Advertisement

ಕೇಂದ್ರದ ವಿರುದ್ಧ ಕೈ ಬೃಹತ್‌ ಟ್ರ್ಯಾಕ್ಟರ್‌ ರ್ಯಾಲಿ

04:15 PM Feb 26, 2021 | Team Udayavani |

ಗದಗ: ಮೂರು ರೈತ ವಿರೋಧಿ ಕಾನೂನುಗಳನ್ನು ಹಿಂಪಡೆಯಬೇಕು. ತೈಲ ಬೆಲೆ ಇಳಿಸಬೇಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಜಿ.ಎಸ್‌.ಪಾಟೀಲ ಮತ್ತು ಸ್ಥಳೀಯ ಶಾಸಕ ಎಚ್‌.ಕೆ.ಪಾಟೀಲ ನೇತೃತ್ವದಲ್ಲಿ ಶಹರ ಕಾಂಗ್ರೆಸ್‌ ಹಾಗೂ ಮುಳಗುಂದ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ನಗರದಲ್ಲಿ ಬೃಹತ್‌ ಟ್ರ್ಯಾಕ್ಟರ್‌ ರ್ಯಾಲಿ ನಡೆಸಲಾಯಿತು.

Advertisement

ನಗರದ ಕಾಟಲ್‌ ಸೇಲ್‌ ಸೊಸೈಟಿ ಆವರಣದಲ್ಲಿರುವ ಜಿಲ್ಲಾ ಕಾಂಗ್ರೆಸ್‌ ಕಚೇರಿಯಿಂದ ಆರಂಭಗೊಂಡ ಟ್ರ್ಯಾಕ್ಟರ್‌ ರ್ಯಾಲಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜಿಲ್ಲಾಡಳಿತ ಭವನದ ಬಳಿ ತೆರಳಿತು. ಬಳಿಕ ಜಿಲ್ಲಾ ಧಿಕಾರಿಗಳ ಮೂಲಕ ರಾಜ್ಯಪಾಲ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಮುಖಂಡರು, ದೇಶದ 62 ಕೋಟಿ ರೈತರು ತಮ್ಮ ಜೀವ ಮತ್ತು ಜೀವನಕ್ಕಾಗಿ ಕೃಷಿಯನ್ನೇ ಅವಲಂಬಿಸಿದ್ದಾರೆ. ತಮ್ಮ ಉಪಜೀವನದೊಂದಿಗೆ ದೇಶಕ್ಕೆ ಅನ್ನ ನೀಡುವ ಕೆಲಸ ಮಾಡುತ್ತಿದ್ದಾರೆ. ಆದರೆ, ಸುಗ್ರೀವಾಜ್ಞೆ ಮೂಲಕ ಕೇಂದ್ರ ಸರಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾಯ್ದೆಗಳು ರೈತರ ಪಾಲಿಗೆ ಮರಣ ಶಾಸನವಾಗಿವೆ. ಕರಾಳ ಶಾಸನಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕಳೆದ 75 ದಿನಗಳಿಂದ ಲಕ್ಷಾಂತರ ರೈತರ ಹೋರಾಟ ನಡೆಸಿದ್ದಾರೆ ಎಂದರು.

