Advertisement

ತರಕಾರಿ ಮಾರಿ ಕಾಂಗ್ರೆಸ್‌ ಪ್ರತಿಭಟನೆ

01:20 PM Dec 23, 2021 | Team Udayavani |

ಬೆಳಗಾವಿ: ತರಕಾರಿ, ಬೇಳೆ, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟದ ಅಣಕು ಪ್ರದರ್ಶನ ನಡೆಸುತ್ತ ಬೆಲೆ ಏರಿಕೆ ಖಂಡಿಸಿ ರಾಜ್ಯ ಕಾಂಗ್ರೆಸ್‌ ಮಹಿಳಾ ಘಟಕದವರು ಬುಧವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು.

Advertisement

ಮಹಿಳಾ ಕಾಂಗ್ರೆಸ್‌ ಘಟಕದವರು ನಗರದ ಕಾಂಗ್ರೆಸ್‌ ಭವನದಿಂದ ಟ್ರ್ಯಾಕ್ಟರ್‌ನಲ್ಲಿ ಆಗಮಿಸಿ ನಂತರ ಅಲಾರವಾಡ ಕ್ರಾಸ್‌ದಿಂದ ಸರ್ವೀಸ್‌ರಸ್ತೆ ಮೂಲಕ ಸುವರ್ಣ ವಿಧಾನಸೌಧವರೆಗೆ ಪಾದಯಾತ್ರೆ ನಡೆಸಿದರು. ತಳ್ಳುವ ಗಾಡಿಯಲ್ಲಿ ತರಕಾರಿ ಇಟ್ಟುಕೊಂಡು ಸಿಲಿಂಡರ್‌ 1500ರೂ., ಈರುಳ್ಳಿ 150 ರೂ. ಕೆ.ಜಿ., ಅಡುಗೆ ಎಣ್ಣೆ 250 ರೂ. ಕೆ.ಜಿ., ಬೇಳೆ 150 ರೂ. ಕೆ.ಜಿ.,ಕೋತಂಬರಿ ಸೊಪ್ಪು 50 ರೂ. ಹೀಗೆ ಕೂಗುತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಅಣಕಿಸುವಮೂಲಕ ಪ್ರತಿಭಟಿಸಿದರು. ಸರ್ಕಾರ ಬೆಲೆ ಏರಿಕೆ ಮಾಡಿ ಜನಸಾಮಾನ್ಯರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿದೆ ಎಂದು ಆಪಾದಿಸಿದರು.

ಅಲಾರವಾಡ ಕ್ರಾಸ್‌ದಿಂದ ಪಾದಯಾತ್ರೆ ನಡೆಸುತ್ತ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತೆಯರ ಮಧ್ಯೆಮಾತಿನ ಚಕಮಕಿ ನಡೆಯಿತು. ಬ್ಯಾರಿಕೇಡ್‌ ತಳ್ಳಿ ಒಳ ನುಗ್ಗಲು ಯತ್ನಿಸಿದಾಗ ಕೆಲವರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.

ರಾಜ್ಯ ಘಟಕ ಅಧ್ಯಕ್ಷೆ ಪುಷ್ಪಾ ಅಮರನಾಥ ಮಾತನಾಡಿ, ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಧ್ಯಮ ವರ್ಗದ ಜನ ಜೀವನ ನಡೆಸುವುದು ಕಷ್ಟಕರವಾಗಿದೆ. ಹೀಗಾಗಿ ದಿನನಿತ್ಯಬಳಕೆ ವಸ್ತುಗಳ ಬೆಲೆ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.

ಯುವ ನಾಯಕಿ ಪ್ರಿಯಂಕಾ ಜಾರಕಿಹೊಳಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಭ್ರಷ್ಟಾಚಾರ, ಜನವಿರೋಧಿ  ನೀತಿಯಿಂದ ಜನರು ತೊಂದರೆಗೀಡಾಗಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು. ಶಾಸಕಿ ಅಂಜಲಿ ನಿಂಬಾಳಕರ್‌ಪ್ರತಿಭಟನೆಗೆ ಸಾಥ್‌ ನೀಡಿದರು. ಮುಖಂಡರಾದಜಯಶ್ರೀ ಮಾಳಗಿ, ಕಲ್ಪನಾ ದೋಶಿ, ರಕ್ಷಿತಾಈಟಿ, ಆಯೀಷಾ ಸನದಿ ಸೇರಿದಂತೆ ಮಹಿಳಾ ಕಾರ್ಯಕರ್ತೆಯರು ಇದ್ದರು

Advertisement

ಕೈ ನಾಯಕಿಯನ್ನು ಹೊತ್ತೂಯ್ದ ಖಾಕಿ ;  ಬೆಲೆ ಏರಿಕೆ ಖಂಡಿಸಿ ಮಹಿಳಾ ಕಾಂಗ್ರೆಸ್‌ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆವೇಳೆ ರಾಜ್ಯ ಘಟಕ ಅಧ್ಯಕ್ಷೆ ಪುಷ್ಪಾಅಮರನಾಥ ಅವರನ್ನು ಮಹಿಳಾಪೊಲೀಸರು ಹೊತ್ತೂಯ್ದರು. ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿಬ್ಯಾರಿಕೇಡ್‌ ತಳ್ಳಲು ಮುಂದಾದರು. ಈ ವೇಳೆ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ನಾಲ್ಕೈದು ಮಹಿಳಾ ಪೊಲೀಸರು ಸೇರಿ ಪುಷ್ಪಾ ಅವರನ್ನು ಎತ್ತುಕೊಂಡು ಹೋದರು.

Advertisement

Udayavani is now on Telegram. Click here to join our channel and stay updated with the latest news.

Next