ಹೊಸದಿಲ್ಲಿ : ಉಪಚುನಾವಣೆ ಭರ್ಜರಿ ಗೆಲುವಿನ ಉತ್ಸಾಹದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಸಾರ್ವತ್ರಿಕ ಚುನಾವಣೆಗೆ ನಾವು ಸಿದ್ದವಾಗಿದ್ದೇವೆ ಎಂದಿದ್ದಾರೆ.
ಹೈಕಮಾಂಡ್ ನಾಯಕರೊಂದಿಗಿನ ಮಾತುಕತೆಗಾಗಿ ದೆಹಲಿ ಪ್ರವಾಸದಲ್ಲಿರುವ ಅವರು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ನಮ್ಮ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ, ಮುಂದಿನ ಚುನಾವಣೆಗೆ ನಾವು ತಯಾರಾಗಿದ್ದೇವೆ.ಸಾರ್ವತ್ರಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು.
ಕಾರ್ಯಕರ್ತರು ಸೂಚಿಸಿದ ಅಭ್ಯರ್ಥಿಗೇ ಟಿಕೇಟ್ ನೀಡುತ್ತೇವೆ. ರಾಜ್ಯಕ್ಕೆ ಪ್ರಶಾಂತ್ ಕಿಶೋರ್ ಬರುವುದಿಲ್ಲ. ಬಿಜೆಪಿ ಉತ್ತರ ಭಾರತದಲ್ಲಿ ಮಾಡಿದ ತಂತ್ರಗಾರಿಗೆ ಇಲ್ಲಿ ನಡೆಯುವುದಿಲ್ಲ .ಕರ್ನಾಟಕಕ್ಕೆ ಪ್ರಾದೇಶಿಕ ಭಾಷೆ ಮಾತನಾಡುವವರು ಬೇಕು ಎಂದರು.
ಜೆಡಿಎಸ್ ಬಂಡಾಯ ಶಾಸಕರು ಕಾಂಗ್ರೆಸ್ ಸೇರ್ಪಡೆ ವಿಚಾರದ ಕುರಿತು ಪ್ರತಿಕ್ರಿಯಿಸಿ ಆ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ನಡೆಸಬೇಕು ಎಂದರು.
ಸಂಸದ ಪ್ರತಾಪ್ ಸಿಂಹಗೆ ರಾಜಕೀಯ ಜ್ಞಾನ ಇಲ್ಲ . ಅವರು ಗೀತಾ ಮಹದೇವ್ ಪ್ರಸಾದ್ ವಿರುದ್ಧ ನೀಡಿದ ಅಸಂಬದ್ಧ ಹೇಳಿಕೆ ಗುಂಡ್ಲಪೇಟೆ ಜನರಿಗೆ ಇಷ್ಟವಾಗಲಿಲ್ಲ ಎಂದರು.
ಮಹದಾಯಿ ನದಿ ನೀರು ಹಂಚಿಕೆ ವಿಚಾರದಲ್ಲಿ ಪ್ರಧಾನಿ ಮಧ್ಯ ಪ್ರವೇಶಿಸಲಿ. ಈಹಿಂದೆ ಇಂದಿರಾ ಗಾಂಧಿ ಅವರು ಜಲ ವಿವಾದ ಬಗೆ ಹರಿಸಿದ್ದಾರೆ, ಹಾಗೆಯೇ ಮೋದಿ ಅವರೂ ಬಗೆ ಹರಿಸಲಿ. ನಾನು ಪ್ರಧಾನಿ ಬಳಿ ನಿಯೋಗ ಕರೆದೊಯ್ದಿದ್ದೆ ಆಗ ಬಿಜೆಪಿ ನಾಯಕರು ಮಾತೇ ಆಡಲಿಲ್ಲ ಎಂದು ಕಿಡಿ ಕಾರಿದರು.