ದೆಹಲಿಯ ಮೈಕೊರೆಯುವ ಚಳಿಯನ್ನೂ ಲೆಕ್ಕಸಿದೇ ತಿಂಗಳುಗಳಿಂದ ರೈತರು ಧರಣಿ ನಡೆಸುತ್ತಿದ್ದಾರೆ. ಉತ್ತರ ಭಾರತದಲ್ಲಿ ಮೈ ಕೊರೆಯುವ ಚಳಿ, ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ಸುಮಾರು 155ಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದಾರೆ. ಆದರೆ, ಅನ್ನದಾತರ ನೋವು, ಅಳಲು, ಕಷ್ಟ ಕಾರ್ಪಣ್ಯಗಳಿಗೆ ಕಿವುಡಾಗಿ ಕೇಂದ್ರ ಸರಕಾರ ರೈತ ಚಳವಳಿಗೆ ಹಲವಾರು ಅಡೆತಡೆಗಳನ್ನೊಡ್ಡಿ ದಾಷ್ಟÂì ಮೆರೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಮಧ್ಯೆ ಸರ್ವೋತ್ಛ ನ್ಯಾಯಾಲಯ ರೈತರ ಚಳವಳಿ ವಿಚಾರವನ್ನು ಕೈಗೆತ್ತಿಕೊಂಡು ಕರಾಳ ಕಾನೂನುಗಳಿಗೆ ತಡೆಯಾಜ್ಞೆ ನೀಡಿ, ವರದಿ ನೀಡಲು ಸಮಿತಿ ರಚಿಸಿದೆ. ಈ ಮೂಲಕ ಸರಕಾರದ ಹಠಮಾರಿ ಧೋರಣೆಗೆ ಛೀಮಾರಿ ಹಾಕಿದಂತಾಗಿದೆ. ಆದರೂ, ಕೇಂದ್ರ ಸರಕಾರ ಕರಾಳ ಕಾಯ್ದೆಗಳನ್ನು ರದ್ದುಗೊಳಿಸುತ್ತಿಲ್ಲ ಎಂದು ದೂರಿದರು.

ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ಮಧ್ಯ ಪ್ರವೇಶಿಸಿ, ರೈತರ ಕೂಗು ಆಲಿಸಬೇಕು. ಮೂರು ರೈತ ವಿರೋಧಿ  ಕಾಯ್ದೆಗಳನ್ನು ಹಿಂಪಡೆಯಲಾಗಿದೆ ಎಂದು ತಕ್ಷಣವೇ ಪ್ರಧಾನಿ ಮೋದಿ ಅವರು ಘೋಷಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನದ ಮಾತು ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಈ ಮೂರು ಕರಾಳ ಕಾಯ್ದೆಗಳು ಸರಿಯಾಗಿಯೇ ಇವೆ ಎಂದು ಹೇಳಿದ್ದಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಚಳವಳಿ ನಿರತ ರೈತರು ಭಯೋತ್ಪಾದಕರು ಎಂದಿರುವ ಹರ್ಯಾಣ ಮುಖ್ಯಮಂತ್ರಿ ಮನೋ ಹರ್‌ ಲಾಲ್‌ ಖಟ್ಟರ್‌ ಅವರೂ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು. ರೈತರ ವಿರುದ್ಧ ದಾಖಲಿಸಿರುವ 12000 ಮೊಕದ್ದಮೆಗಳನ್ನು ವಾಪಾಸ್‌ ತೆಗೆದುಕೊಳ್ಳಬೇಕು. ಜೊತೆಗೆ ಬೆಂಬಲ ಬೆಲೆಯನ್ನು ಕಡ್ಡಾಯವನ್ನಾಗಿಸಿ, ಅದರ ಉಲ್ಲಂಘನೆಯನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸುಮಾರು 500 ಕ್ಕೂ ಹೆಚ್ಚು ಟ್ರ್ಯಾಕ್ಟರ್‌ ಗಳೊಂದಿಗೆ ರೈತರು ಪಾಲ್ಗೊಂಡಿದ್ದರು.

ಡಿಸಿ ವಿರುದ್ಧ “ಕೈ’ ನಾಯಕರು ಗರಂ: ಕಾಂಗ್ರೆಸ್‌ ಟ್ರ್ಯಾಕ್ಟರ್‌ ರ್ಯಾಲಿಯ ಭಾಗವಾಗಿ ಮನವಿ ಸಲ್ಲಿಕೆಗೆ ತೆರಳಿದ್ದ ಪ್ರತಿಭಟನಾಕಾರರನ್ನು ಪ್ರವೇಶ ದ್ವಾರದಲ್ಲೇ ತಡೆದಿದ್ದು ಮತ್ತು ಜಿಲ್ಲಾ ಧಿಕಾರಿಗಳು ಊಟಕ್ಕೆ ತೆರಳಿದ್ದರಿಂದ ಕೆರಳಿದ ಕಾಂಗ್ರೆಸ್‌ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಟ್ರ್ಯಾಕ್ಟರ್‌ ರ್ಯಾಲಿ

