Advertisement

Congress Politics: ಕಾಫೀ ಪೇ ಚರ್ಚೆ ಆಗಬೇಕಲ್ಲವೇ: ಗೃಹ ಸಚಿವ ಪರಮೇಶ್ವರ್‌

01:51 AM Oct 09, 2024 | Team Udayavani |

ಬೆಂಗಳೂರು: ಚಾಯ್‌ ಪೇ ಚರ್ಚೆ ಆಗುತ್ತಿದೆಯಲ್ಲ. ಹಾಗೆಯೇ ಕಾಫೀ ಪೇ ಚರ್ಚೆ ಆಗಬೇಕಲ್ಲವೇ? – ಪದೇ ಪದೆ ದಲಿತ ಸಚಿವರ ಪರಸ್ಪರ ಭೇಟಿ ವಿಚಾರದ ಬಗ್ಗೆ ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಮರುಪ್ರಶ್ನೆ ಇದು.

Advertisement

ಎಲ್ಲೋ ಕುಳಿತು ಚರ್ಚೆ ಮಾಡುವುದರಿಂದ ಅಥವಾ ಮಾತುಕತೆ ನಡೆಸುವುದರಿಂದ ಏನೂ ಆಗುವುದಿಲ್ಲ. ಯಾವುದೇ ನಿರ್ಧಾರಗಳನ್ನು ಪಕ್ಷದ ಹೈಕಮಾಂಡ್‌ ತೆಗೆದುಕೊಳ್ಳುತ್ತದೆ. ಅಂತಹ ಸನ್ನಿವೇಶ ಈಗ ಬಂದಿಲ್ಲ. ಸಿಎಂ ರಾಜೀನಾಮೆ ಕೊಡುವುದಿಲ್ಲ. ಅಂತಹ ಅಗತ್ಯವೂ ಇಲ್ಲ. ಚಾಯ್‌ ಪೇ ಚರ್ಚೆ ಆಗುವಂತೆಯೇ ಕಾಫಿ ಪೆ ಚರ್ಚೆ ಆಗಬೇಕಲ್ಲ ಎಂದರು.

ಜಾತಿಗಣತಿ ಜಾರಿ ವಿಚಾರದ ಬಗ್ಗೆ ಪ್ರಶ್ನಿಸಿ ದಾಗ, ಈ ಮೊದಲು ವರದಿ ಕೋಲ್ಡ್‌ ಸ್ಟೋರೇಜ್‌ನಲ್ಲಿಟ್ಟಿದ್ದಾರೆ ಅಂದರು. ಕೈಗೆತ್ತಿಕೊಳ್ಳಲು ಮುಂದಾದರೆ ಬೇರೆ ರೀತಿ ಮಾತನಾಡುತ್ತಿದ್ದಾರೆ. ಜಾತಿ ಗಣತಿ ವರದಿ ಆಧರಿಸಿ ಮುಂದೆ ಕಾರ್ಯಕ್ರಮಗಳನ್ನು ರೂಪಿಸಲು ಅನುಕೂಲ ಆಗುತ್ತದೆ. ಈ ಜನಸಂಖ್ಯೆ ಆಧಾರವಾಗಿಟ್ಟುಕೊಂಡು ಯೋಜನೆಗಳನ್ನು ತರುತ್ತೇವೆ ಎಂದರು.

ಇದೇ 18ರಂದು ಸಂಪುಟದ ಮುಂದೆ ಬರಲಿದೆ. ಅಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ. ಇದಕ್ಕಾಗಿ ಉಪಸಮಿತಿ ಮಾಡುವುದಾ ಅಥವಾ ಬೇರೆ ಏನು ಮಾಡಬೇಕು ಎಂಬುದನ್ನು ಯೋಚಿಸುತ್ತೇವೆ. ವಸ್ತುಸ್ಥಿತಿ ಏನಿದೆ ಜನರ ಮುಂದೆ ಇಡಲಾಗುವುದು. ವರದಿಯೇ ಬೇಡ ಎಂದರೆ ಹೇಗೆ? ಅದಕ್ಕಾಗಿ 160 ಕೋಟಿ ರೂ. ಖರ್ಚು ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಕೇಂದ್ರ ಸರ್ಕಾರ ಜನ ಗಣತಿ ಮಾಡಲಿದೆ. ಆಗಲೂ ವರದಿ ಬರುತ್ತದೆ ಅಲ್ಲವೇ? ಆಗ ಏನು ಹೇಳುತ್ತಾರೆ? ಎಂದು ಕೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next