Advertisement

ಅವರಾದಿಯಲ್ಲಿ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ  

03:15 PM Mar 31, 2022 | Team Udayavani |

ಮೂಡಲಗಿ: ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಖಂಡಿಸಿ ಬೆಳಗಾವಿ ಜಿಲ್ಲಾ ಕಿಸಾನ ಕಾಂಗ್ರೆಸ್ ವತಿಯಿಂದ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಪ್ಪಗೌಡ ಲಕ್ಕಾರ ಅವರ ನೇತೃತ್ವದಲ್ಲಿ ಮೂಡಲಗಿ ತಾಲ್ಲೂಕಿನ ಅವರಾದಿ ಗ್ರಾಮದಲ್ಲಿ  ಉಟಗಿ ಅವರ ಪೆಟ್ರೋಲ್ ಪಂಪ್‍ನಲ್ಲಿ ಪ್ರತಿಭಟನೆ ನಡೆಸಿದರು.

Advertisement

ಈ ಸಂಧರ್ಭದಲ್ಲಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಕಲ್ಲಪ್ಪಗೌಡ ಲಕ್ಕಾರ ಮಾತನಾಡಿ, ಪಂಚರಾಜ್ಯಗಳ ಚುನಾವಣೆಗೋಸ್ಕರ ಬೆಲೆ ಕಡಿಮೆ ಮಾಡಿ ಮತ್ತೆ ಪೆಟ್ರೋಲ್, ಡಿಸೇಲ್ ಮತ್ತು ಅನಿಲ ಬೆಲೆಯನ್ನು ದಿನದಿಂದ ದಿನಕ್ಕೆ ಏರಿಕೆ ಮಾಡುತ್ತಿರುವುದು ಸರಿಯಲ್ಲ. ಬೆಲೆ ಕಡಿಮೆ ಮಾಡದಿದ್ದಲ್ಲಿ ದೇಶಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಕಾರ್ಯಧ್ಯಕ್ಷ ಭೀಮಶಿ ಕಾರದಗಿ ಮಾತನಾಡಿ, ರೈತರು, ಕಾರ್ಮಿಕರು, ಬಡವರು ಮತ್ತು ದುಡಿಯುವ ವರ್ಗವನ್ನು ಲೆಕ್ಕಿಸದೆ ಬೆಲೆ ಹೆಚ್ಚಿಸಿದ್ದಾರೆ. ತಕ್ಷಣ ಬೆಲೆ ಕಡಿಮೆ ಮಾಡಿ ಜನ ಸಾಮಾನ್ಯರಿಗೆ ಅನೂಕೂಲ ಮಾಡಿ ಕೊಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಿಸಾನ್ ಉಪಾಧ್ಯಕ್ಷ ಕುಮಾರ ಕಾತರಕಿ, ಕಾರ್ಯಧ್ಯಕ್ಷ ರಮೇಶ ಮೋಕಾಶಿ, ಕೌಜಲಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಗಮಣ್ಣ ಕಳಸಣ್ಣವರ, ಕೌಜಲಗಿ ಬ್ಲಾಕ್ ಯೂಥ್ ಕಾಂಗ್ರೆಸ್ ಅಧ್ಯಕ್ಷ ಮಂಜು ಮಸಗುಪ್ಪಿ ಕೌಜಲಗಿ ಬ್ಲಾಕ್ ಕಿಸಾನ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ ಕರಿಗಾರ, ಕಾಂಗ್ರೆಸ್ ಮುಖಂಡರಾದ ಗುರಪ್ಪ ಸಾಹುಕಾರ ಊಟಗಿ, ಸಂಜು ಬಾಗಿ ಹಾಗೂ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮತ್ತಿತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next