Advertisement
ರವಿವಾರ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗುತ್ತಾ ನಗರದದ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಮಹಿಳೆಯರು ರಸ್ತೆಯೇ ಮದ್ಯದಲ್ಲೇ ಒಲೆ ಹಚ್ಚಿ ಅಡುಗೆ ಮಾಡಿ ಬೆಲೆ ಏರಿಕೆ ನೀತಿ ಖಂಡಿಸಿದರು.
ಬೇಟಿ ಬಚಾವೋ ಬೇಟಿ ಪಡಾವೋ ಕೇವಲ ಹೆಸರಿಗಷ್ಟೇ ಆಗಿದೆ. ಅಡುಗೆ ಅನಿಲ ಬೆಲೆ ಏರಿಕೆಯಿಂದಾಗಿ ಇಂದು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಕಾಲೇಜುಗಳತ್ತ ಬರುವುದನ್ನು ನಿಲ್ಲಿಸಿ ಮನೆಯಲ್ಲಿಯೇ ಅಡುಗೆ ಕಾರ್ಯಗಳಿಗೆ ಸೀಮಿತವಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಸರಕಾರ ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ. ಕೇವಲ ವಿದೇಶ ಪ್ರಯಾಣದಲ್ಲಿ ಕಾಲಹರಣ ಮಾಡುತ್ತ ರಾಷ್ಟ್ರದ ಜನತೆಗೆ ಬೆಲೆ ಏರಿಕೆಯ ಬಿಸಿಯನ್ನು ಮುಟ್ಟಿಸುತ್ತಿದ್ದಾರೆ. ವಿದೇಶದಲ್ಲಿರುವ ಕಪ್ಪು ಹಣ ತರುವುದಾಗಿ ಹೇಳಿದ್ದ ಪ್ರಧಾನಿಯವರು ಒಂದೇ-ಒಂದು ನಯಾಪೈಸೆ ಸಹ ತರಲಿಕ್ಕೆ ಆಗಲಿಲ್ಲ. ಬಡವರ ಖಾತೆಗೆ 15 ಲಕ್ಷ ನೀಡುವ ಭರವಸೆಯೂ ಬಡವರ ಖಾತೆಗೆ 15 ಪೈಸೆಯೂ ಜಮಾ ಆಗಲಿಲ್ಲ. ವೈರಿ ದೇಶ ಪಾಕಿಸ್ತಾನಕ್ಕೆ ಅದರದೆ ಮಾದರಿಯಲ್ಲಿ ತಕ್ಕ ಉತ್ತರ ನೀಡುತ್ತೇನೆ ಎಂದವರು ಅದೇ ರಾಷ್ಟ್ರದಿಂದ ಸಕ್ಕರೆ ಆಮದು ಮಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆ ಎಲ್ಲ ರಂಗಗಳಲ್ಲೂ ಎನ್‌ಡಿಎ ಸರಕಾರ ಸಂಪುರ್ಣ ವೈಫಲ್ಯ ಕಂಡಿದೆ ಎಂದು ಟೀಕಿಸಿದ ಅವರು, ಮಹದಾಯಿ ನದಿ ನೀರಿನ ಸಮಸ್ಯೆ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೇ ರೈತ ವಿರೋ ಧಿ ಧೋರಣೆ ತಳೆದಿರುವುದನ್ನು ಖಂಡಿಸಿದರು.
Related Articles
Advertisement
ಕೇಂದ್ರ ಸರಕಾರದ ವಿರುದ್ಧ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿ ಕ್ಕಾರ ಕೂಗಿದರು. ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಂಜುನಾಥ ವಾಸನದ, ಭರತ ಈಟಿ, ನಾಗರಾಜ ಹದ್ಲಿ, ರಾಜು ಮನ್ನಿಕೇರಿ, ನಗರಸಭೆ ಸದಸ್ಯರಾದ ಹನಮಂತ ರಾಕುಂಪಿ, ಮಹಾಬೂಬ್ಬಿ ತುರೇದ, ಜಿಪಂ ಸದಸ್ಯೆ ಹನಮವ್ವ ಕರಿಹೊಳಿ, ಸರಸ್ವತಿ ಈಟಿ, ಮಮತಾಜ ಸೌದಾಗರ, ಮಂಜುಳಾ ಭೂಸಾರೆ, ಜಮೇಲಾ ಮನಿಯಾರ, ಅನ್ನಪೂರ್ಣ ಜುಮನಾಳ, ಜಯಾ, ವೀರೇಶ ಹುಂಡೇಕಾರ, ಮುತ್ತು ಜೋಳದ, ಡಾ.ಎ.ಡಿ.ನದಾಫ್, ನೂರ ಪಟ್ಟೆವಾಲೆ, ಸುವರ್ಣ ಗೌಡರ ಸೇರಿದಂತೆ ಮಹಿಳಾ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.