Advertisement
ಕಳೆದ ಚುನಾವಣೆಯಲ್ಲಿ 200 ರಿಂದ 5 ಸಾವಿರ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದ28 ಕ್ಷೇತ್ರ ಹಾಗೂ 10 ಸಾವಿರ ಮತಗಳ ಅಂತರದಲ್ಲಿ ಸೋತಿದ್ದ 33 ಕ್ಷೇತ್ರಗಳಲ್ಲಿಈ ಬಾರಿ ಗೆಲ್ಲಲು ಹೆಚ್ಚು ಒತ್ತು ನೀಡಲು ಕಾರ್ಯತಂತ್ರ ರೂಪಿಸಿದೆ. ಎರಡು ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲದಿರುವ 35 ಕ್ಷೇತ್ರ ಗುರುತಿಸಿ ಹೊಸಮುಖಗಳಿಗೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
ಈ ನಡುವೆ, ಬೆಂಗಳೂರಿನಲ್ಲಿ ಆಪರೇಷನ್ ಕಮಲ ಕಾರ್ಯಾಚರಣೆಯಡಿ ಕಾಂಗ್ರೆಸ್ ಬಿಟ್ಟುಬಿಜೆಪಿ ಸೇರಿದ ಶಾಸಕರ ಕ್ಷೇತ್ರಗಳಲ್ಲಿ ಸಮರ್ಥಅಭ್ಯರ್ಥಿಗಳು ಇನ್ನೂ ಸಿಕ್ಕಿಲ್ಲ. ಇದರ ನಡುವೆ,ಈ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಟಿಕೆಟ್‌ಆಕಾಂಕ್ಷಿತರಾಗಿದ್ದ ಕೆಲವರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.
ಮಹತ್ವದ ಸಭೆ: ಭಾರತ್ ಜೋಡೋ ಯಾತ್ರೆ ಮುಗಿದ ನಂತರ ದೆಹಲಿಯಲ್ಲಿ ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ಸಭೆ ನಡೆಯಲಿದ್ದು, ಅಲ್ಲಿ 150 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕುರಿತು ಚರ್ಚೆಯಾಗಲಿದೆ. ನಾಲ್ಕು ತಿಂಗಳ ಮುಂಚೆ ಅಭ್ಯರ್ಥಿ ಘೋಷಣೆಯಾದರೆಮಾತ್ರ ನಾವು ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷಡಿ.ಕೆ.ಶಿವಕುಮಾರ್ ಇಬ್ಬರೂ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಬಿಜೆಪಿ-ಜೆಡಿಎಸ್ ಯಾತ್ರೆಗೆ ಟಕ್ಕರ್ ನೀಡಲು ತಂತ್ರ :
ಬಿಜೆಪಿಯ ಜನಸ್ಪಂದನ ಯಾತ್ರೆ, ಜೆಡಿಎಸ್‌ನ ಪಂಚರತ್ನ ಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಸಹ ಸರ್ಕಾರದ ವೈಫಲ್ಯಗಳ ಸರಮಾಲೆ ಹೆಸರಿನಲ್ಲಿ ರಾಜ್ಯ ಪ್ರವಾಸದ ಜತೆಗೆ ಸಮಾವೇಶ ಮಾಡಲು ಕಾರ್ಯತಂತ್ರ ರೂಪಿಸಿದೆ. ಎರಡು-ಮೂರು ತಂಡಗಳಲ್ಲಿ ರಾಜ್ಯ ಪ್ರವಾಸ ಮಾಡಲು ರೂಪು-ರೇಷೆ ನಿಗದಿ ಮಾಡಲಾಗುತ್ತಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ನೇತೃತ್ವದ ತಂಡ ಒಂದು ತಿಂಗಳ ಕಾಲ 224 ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದೆ ಎಂದು ಮೂಲಗಳು ತಿಳಿಸಿವೆ.
– ಎಸ್.ಲಕ್ಷ್ಮಿನಾರಾಯಣ