರನ್ನು ಅಭಿನಂದಿಸಿದರು.

ಅವಧಿ ಮುಕ್ತಾಯ ಕಂಡಿದ್ದ ರಾಜ್ಯಸಭಾ ಸದಸ್ಯರ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಮಾತನಾಡಿದರು.

ಕಪ್ಪು ಪತ್ರ:

Advertisement

ಇವತ್ತು ನಾವು ಕೇಂದ್ರ ಸರ್ಕಾರದ ವಿರುದ್ಧ(10 ವರ್ಷ ಅನ್ಯಾಯ ಕಾಲ) ಕಪ್ಪು ಪತ್ರವನ್ನು ಬಿಡುಗಡೆಗೊಳಿಸಿದ್ದೇವೆ. ಪ್ರಧಾನಿ ಮೋದಿ ಅವರು ಲೋಕಸಭೆಯಲ್ಲಿ ಮಾತನಾಡುವಾಗ ತಮ್ಮ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳುತ್ತಾರೆ. ಅದೇ ಸಂದರ್ಭದಲ್ಲಿ ನಾವು ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡಿದರೆ ಅದಕ್ಕೆ ಯಾವುದೇ ಪ್ರಾಮುಖ್ಯತೆ ನೀಡುವುದಿಲ್ಲ. ಈ ಹಿನ್ನೆಲೆಯಲ್ಲಿ ನಾವು ಕಪ್ಪು ಪತ್ರವನ್ನು ಬಿಡುಗಡೆ ಮಾಡುವ ಮೂಲಕ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿರುವುದಾಗಿ ಮಲ್ಲಿಕಾರ್ಜುನ್‌ ಖರ್ಗೆ ಹೇಳಿದರು.

“ನಿರುದ್ಯೋಗ ದೇಶದ ಅತೀ ದೊಡ್ಡ ಸಮಸ್ಯೆಯಾಗಿದೆ. ಆದರೆ ಮೋದಿ ಸರ್ಕಾರ ಆ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಮೋದಿ ಸದಾ ಹಿಂದಿನ ಹತ್ತು ವರ್ಷಗಳ ಕಾಲದ ತುಲನೆ ಮಾಡುತ್ತಾರೆ. ಆದರೆ ಯಾವತ್ತೂ ಪಂಡಿತ್‌ ಜವಾಹರಲಾಲ್‌ ನೆಹರುಜೀ ಅವರ ಸಾಧನೆ ಬಗ್ಗೆ ಹೇಳಲ್ಲ. ಅಷ್ಟೇ ಅಲ್ಲ ಬಿಜೆಪಿ ಸರ್ಕಾರ ಇರದ ರಾಜ್ಯಗಳಿಗೆ ಕೇಂದ್ರ ಸರ್ಕಾರ ನರೇಗಾ ಹಣವನ್ನೂ ಕೊಟ್ಟಿಲ್ಲ. ನಂತರ , ನಾವು ಹಣ ಕೊಟ್ಟಿದ್ದೇವೆ, ರಾಜ್ಯ ಸರ್ಕಾರ ಅದನ್ನು ಬಳಸಿಕೊಂಡಿಲ್ಲ ಎಂದು ಗೂಬೆ ಕೂರಿಸುತ್ತಾರೆ ಎಂದು ಖರ್ಗೆ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next