Advertisement
ನಗರದ ಗಾಂಧಿ ವನದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವೈಫಲ್ಯದ ವಿರುದ್ಧ ಕೆಪಿಸಿಸಿ ಸೂಚನೆಯಂತೆ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಇಂಡಲಗಿ ಗ್ರಾಪಂ ಜನತೆ 3 ವರ್ಷಕ್ಕೂಮ್ಮೆ ಬರುವ ಜಾತ್ರೆ ನಂತರ ಪಂಚಾಯತ್ ರಾಜ್ ಸಚಿವರಿಗೆ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಮನವರಿಕೆ ಮಾಡಿದಾಗ ಸಚಿವರ ಸೂಚನೆ ಮೇರೆಗೆ ಸಂತೋಷ್ ಎಂಬ ಬಿಜೆಪಿ ಕಾರ್ಯ ಕರ್ತ ಸಾಲ ಮಾಡಿ ಕಾಮಗಾರಿ ಪೂರ್ಣಗೊಳಿಸಿದ್ದಾನೆ ಎಂದರು.
Related Articles
Advertisement
ಕೋಮುಗಲಭೆ ಸೃಷ್ಟಿ: ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಶಾಸಕಿ ರೂಪಕಲಾ ಶಶಿಧರ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಅನೈತಿಕವಾಗಿ ಸರ್ಕಾರವನ್ನು ರಚಿಸಿದೆ. ಇದಕ್ಕೆ ಜನಾದೇಶ ಇರಲಿಲ್ಲ. ಅನೈತಿಕ ಸಂಬಂಧ ಬೆಳೆಸಿ ಅಧಿಕಾರಕ್ಕೆ ಬಂದಿದೆ. ಅಭಿವೃದ್ಧಿ ಮಾಡಬೇಕೆಂಬುವುದು ಮರೆತು ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಿ ಅರಾಜಕತೆ ಉಂಟು ಮಾಡುತ್ತಿದೆ. ಸಿದ್ದರಾಮಯ್ಯ ಆಡಳಿತದಲ್ಲಿ 10 ಪರ್ಸೆಂಟ್ ಸರ್ಕಾರವೆಂದು ಟೀಕಿಸುತ್ತಿದ್ದ ಬಿಜೆಪಿ ಇಂದು ಶೇ. 40 ಪರ್ಸೆಂಟ್ ಸರ್ಕಾರ ಎಂಬುವುದನ್ನು ಸಚಿವ ಈಶ್ವರಪ್ಪ ಸಾಬೀತು ಮಾಡಿದ್ದಾರೆ ಎಂದರು. ಕೆ
ಪಿಸಿಸಿ ಪ್ರಧಾನ ಕಾರ್ಯ ದರ್ಶಿ ಮೋಹನ್ ಬಾಬು, ಮನೋ ಹರ್, ಕೋಲಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ ಶಂಕರ್, ಪ್ರಸಾ ದ್ ಬಾಬು, ಕೆಯುಡಿಎ ಮಾಜಿ ಅಧ್ಯಕ್ಷ ಅಬ್ದುಲ್ ಖಯ್ಯೊಂ, ಜಿಲ್ಲಾ ಕಿಸಾನ್ ಸೆಲ್ ಅಧ್ಯಕ್ಷ ಊರು ಬಾಗಿಲು ಶ್ರೀನಿ ವಾಸ್, ನಗರಸಭೆ ಸದಸ್ಯ ಅಸ್ಲಾಂ. ಸಲಾವುದ್ದೀನ್ ಬಾಬು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರತ್ನಮ್ಮ ಮತ್ತಿತರರು ಇದ್ದರು.
ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಬಣ ಗೈರು : ಕಾಂಗ್ರೆಸ್ ಪಕ್ಷವು ಕೇಂದ್ರ, ರಾಜ್ಯ ಸರ್ಕಾರಗಳ ವೈಫಲ್ಯ ಹಾಗೂ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಕಾರಣವಾಗಿರುವ ಈಶ್ವರಪ್ಪ ಬಂಧಿಸಲು ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾಜಿ ಸ್ಪೀಕರ್, ಶ್ರೀನಿವಾಸಪುರ ಶಾಸಕ ರಮೇಶ್‌ಕುಮಾರ್ ಬಣದ ಕಾರ್ಯಕರ್ತರು ಯಾರೊಬ್ಬರು ಭಾಗವಹಿಸಲಿಲ್ಲ. ವಿ.ಆರ್.ಸುದರ್ಶನ್ ಡಿಸಿಸಿ ಅಧ್ಯಕ್ಷ ರಾದಾಗಿನಿಂದಲೂ ಕಾಂಗ್ರೆಸ್ ಅಧಿಕೃತ ಕಾರ್ಯಕ್ರಮಗಳಿಂದ ದೂರ ಕಾಯ್ದುಕೊಳ್ಳುತ್ತಿರುವ ಈ ಬಣದ ಶಾಸಕರು, ಮುಖಂಡರು, ನಗರಸಭಾ ಸದಸ್ಯರು ಭಾನುವಾರದ ಪ್ರತಿಭಟನೆಯಿಂದಲೂ ದೂರ ಉಳಿದಿದ್ದರು. ಕೋಲಾರ ಜಿಲ್ಲೆಯಲ್ಲಿ ಪರಸ್ಪರ ವಿರೋಧಿಗಳಂತೆ ಕಾದಾಡುತ್ತಿರುವ ಕಾಂಗ್ರೆಸ್ ರಮೇಶ್‌ಕುಮಾರ್ ಬಣ ಹಾಗೂ ಕೆ.ಎಚ್.ಮುನಿಯಪ್ಪ ಬಣ ಒಗ್ಗೂಡಿಸುವಲ್ಲಿ ಹಾಲಿ ಡಿಸಿಸಿ ಅಧ್ಯಕ್ಷರಾಗಿರುವ ವಿ.ಆರ್.ಸುದರ್ಶನ್ ಪ್ರಯತ್ನವು ಫಲಿಸಿಲ್ಲ. ಇದರಿಂದ ಬೇಸತ್ತು ಸದಸ್ಯತ್ವ ಮುಗಿದ ಕಾರಣಕ್ಕೆ ತಾವು ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಅವರು ಈಗಾಗಲೇ ಘೋಷಿಸಿದ್ದಾರೆ.
ಧರ್ಮದ ಅಮಲು ಬಿಜೆಪಿ ನೆತ್ತಿಗೇರಿದೆ : ಬಿಜೆಪಿಗೆ ಧರ್ಮದ ಅಮಲು ನೆತ್ತಿಗೇರಿದೆ. ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ಹಿಜಾಬ್, ಹಲಾಲ್, ಜಾತ್ರೆಗಳಲ್ಲಿ ನಿಷೇಧ, ಮಾವು, ರೇಷ್ಮೆ ವ್ಯಾಪಾರಗಳಿಂದ ಬಹಿಷ್ಕಾರ ಹಾಕಲು ಮುಂದಾಗಿದ್ದು, ನಾಳೆ ದಲಿತರು, ನಾಡಿದ್ದು ಕ್ರೈಸ್ತರ ಸರದಿ ಬರಲಿದೆ. ಬಿಜೆಪಿ ಆಡಳಿತ ಹಿಂದೂ ಪರ ಸಂಘಟನೆಗಳಾದ ಆರ್ ಎಸ್‌ಎಸ್, ಭಜರಂಗ ದಳ, ಶ್ರೀರಾಮಸೇನೆ, ಸಂಘಟನೆಗಳ ಮುಖಂಡರ ಕೈಯಲ್ಲಿದೆ. ಸರ್ಕಾರ ನಿಷ್ಕ್ರಿಯೆಗೊಂಡಿದೆ ಎಂದು ಮಾಜಿ ಸಚಿವ ರಾಮಲಿಂಗರೆಡ್ಡಿ ಆರೋಪಿಸಿದರು.