Advertisement

ಕೋವಿಡ್ ವಿಚಾರದಲ್ಲಿ ಕಾಂಗ್ರೆಸ್‌ ರಾಜಕಾರಣ

02:12 PM Jul 23, 2020 | mahesh |

ಶ್ರೀನಿವಾಸಪುರ: ಕೋವಿಡ್‌-19 ವಿಚಾರದಲ್ಲಿ ಕಾಂಗ್ರೆಸ್‌ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವಾಗ್ಧಾಳಿ ನಡೆಸಿದರು. ತಾಲೂಕಿನ ರೋಣೂರು ಕ್ರಾಸ್‌ನಲ್ಲಿರುವ ವಿಷನ್‌ ಇಂಡಿಯಾ ಪಬ್ಲಿಕ್‌ ಶಾಲೆಯಲ್ಲಿ ಬುಧವಾರ ನಡೆದ ಬಿಜೆಪಿ ಜಿಲ್ಲಾ ನೂತನ ಪದಾಧಿಕಾರಿಗಳ ಸಭೆ ಆರಂಭಕ್ಕೆ ಮುನ್ನ ಕೋರ್‌ ಕಮಿಟಿ ಸಭೆ ನಡೆಸಿದ ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಣ ಮಾಡಲು ರಾಜ್ಯ ಸರ್ಕಾರ ಸಾಕಷ್ಟು ಕೆಲಸ ಮಾಡುತ್ತಿದೆ. ಇಂತಹ ಸಮಯದಲ್ಲಿ ಜನರ ಆರೋಗ್ಯ ಸುಧಾರಿಸಲು ಸಹಕಾರ ನೀಡುವ ಬದಲು ಕಾಂಗ್ರೆಸ್‌ ತಮ್ಮ ಅವಧಿಯ ಹಗರಣ ಮರೆತು, ಬಾಯಿಗೆ ಬಂದಂತೆ ಮಾತನಾಡುತ್ತಿದೆ ಎಂದು ಟೀಕಿಸಿದರು.

Advertisement

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ಲಾಕ್‌ಡೌನ್‌ ಮಾಡಿದ ಸಂದರ್ಭದಲ್ಲಿ 1.5 ಕೋಟಿ ರೂ. ಜನರಿಗೆ ಆಹಾರ, 60 ಲಕ್ಷ ಜನರಿಗೆ ದಿನಸಿ, 1.5 ಕೋಟಿ ರೂ. ಜನರಿಗೆ ಔಷಧಿ ವಿತರಣೆಯನ್ನು ಸಂಸ ದರು, ಶಾಸಕರು, ಮಂಡಳ ಕಾರ್ಯಕರ್ತರು ಸೇವಾಭಾವದಿಂದ ಮಾಡಿದರು ಎಂದು ಹೇಳಿದರು.

ರಾಜ್ಯದಲ್ಲಿ ಕೋವಿಡ್‌-19 ಆರಂಭದಲ್ಲಿ 4 ಲ್ಯಾಬ್‌ಗಳು ಮಾತ್ರ ಇತ್ತು. ಈಗ 80 ಲ್ಯಾಬ್‌ ತೆರೆಯಲಾಗಿದೆ. ಸೋಂಕಿತ ವ್ಯಕ್ತಿಗಳು ದೂರದ ನಗರಗಳಿಗೆ ಹೋಗಿ ಚಿಕಿತ್ಸೆ ಪಡೆಯಲು
ಸಮಸ್ಯೆಯಾಗುತ್ತದೆ ಎಂದು ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕೋವಿಡ್‌-19 ಆಸ್ಪತ್ರೆಗಳನ್ನು ತೆರೆಯಲಾಗಿದೆ ಎಂದರು. ಅದೇ ರೀತಿ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಿಗೆ ಪಿಪಿಟಿ ಕಿಟ್‌ಗಳನ್ನು ನೀಡಲು ನಮ್ಮ ಸರ್ಕಾರ ಮಾಡಿದೆ.  ಹಿಂದಿನ ಕಾಲಘಟ್ಟದಲ್ಲಿ ವೆಂಟಿಲೇಟರ್‌ಗಳು ಕೊರತೆ ಇತ್ತು. ಹಾಗಾಗಿ ಪ್ರತಿ ಜಿಲ್ಲೆಗೆ ವೆಂಟಿಲೇಟರ್‌ಗಳನ್ನು ಕೊಡುವ ಕೆಲಸ ಬಿಜೆಪಿ
ರಾಜ್ಯ ಸರ್ಕಾರ ಮಾಡಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ವಿನಾಕಾರಣ ಮಾಡುವ ಆರೋಪಗಳು ನಿರಾಧಾರವಾಗಿವೆ. ರಾಜ್ಯದಲ್ಲಿ ಕಾಂಗ್ರೆಸ್‌ ರಾಜಕಾರಣ ಮಾಡಿ ಹಗರಣಗಳ ಇತಿಹಾಸ ಮಾಡಿದೆ. ಕೋವಿಡ್‌ ನಿಯಂತ್ರಿಸುವ ಕಾಲಘಟ್ಟದಲ್ಲಿ ಸಹಕಾರ ಕೊಡಲಿ, ಅದನ್ನು ಬಿಟ್ಟು ಬಾಯಿಗೆ ಬಂದಂತೆ ಮಾತನಾಡು ವುದನ್ನು ಬಿಗಿ ಹಿಡಿಯಲಿ ಎಂದು ಹೇಳಿದರು. ಬೇರು ಮಟ್ಟದಲ್ಲಿ ಕೆಲಸ ಮಾಡಿದ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂಬ ಪ್ರಶ್ನೆಗೆ ಕೋವಿಡ್‌-19 ಪರಿಸ್ಥಿತಿ ಇದೆ. ನಂತರ ಸುಧಾರಣೆ ಮಾಡುತ್ತೇವೆ. ಕೆಜಿಎಫ್ನಲ್ಲಿ ನೂತನ ತಾಲೂಕು ಪಂಚಾಯ್ತಿ ಅಧಿಕಾರಕ್ಕೆ ಬಿಜೆಪಿ ಸದಸ್ಯರ ಸಹಕಾರದಿಂದ ಕಾಂಗ್ರೆಸ್‌ಗೆ ಲಾಭವಾಯಿತು ಎಂದಾಗ ಪಕ್ಷಕ್ಕೆ ದ್ರೋಹ ಮಾಡಿದ ಸದಸ್ಯರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ನಾಗೇಶ್‌, ಸಂಸದ ಎಸ್‌.ಮುನಿಸ್ವಾಮಿ, ವಿಧಾನ ಪರಿಷತ್‌ ಸದಸ್ಯ ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎನ್‌.ವೇಣುಗೋಪಾಲ್‌, ಮಾಜಿ ಅಧ್ಯಕ್ಷ
ಬಿ.ಪಿ.ವೆಂಕಟಮುನಿಯಪ್ಪ, ಎಟ್ಟುಕೋಡಿ ಕೃಷ್ಣಾರೆಡ್ಡಿ, ಎಸ್‌.ಬಿ. ಮುನಿವೆಂಕಟಪ್ಪ, ಎಂ.ಕೆ. ವಾಸುದೇವ, ಪಿ.ಎಂ.ಕೃಷ್ಣಮೂರ್ತಿ, ಮಾಗೇರಿ ನಾರಾಯಣಸ್ವಾಮಿ, ಸುರೇಶ್‌ ನಾರಾಯಣಕಟ್ಟಿ
ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next