Advertisement

ಸಿಎಂ ಸನ್ಮಾನಕ್ಕೆ ಕಾಂಗ್ರೆಸ್‌ ವಿರೋಧ 

04:36 PM Mar 01, 2021 | Team Udayavani |

ಶಿವಮೊಗ್ಗ: ಜನ ಸಂಕಷ್ಟದಲ್ಲಿರುವ ಸಮಯದಲ್ಲಿ ಸನ್ಮಾನ ಮಾಡಿಸಿಕೊಳ್ಳಲು ಮುಂದಾಗಿರುವ ಸಿಎಂ ನಡೆ ಖಂಡಿಸಿ ಘೇರಾವ್‌ ಹಾಕಲು ನಿರ್ಧರಿಸಿದ್ದ ಕಾಂಗ್ರೆಸ್‌ ಮುಖಂಡರನ್ನು ಕಚೇರಿಯಲ್ಲೇ ದಿಗ್ಬಂಧನ ಹಾಕಿ ಕರೆದೊಯ್ದರು.

Advertisement

ಗ್ಯಾಸ್‌ ಸಿಲಿಂಡರ್‌ ಮತ್ತು ಪೆಟ್ರೋಲ್‌-ಡೀಸೆಲ್‌, ದಿನಸಿ ಸಾಮಗ್ರಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಕೊರೊನಾದಿಂದ ಜನತೆ ಸಂಕಷ್ಟದಲ್ಲಿರುವ ಸಮಯದಲ್ಲಿ ಸಿಎಂ ಸನ್ಮಾನ ಕಾರ್ಯಕ್ರಮ  ಇಟ್ಟುಕೊಂಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಸಿಎಂ ಘೇರಾವ್‌ ಹಾಕಲು ನಿರ್ಧರಿಸಿತ್ತು. ವಿಷಯ ಮೊದಲೇ ತಿಳಿಸಿದ ಪೊಲೀಸರು ಕಾಂಗ್ರೆಸ್‌ ಕಚೇರಿಯಲ್ಲಿ ಸೇರಿದ್ದ ಎಲ್ಲ ಮುಖಂಡರನ್ನು ಬಂಧಿಸಿ  ಬಸ್‌ನಲ್ಲ ಕರೆದೊಯ್ದು ನಂತರ ಬಿಡುಗಡೆ ಮಾಡಿದರು. ಜಿಲ್ಲಾಧ್ಯಕ್ಷ ಎಚ್‌.ಎಸ್‌.ಸುಂದರೇಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next