Advertisement

ಗ್ರಾಪಂ ಚುನಾವಣೆಗೆ ಕಾಂಗ್ರೆಸ್‌ ತಯಾರಿ

06:17 PM Oct 09, 2020 | Suhan S |

ಹಳಿಯಾಳ: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ ಅಧಿಕಾರ ವಹಿಸಿಕೊಂಡ ಬಳಿಕ ಪಕ್ಷದ ಸಂಘಟನೆಯಲ್ಲಿ ಅಮೂಲಾಗ್ರ ಬದಲಾವಣೆ ಆಗುತ್ತಿರುವ ಕಾರಣ ಶಿವಕುಮಾರ ಅವರ ಆದೇಶದಂತೆ ಜಿಲ್ಲೆಯಾದ್ಯಂತ ಕಾಂಗ್ರೆಸ್‌ ಪಕ್ಷ ಬಲವರ್ಧನೆಗೆ ಸಭೆ ನಡೆಸಲಾಗುತ್ತಿದೆ. ಅಲ್ಲದೇ ಗ್ರಾಪಂ ಚುನಾವಣೆಗೆ ಪಕ್ಷ ಸಜ್ಜಾಗಿದೆ ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಭಿಮಣ್ಣಾ ನಾಯ್ಕ ಹೇಳಿದರು.

Advertisement

ಪಟ್ಟಣದ ಲಕ್ಷ್ಮಣ ಪ್ಯಾಲೇಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರಾಗಿರುವ ಆರ್‌.ವಿ. ದೇಶಪಾಂಡೆ, ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಘೋಕ್ಲೃಕರ ಆದಿಯಾಗಿ ಹಲವು ಹಿರಿಯ ನಾಯಕರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಭದ್ರವಿದೆ. ಹೀಗಾಗಿ ಕೆಪಿಸಿಸಿಯಿಂದ ಹೊಸದಾಗಿ ಬೂತ್‌ ಮಟ್ಟದ ಎಜೆಂಟ್‌ (ಬಿಎಲ್‌ಎ)ಗಳ ನೇಮಕಾತಿ ಪರಿಶೀಲನೆ ಹಿನ್ನೆಲೆ ಬಿಎಲ್‌ಎಗಳ ಜಿಲ್ಲಾ ಉಸ್ತುವಾರಿಯನ್ನಾಗಿ ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಘೊಕ್ಲೃಕರ ಅವರನ್ನು ನೇಮಿಸಿ ಪಕ್ಷದ ಹೈಕಮಾಂಡ್‌ ಆದೇಶ ಹೊರಡಿಸಿದೆ ಎಂದು ತಿಳಿಸಿದರು.

ಬಿಎಲ್‌ಎಗಳು ಚುನಾವಣೆಗೆ ಮಾತ್ರ ಸೀಮಿತವಾಗದೆ ಪ್ರತಿಯೊಬ್ಬರನ್ನು ಮತದಾರರ ಪಟ್ಟಿಗೆ ಸೇರಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದ ಭೀಮಣ್ಣಾ, ಕಾಂಗ್ರೆಸ್‌ನಿಂದ ಯುವಕರ ಸದಸ್ಯತ್ವ ಅಭಿಯಾನ ನಡೆದಿದ್ದು, ಕಾಂಗ್ರೆಸ್‌ ಪಕ್ಷ ಯುವಕರಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಯುವಕರನ್ನು ಸೆಳೆಯುವ ಕೆಲಸ ಮಾಡುತ್ತಿದ್ದು, ಯುವ ಸಮೂಹ ಕೇವಲ ಬಿಜೆಪಿಯಲ್ಲಿ ಮಾತ್ರವಲ್ಲ ಕಾಂಗ್ರೆಸ್‌ನಲ್ಲೂ ಅಪಾರ ಪ್ರಮಾಣದಲ್ಲಿದೆ ಎಂದರು.

ಎಪಿಎಂಸಿ, ಕೃಷಿ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸಹಿ ಸಂಗ್ರಹ ಮಾಡಲಾಗಿದೆ ಎಂದ ಅವರು, ಚುನಾವಣೆ, ಟಿಕೆಟ್‌ಗಾಗಿ ಮಾತ್ರ ಪಕ್ಷಕ್ಕೆ ಸೇರದೆ ಸಮಾಜ ಮತ್ತು ದೇಶ ಸೇವೆಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರುವಂತೆ ಕರೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಘೋಕ್ಲೃಕರ ಮಾತನಾಡಿ, ಬಿಜೆಪಿಯ ಆಮಿಷಗಳಿಗೆ ಬಲಿಯಾಗಿದ್ದ ರೈತ ಹಾಗೂ ಯುವ ಸಮೂಹಕ್ಕೆ ಈಗ ಬಿಜೆಪಿಯ ಬಣ್ಣ ತಿಳಿಯುತ್ತಿದೆ. ಉದ್ಯೋಗ ಸೃಷ್ಟಿ ಇಲ್ಲದೇ ಕೋಟ್ಯಂತರ ಯುವಕರು ನಿರುದ್ಯೋಗಿಗಳಾಗಿದ್ದಾರೆ ಎಂದರು.

Advertisement

ಮುಖಂಡರಾದ ಎಸ್‌.ಕೆ. ಭಾಗ್ವತ, ರಮೇಶ ದುಬಾಶೆ, ಶ್ರೀನಿವಾಸ ಘೋಕ್ಲೃಕರ್‌, ರವಿ ತೊರಣಗಟ್ಟಿ, ಬಿಡಿ ಚೌಗಲೆ, ಶಿವಪುತ್ರಪ್ಪಾ ನುಚ್ಚಂಬ್ಲಿ, ಸಿಎಫ್‌ ನಾಯ್ಕ, ಸತ್ಯಜೀತ ಗಿರಿ, ಮಾಲಾ ಬ್ರಗಾಂಜಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next