Advertisement

ಕಾಂಗ್ರೆಸ್‌ ಸರ್ಕಾರ ಮಾಡಿದ್ದ ಸಾಧನೆ ಜನರಿಗೆ ತಿಳಿಸಿ, ಪಕ್ಷ ಸಂಘಟಿಸಿ

03:44 PM Jul 03, 2022 | Team Udayavani |

ಕೆ.ಆರ್‌.ನಗರ: ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ಗ್ರಾಪಂ ಮಟ್ಟದಲ್ಲಿ ಜನತೆಗೆ ತಿಳಿಸಿ, ಪಕ್ಷದ ಸಂಘಟನೆ ಮಾಡಲಾಗುತ್ತದೆ ಎಂದು ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಉಸ್ತುವಾರಿ ಡಾ.ರವೀಂದ್ರ ಹೇಳಿದರು.

Advertisement

ಪಟ್ಟಣದ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಕೇವಲ 9 ತಿಂಗಳು ಮಾತ್ರವಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚತವಾಗಿದೆ. ಈ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ರವಿಶಂಕರ್‌ ಗೆಲುವಿಗೆ ಸ್ಥಳೀಯ ಮುಖಂಡರೊಂದಿಗೆ ದುಡಿಯುತ್ತೇನೆ ಎಂದು ವಿವರಿಸಿದರು.

ಪಂಚಾಯ್ತಿವಾರು ಸಭೆ ನಡೆಸಿದ ನಂತರ ಜಿಪಂವಾರು ಸಭೆ ನಡೆಸುವುದರ ಜತೆಗೆ ಕಾಂಗ್ರೆಸ್‌ ಪರವಾಗಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿರುವವರಿಗೂ ವೇದಿಕೆ ಕಲ್ಪಿಸಿಕೊಡಲಾಗುತ್ತದೆ. ಇದರಿಂದ ಪಕ್ಷಕ್ಕೆ ಲಾಭವಾಗಲಿದೆ ಎಂದರಲ್ಲದೆ, ಸ್ಥಳೀಯ ಕಾರ್ಯಕರ್ತರು ಮತ್ತು ಮುಖಂಡರು ಇದಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು. ಹಣದಿಂದ ಚುನಾವಣೆಯಲ್ಲಿ ಗೆಲ್ಲವು ಸಾಧ್ಯವಿಲ್ಲ ಎಂಬುದಕ್ಕೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾಅಂಬರೀಶ್‌ರವರ ಫ‌ಲಿತಾಂಶವೇ ಸಾಕ್ಷಿ. ಇದನ್ನು ಪಕ್ಷದ ಮುಖಂಡರು ಮನಗಂಡು ಕಾರ್ಯಕರ್ತರೊಂದಿಗೆ ಪಕ್ಷದ ಸಂಘಟನೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದ ಡಾ.ರವೀಂದ್ರ ಈ ಭಾಗದಲ್ಲಿ ನಮ್ಮ ಎದುರಾಳಿ ಜೆಡಿಎಸ್‌ ಪಕ್ಷ. ಆದ್ದರಿಂದ ಜೆಡಿಎಸ್‌ ವಿರುದ್ಧ ಹೋರಾಡಿ ಕಾಂಗ್ರೆಸ್‌ ಬಾವುಟ ಹಾರಿಸಬೇಕು ಎಂದರು.

ಶಾಸಕರ ಲೋಪ ಜನರಿಗೆ ತಿಳಿಸಿ: ಜೆಡಿಎಸ್‌ನವರು ಒಂದು ಜಾತಿ ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವುದು ಜನತೆಗೆ ತಿಳಿದಿದ್ದು, ಸರ್ವರನ್ನು ಒಟ್ಟಾಗಿ ಕರೆದೊಯ್ಯುವ ಕಾಂಗ್ರೆಸ್‌ ಇಂತಹ ವಿಚಾರವನ್ನು ಮತ್ತು ಶಾಸಕ ಸಾ.ರಾ. ಮಹೇಶ್‌ ಅವರ ಆಡಳಿತದ ಲೋಪವನ್ನು ಮತದಾರರಿಗೆ ತಿಳಿಸಿಕೊಟ್ಟು, ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು. ಇದಕ್ಕೆ ಬೇಕಾಗುವ ಎಲ್ಲಾ ರೀತಿಯ ಸಹಕಾರ ಕೆಪಿಸಿಸಿನಿಂದ ಕೊಡಿಸಲಾಗುತ್ತದೆ ಎಂದು ತಿಳಿಸಿದರು.

ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ, ಜಿಪಂ ಮಾಜಿ ಸದಸ್ಯ ಡಿ.ರವಿಶಂಕರ್‌, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಮುಖಂಡರಾದ ಸಿ.ಪಿ.ರಮೇಶ್‌, ಹೊಸೂರುಕಲ್ಲಹಳ್ಳಿ ಶ್ರೀನಿವಾಸ್‌, ಎಸ್‌.ಪಿ.ತಮ್ಮಯ್ಯ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಎಂ.ಎಸ್‌.ಮಹದೇವ್‌, ಉದಯಶಂಕರ್‌, ನಗರಾಧ್ಯಕ್ಷ ಎಂ.ಜೆ.ರಮೇಶ್‌ ಮಾತನಾಡಿದರು.

Advertisement

ಈ ಸಂದರ್ಭದಲ್ಲಿ ಜೆಡಿಎಸ್‌ ತೊರೆದು ಡಾ.ರವೀಂದ್ರ ಸಮ್ಮುಖದಲ್ಲಿ ನಿವೃತ್ತ ಪೊಲೀಸ್‌ ಹನಸೋಗೆ ಸಿದ್ದಯ್ಯ, ಹಲವು ಮುಖಂಡರು ಕಾಂಗ್ರೆಸ್‌ ಪಕ್ಷ ಸೇರ್ಪಡೆಗೊಂಡರು. ಪುರಸಭೆ ಅಧ್ಯಕ್ಷ ಕೋಳಿಪ್ರಕಾಶ್‌, ಜಿಪಂ ಮಾಜಿ ಸದಸ್ಯರಾದ ಜಿ.ಆರ್‌.ರಾಮೇಗೌಡ, ಮಾರ್ಚಹಳ್ಳಿ ಶಿವರಾಮು, ಎಪಿಎಂಸಿ ಮಾಜಿ ನಿರ್ದೇಶಕ ಎಚ್‌.ಎಚ್‌.ನಾಗೇಂದ್ರ, ಎಚ್‌.ಪಿ.ಪ್ರಶಾಂತ್‌ ಜೈನ್‌, ಎಲ್‌.ಪಿ.ರವಿಕುಮಾರ್‌, ಟಿಎಪಿಸಿಎಂಎಸ್‌ ನಿರ್ದೇಶಕ ಜಿ.ಕೆ.ತೋಟಪ್ಪನಾಯಕ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಎಸ್‌. ಸಿದ್ದೇಗೌಡ, ನಿರ್ದೇಶಕ ಚಂದ್ರಹಾಸ, ಮುಖಂಡರಾದ ಎಂ.ಆರ್‌ .ನಾಗೇಶ್‌, ಸರಿತಾಜವರಪ್ಪ, ಹನಸೋಗೆಸಿದ್ದಯ್ಯ, ಬಳ್ಳೂರುಮೂರ್ತಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next