Advertisement

ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

02:06 PM Jun 14, 2021 | Team Udayavani |

ಅರಂತೋಡು : ಕೇಂದ್ರ ಸರಕಾರದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವುದರ ವಿರುದ್ಧ ಇಂದು ಕಲ್ಲುಗುಂಡಿ ಪೆಟ್ರೋಲ್ ಪಂಪ್ ಬಳಿ ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಸೋಮಶೇಖರ ಕೊಯಿಂಗಾಜೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು ಈ ಸಂದರ್ಭದಲ್ಲಿ ಕೇಂದ್ರ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿದರು .

Advertisement

ಪ್ರಮುಖ ಭಾಷಣಕಾರರಾಗಿ ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ಟಿ ಎಂ ಶಾಹೀದ್ ತೆಕ್ಕಿಲ್ ಮಾತನಾಡಿ ಪೆಟ್ರೊಲ್ ಡೀಸೆಲ್ ಬೆಲೆ ಹೇರಿಕೆಯಿಂದ ದಿನ ನಿತ್ಯ ಅಗತ್ಯ ವಸ್ತುಗಳ ಬೆಲೆ ಹೇರಿಕೆಯಾಗುತ್ತಿದ್ದು ಕೇಂದ್ರ ಮತ್ತು ರಾಜ್ಯ ಸರಕಾರದ ಕೆಟ್ಟ ನೀತಿಗಳನ್ನು ಮತ್ತು ಜನ ವಿರೋಧಿ ನೀತಿಯಿಂದ ಬಡವರು ಸಂಕಷ್ಟದಲ್ಲಿದ್ದು ಆದಷ್ಟು ಬೇಗ ಬೆಲೆ ಇಳಿಸಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಹಮ್ಮದ್ ಕುಂಞ ಗೂನಡ್ಕ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿದರು ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ ಹಮೀದ್, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಸಂಯೋಜಕರಾದ ತಾಜ್ ಮಹಮ್ಮದ್ ,ಸಂಪಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಲೆಸ್ಸಿ ಮೊನಾಲಿಸಾ,ಸದಸ್ಯರಾದ ಪಿ ಕೆ ಅಬುಶಾಲಿ,ಸುಂದರಿ ಮುಂಡಡ್ಕ ,ಜಗದೀಶ್ ರೈ,ಎಸ್ ಕೆ ಹನೀಫ,ಕೆಪಿಸಿಸಿ ಫ್ಯಾನಲಿಸ್ಟ್ ಶವಾದ್ ಗೂನಡ್ಕ ಮತ್ತು, ಕೆಪಿಸಿಸಿ ಸಾಮಾಜಿಕ ಜಾಲತಾಣದ ಪ್ರದಾನ ಕಾರ್ಯದರ್ಶಿ ರಿಯಾಜ್,ಸಾಮಾಜಿಕ ಜಾಲತಾಣದ ಕೊಡುಗು ಜಿಲ್ಲಾ ಅಧ್ಯಕ್ಷರಾದ ಸೂರಜ್ ಹುಸೂರು,ಕಾಂಗ್ರೆಸ್ ಮುಖಂಡರುಗಳಾದ ಎ ಕೆ ಇಬ್ರಾಹಿಂ,ಅಜರುದ್ದೀನ್ ಗೂನಡ್ಕ,ರಹೀಮ್ ಬೀಜದಕಟ್ಟೆ,ಅಯ್ಯುಬ್ ಗೂನಡ್ಕ,ಕಾಂತಿ ಮೋಹನ್,ನಿಜಾಮ್ ಕಲ್ಲುಗುಂಡಿ ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next