Advertisement

ಎಐಸಿಸಿ ಅಧ್ಯಕ್ಷ ಖರ್ಗೆಗೆ ನಿಂದನೆ ವಿರೋಧಿಸಿ ಶಾಸಕ ಆರಗ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

05:32 PM Aug 03, 2023 | keerthan |

ವಿಜಯಪುರ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅಸಾಂವಿಧಾನಿಕ ಶಬ್ದ ಬಳಸಿ ನಿಂದಿಸಿರುವ ಮಾಜಿ ಸಚಿವ-ಶಾಸಕ ಆರಗ ಜ್ಞಾನೇಂದ್ರ ಅವರ ವರ್ತನೆಯನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ನೇತೃತ್ವದಲ್ಲಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಗುರುವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ರಮೇಶ ಗುಬ್ಬೇವಾಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ದಲಿತ ವಿರೋಧಿ ಮನಸ್ಥಿತಿಯ ವರ್ಣಾಶ್ರಮ ಪ್ರತಿಪಾದನೆ ಮನಸ್ಥಿತಿ ಹೊಂದಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ದಿಕ್ಕಾರ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ರಮೇಶ ಗುಬ್ಬೇವಾಡ ಮಾತನಾಡಿ, ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಶೋಷಿತ ಸಮುದಾಯದ ನಾಯಕ ಎಂಬ ಕಾರಣಕ್ಕೆ ಅವರ ಬೆಳವಣಿಗೆ ಸಹಿಸದೇ ವರ್ಣಬೇಧ ಮನಸ್ಥಿತಿಯ ಆರಗ ಜ್ಞಾನೇಂದ್ರ ಅಸಾಂವಿಧಾನಿಕ ಪದ ಬಳಸಿ ನಿಂದಿಸಿದ್ದಾರೆ. ಇದು ಸಚಿವರಾಗಿ ಕೆಲಸ ಮಾಡಿದ ಆರವ ಜ್ಞಾನೇಂದ್ರ ಅವರ ಸಣ್ಣತನದ ಮನಸ್ಥಿತಿಯನ್ನು ಎತ್ತಿ ತೋರಿಸುತ್ತದೆ. ಕೂಡಲೇ ಸರ್ಕಾರ ಜ್ಞಾನೇಂದ್ರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಇದಲ್ಲದೇ ರಾಜ್ಯಪಾಲರು ಕೂಡಲೇ ಆರಗ ಜ್ಞಾನೇಂದ್ರ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂಧು ಆಗ್ರಹಿಸಿ, ದೇಶಾದ್ಯಾಂತ ದಲಿತ ಸಂಘಟನೆಗಳು, ಕಾಂಗ್ರೆಸ್ ಪಕ್ಷದಿಂದ ತೀವ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ಪರಿಶ್ರಮದಿಂದ ರಾಜಕೀಯವಾಗಿ ರಾಷ್ಟ್ರದ ಮಟ್ಟದ ವರೆಗೆ ಬೆಳೆದಿರುವ ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರ ಕಂಡ ಹಿರಿಯ ನಾಯಕರು. ಇಂಥ ನಾಯಕನನ್ನು ಮಾಜಿ ಸಚಿವ-ಹಾಲಿ ಶಾಸಕ ಆರಗ ಜ್ಞಾನೇಂದ್ರ ವೈಯಕ್ತಿಕ ನೆಲೆಯಲ್ಲಿ ನಿಂದನೆ ಮಾಡಿರುವ ಕ್ರಮ ಖಂಡನಾರ್ಹ ಎಂದು ಟೀಕಿಸಿದರು.

