ಹ್ಯಾಂಬರ್ಗ್: ಇತ್ತೀಚೆಗೆ ಮುಕ್ತಾಯ ವಾಗಿರುವ ಸಂಸತ್ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಆಲಿಂಗಿಸಿ ಕೊಂಡದ್ದಕ್ಕೆ ತಮ್ಮ ಪಕ್ಷದಲ್ಲಿಯೇ ಅತೃಪ್ತಿ ಇದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಬುಧವಾರ ಅವರು ಮಾತನಾಡಿದರು. ಪ್ರಪಂಚ ಎನ್ನುವುದು ಕೆಟ್ಟವರು ಇರುವ ಜಾಗವಲ್ಲ. ಅಲ್ಲಿ ಒಳ್ಳೆಯವರೂ ಇರುತ್ತಾರೆ ಎಂಬ ವಿಚಾರವನ್ನು ಪ್ರಧಾನಿಯವರ ಗಮನಕ್ಕೆ ತರುವುದು ತಮ್ಮ ಉದ್ದೇಶವಾಗಿತ್ತು ಎಂದಿದ್ದಾರೆ. ಆದರೆ ಅವರನ್ನು ಆಲಿಂಗಿಸಿಕೊಂಡದ್ದು ಕಾಂಗ್ರೆಸ್‌ನಲ್ಲಿಯೇ ಹಲವರಿಗೆ ಮೆಚ್ಚುಗೆಯಾಗಿಲ್ಲ ಎಂದಿದ್ದಾರೆ. ಲೋಕಸಭೆಯಲ್ಲಿನ ತಮ್ಮ ಕ್ರಮ ಪ್ರಧಾನಿಯ ವರಿಗೆ ಇಷ್ಟವಾಗಲಿಲ್ಲ ಎಂದಿದ್ದಾರೆ ರಾಹುಲ್.
ಜನರಿಗೆ 21 ಶತಮಾನ ದೃಷ್ಟಿಕೋನ ನೀಡದೇ ಇದ್ದರೆ ಮತ್ತೂಬ್ಬರು ನೀಡಲು ಮುಂದಾಗಿದ್ದಾರೆ. ಜನರನ್ನು ಸ್ವೀಕರಿಸಿ ಮುಂದುವರಿಯದಿದ್ದರೆ, ಮತ್ತೂಬ್ಬರು ಆ ಕೆಲಸ ಮಾಡಿಕೊಂಡು ಮುಂದುವರಿಯುತ್ತಾರೆ ಎಂದು ಪರೋಕ್ಷವಾಗಿ 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ರಾಹುಲ್ ಪ್ರಧಾನಿ ಮೋದಿಗೆ ಪರೋಕ್ಷ ಎಚ್ಚರಿಕೆಯನ್ನೂ ನೀಡಿದ್ದಾರೆ.
ಭಾರತದಲ್ಲಿ ಮಹಿಳೆಯರ ವಿರುದ್ಧ ಹಿಂಸಾಚಾರಗಳು ಹೆಚ್ಚುತ್ತಿವೆ. ಭಾರತದಲ್ಲಿನ ಪುರು ಷರು ಮಹಿಳೆಯರ ಬಗ್ಗೆ ನೋಡುವ ದೃಷ್ಟಿ ಕೋನ ಬದಲಾಯಿಸಿಕೊಳ್ಳಬೇಕು ಎಂದಿದ್ದಾರೆ. ನೋಟು ಅಮಾನ್ಯ ಕ್ರಮದ ಬಗ್ಗೆಯೂ ರಾಹುಲ್ ಪ್ರಧಾನಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜೀವ್ ಗಾಂಧಿ ಹತ್ಯೆಗೆ ಕಾರಣನಾದ ಎಲ್‌ಟಿಟಿಇ ನಾಯಕ ವಿ.ಪ್ರಭಾಕರನ್ ಅಸುನೀಗಿದ್ದಾಗ ಅದನ್ನು ಇಷ್ಟಪಡಲಿಲ್ಲ ಎಂದಿದ್ದಾರೆ. ಹಿಂಸೆಯಿಂದ ತಾನು ಮತ್ತು ಕುಟುಂಬ ನರಳಿದೆ ಎಂದು ಹೇಳಿಕೊಂಡ ಅವರು ಅಂಥವುಗಳನ್ನು ಮರೆಯಲು ಕ್ಷಮೆಯೇ ಉತ್ತಮ ಪರಿಹಾರ ಎಂದಿದ್ದಾರೆ. ಅಮೆರಿಕ, ಚೀನಾ ಜತೆ ಭಾರತ ವ್ಯೂಹಾತ್ಮಕ ಬಾಂಧವ್ಯ ಕಾಪಾಡಿಕೊಂಡು ಬರುವುದು ಅಗತ್ಯ ಸಲಹೆ ಮಾಡಿದ್ದಾರೆ. ಗುರುವಾರ ಭಾರತೀಯ ಸಮುದಾ ಯದವರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಜರ್ಮನಿ ಅಧ್ಯಕ್ಷೆ ಆ್ಯಂಜೆಲಾ ಮರ್ಕೆಲ್‌ರನ್ನೂ ಭೇಟಿ ಮಾಡಲಿದ್ದಾರೆ. ಜರ್ಮನಿ ಮತ್ತು ಯು.ಕೆ.ಗೆ ಅವರು 4 ದಿನಗಳ ಪ್ರವಾಸ ಕೈಗೊಂಡಿದ್ದಾರೆ.