Advertisement

ಜಿಲ್ಲಾಡಳಿತಕ್ಕೆ ತಲುಪುತ್ತಿದ್ದಂತೆ ಮೇನ್‌ ಗೇಟ್‌  ಬಳಿಯೇ ತಡೆದ ಪೊಲೀಸರು, ಜಿಲ್ಲಾಧಿಕಾರಿಗಳನ್ನು ಗೇಟ್‌ ಬಳಿಗೇ ಕರೆತರುತ್ತೇವೆ ಎಂದು ತಿಳಿಸಿದರು. ಅದಕ್ಕೆ ಒಪ್ಪದ ಕಾಂಗ್ರೆಸ್‌ ನಾಯಕರು, ಒಳಗೆ ತೆರಳಿ ಮನವಿ ಸಲ್ಲಿಸುವು ದಾಗಿ ಪಟ್ಟು ಹಿಡಿದರು. ಇದರಿಂದಾಗಿ ಗೇಟ್‌ ತೆರೆಯುತ್ತಿದ್ದಂತೆ ಶಾಸಕ ಎಚ್‌.ಕೆ.ಪಾಟೀಲ ಮತ್ತಿತರರು ಟ್ರ್ಯಾಕ್ಟರ್‌ಗಳನ್ನು ಒಳಗೆ ನುಗ್ಗಿಸಿ ದರು. ಬಳಿಕ ಮನವಿ ಸಲ್ಲಿಸಲು ತೆರಳು ವೇಳೆಗೆ ಜಿಲ್ಲಾ ಧಿಕಾರ ಎಂ.ಸುಂದರೇಶ ಬಾಬು ಮಧ್ಯಾಹ್ನ ಊಟದ ವಿರಾಮಕ್ಕೆ ತೆರಳಿದ್ದರು. ಇದರಿಂದ ತೀವ್ರ ಅಸಮಾಧಾನಗೊಂಡ ಕೈ ನಾಯಕರು ಡಿಸಿ‌ ಕಚೇರಿಯಲ್ಲಿ ಕಾದು ಕುಳಿತು, ಮನವಿ ಸಲ್ಲಿಸಿದರು. ಅಲ್ಲದೇ, ಜಿಲ್ಲಾ ಧಿಕಾರಿ ಗಳ ನಡೆಯನ್ನು ತೀವ್ರವಾಗಿ ಖಂಡಿಸಿದರು.

ಟ್ರ್ಯಾಕ್ಟರ್‌ ಓಡಿಸಿದ ಎಚ್ಕೆ: ರ್ಯಾಲಿಯಲ್ಲಿ ಮಹಾತ್ಮಗಾಂಧಿ  ವೃತ್ತದಿಂದ ಜಿಲ್ಲಾಡಳಿತ ಭವನದ ವರೆಗೆ ಶಾಸಕ ಎಚ್‌.ಕೆ.ಪಾಟೀಲ ರೈತರೊಂದಿಗೆ ಟ್ರ್ಯಾಕ್ಟರ್‌ ಚಲಾಯಿಸುವ ಮೂಲಕ ಗಮನ ಸೆಳೆದರು. ಸುಮಾರು 4 ಕಿ.ಮೀ. ದೂರದ ವರೆಗೆ ರೈತರ ಜೊತೆ ಜೊತೆಗೆ ಟ್ರ್ಯಾಕ್ಟರ್‌ ಓಡಿಸಿ ರ್ಯಾಲಿಗೆ ಬಲ ತುಂಬಿದರು.

Advertisement

Udayavani is now on Telegram. Click here to join our channel and stay updated with the latest news.

Next