Advertisement

ಅರಗ ಜ್ಞಾನೇಂದ್ರ ತಮ್ಮ ನಡತೆಯಿಂದ ವರ್ಣನೀತಿ ಮನಸ್ಥಿತಿ ನಾಯಕ ಎಂಬುದನ್ನು ಮನವರಿಕೆ ಮಾಡಿಸಿದ್ದಾರೆ. ಪಕ್ಷದ ರಾಷ್ಟ್ರಾಧ್ಯಕ್ಷ ಖರ್ಗೆ ಅವರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಲ್ಲದೇ, ಅಸಂವಿದಾನಿಕ ಪದ ಬಳಕೆ ಮಾಡಿ ನಿಂದಿಸಿದ್ದಾರೆ. ಇದಲ್ಲದೇ ಕೆಪಿಸಿಸಿ ಕರ್ಯಧ್ಯಕ್ಷರಾದ ಸಚಿವ ಈಶ್ವರ ಖಂಡ್ರೆ ಅವರ ಬಗ್ಗೆಯೂ ಹಗುತ ಮಾತನಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇದಲ್ಲದೇ ಮಾಜಿ ಸಚಿವ ಗೋವಿಂದ ಕಾರಜೋಳ ಅವರು ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಸಮುದಾಯದ ಹಣ ಬಳಸಿದೆ ಎಂದು ಟೀಕಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಪರಿಶಿಷ್ಟ ಸಮುದಾಯಕ್ಕೆ ಮೀಸಲಿದ್ದ 19 ಸಾವಿರ ಕೋಟಿ ರೂ. ಅನುದಾನವನ್ನು ಬಳಸಿಕೊಂಡಾ, ಮೌನವಾಗಿದ್ದರು. ಅಧಿಕಾರ ಕಳೆದುಕೊಂಡ ಮೇಲೆ ಇವರಿಗೆ ಪಲಿತರ ಅಭಿವೃದ್ಧಿ ನೆನಪಾಗಿದೆ ಎಂದು ಟೀಕಿಸಿದರು.

ನಾಗಠಾಣ ಶಾಸಕ ವಿಠ್ಠಲ ಕಟಗದೊಂಡ ಮಾತನಾಡಿ, ಬಿಜೆಪಿ ಪಕ್ಷವೇ ಮನುವಾದಿ ಸಿದ್ಧಾಂತ ಪ್ರತಿಪಾದಿಸುತ್ತಿದ್ದು. ಆ ಪಕ್ಷದ ನಾಯಕರು ತಮ್ಮ ಮನುವಾದಿ ಧೋರಣೆಯನ್ನು ಮುಂದುವರೆಸಿದ್ದಾರೆ. ಹೀಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಂಥ ರಾಷ್ಟ್ರೀಯ ನಾಯಕರನ್ನು ಅಸಾಂವಿಧಾನಿಕ ಪದ ಬಳಸಿ ನಿಂದಿಸಿರುವ ಆರಗ ಜ್ಞಾನೇಂದ್ರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸುವಂತೆ ಆಗ್ರಹಿಸಿದರು.

ಪಕ್ಷದ ಮುಖಂಡರಾದ ವೈಜನಾಥ ಕರ್ಪೂರಮಠ, ಅಬ್ದುಲ್ ಹಮೀದ ಮುಶ್ರೀಪ್, ಸಾಹೇಬಗೌಡ ಬಿರಾದಾರ, ಭಾರತಿ ನಾವಿ ಮಾತನಾಡಿ, ಆರಗ ಜ್ಞಾನೇಂದ್ರ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು.

ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಚಾಂದಸಾಬ ಗಡಗಲಾವ, ಪರಿಶಿಷ್ಟ ಪಂಗಡದ ಜಿಲ್ಲಾಧ್ಯಕ್ಷ ಸಣ್ಣಪ್ಪ ತಳವಾರ, ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ, ರಾಜ್ಯ ಓಬಿಸಿ ಪ್ರ.ಕಾರ್ಯದರ್ಶಿ ಅಂಬಣ್ಣ ಕಲಮನಿಮ, ರಾಜೇಶ್ವರಿ ಚೋಳಕೆ, ಅಶ್ಫಕ್ ಮನಗೂಳಿ, ರಾಕೇಶ ಕಲ್ಲೂರ, ಸಂತೋಷ ಬಾಲಗಾಂವಿ, ಕೃಷ್ಣಾ ಚವ್ಹಾಣ, ಪರಸುರಾಮ ಹೊಸಮನಿ, ಭಾರತಿ ಹೊಸಮನಿ, ಹಬೀದಾ ಪಟೇಲ, ಅಸ್ಮಾ ಕಾಲೇಭಾಗ, ಮುಸ್ಕಾನ ಶಿವಣಗಿ, ಅಪ್ಪು ಪೂಜಾರಿ, ಚನ್ನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು

Advertisement

Udayavani is now on Telegram. Click here to join our channel and stay updated with the latest news.

Next