ದೇವನಹಳ್ಳಿ: 2023ಕ್ಕೆ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಖಚಿತ. ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದು ಹಸಿವು ಮುಕ್ತ ಕರ್ನಾಟಕ ಮಾಡಿದ ಕೀರ್ತಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಬೇಕು ಎಂದು ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಟಾರ್ ಹೇಳಿದರು.
ಪಟ್ಟಣದ ಜಾಮೀಯ ಮಸೀದಿಗೆ ಶುಕ್ರವಾರ ಭೇಟಿ ನೀಡಿ ಮಸೀದಿಯ ಮುಖಂಡರೊಂದಿಗೆ ಚರ್ಚಿಸಿ ನಂತರ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯನ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತರಿಗೆ ಅನುಕೂಲವಾಗುವ ದೃಷ್ಟಿಯಿಂದ ಶಾದಿ ಭಾಗ್ಯವನ್ನು ಜಾರಿಗೆ ತಂದು, ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ದವರಿಗೆ ಅನುಕೂಲ ಮಾಡಿಕೊಟ್ಟಿದ್ದರು ಎಂದರು.
ಪಕ್ಷ ಸಂಘಟನೆಗೆ ಒತ್ತು: ಪ್ರಜ್ಞಾವಂತ ಮತದಾರರು ಇವೆಲ್ಲವನ್ನೂ ಗಮನಿಸುತ್ತಿದ್ದಾರೆ. ಯಾವ ಪಕ್ಷದ ಆಡಳಿತದಲ್ಲಿ ಜನರು ಶಾಂತಿ, ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದರು ಎಂಬುವುದಕ್ಕೆ ಕಾಂಗ್ರೆಸ್ ಸಾಕ್ಷಿಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಈ ಹಿಂದೆ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು, ನವ ಸಂಕಲ್ಪ ಶಿಬಿರವನ್ನು ಪ್ರತಿ ಬೂತ್‌ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲು ಒತ್ತು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಏನು ಮಾಡಿದ್ರೆ ಪಕ್ಷ ಗೆಲುವು ಸಾಧಿಸಬಹುದೆಂಬ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ದೇಶದ ಇತಿಹಾಸ ಗೊತ್ತಿಲ್ಲ: ಹಿಂದೆ 5 ವರ್ಷ ಸರ್ಕಾರ ಮಾಡಿದ್ದೇವೆ. ಯಾವ್ಯಾವ ಕೆಲಸ ಮಾಡಿದ್ದೇವೆ. ಅದರಲ್ಲಿಯೂ ಸಣ್ಣ ನ್ಯೂನತೆಗಳು ಆಗಿವೆ. ಅವೆಲ್ಲವನ್ನು ಸರಿಪಡಿಸಿಕೊಳ್ಳಲಾಗುತ್ತದೆ. ಗಾಂಧಿಜೀ ಮತ್ತು ಅವರ ಫ್ಯಾಮಿಲಿ ಬಗ್ಗೆ ಯಾರೂ ವಿರೋಧವಾಗಿ ಮಾತಾಡ್ತಿದ್ದಾರೆಯೋ, ಅವರಿಗೆ ಈ ದೇಶದ ಇತಿಹಾಸ ಗೊತ್ತಿಲ್ಲ. ಗಾಂಧಿ ಫ್ಯಾಮಿಲಿ ನೆಹರು, ರಾಹುಲ್ ಗಾಂಧಿ, ಇಂದಿರಾಗಾಂಧಿ ಸೇರಿದಂತೆ ಹಲವರು ಈ ದೇಶಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆಂಬುವುದು ಜನರಿಗೆ ತಿಳಿದಿದೆ. ವಿರೋಧವಾಗಿ ಮಾತಾಡೋರು ಈ ಸಮಾಜದ ಬಗ್ಗೆ ಕಳಕಳಿ ಇಲ್ಲ. ದೇಶದ ಬಗ್ಗೆಯೂ ಕಳಕಳಿ ಇಲ್ಲ ಎಂದರು.
ಮುಸ್ಲಿಂ ಮುಖಂಡರೊಂದಿಗೆ ಕುಶಲೋಪರಿ: ಜಾಮೀಯ ಮಸೀದಿ ಕಮಿಟಿ ವತಿಯಿಂದ ಅವರನ್ನು ಸಿಹಿ ತಿನಿಸುವುದರ ಮೂಲಕ ಹೂವಿನ ಹಾರವನ್ನು ಹಾಕಿ ಅಭಿನಂದಿಸಲಾಯಿತು. ಮಸೀದಿಯಲ್ಲಿ ಕೆಲ ಕಾಲ ಕುಳಿತು ಮಸೀದಿ ಅಧ್ಯಕ್ಷ ಅಬ್ದುಲ್ ಜಬ್ಟಾರ್ ಮತ್ತು ಮುಸ್ಲಿಂ ಮುಖಂಡರೊಂದಿಗೆ ಕುಶಲೋಪರಿ ನಡೆಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಬಾರಕ್, ಮಸೀದಿ ಅಧ್ಯಕ್ಷ ಅಬ್ದುಲ್‌ಖುದ್ದೂಸ್, ಕಾರ್ಯದರ್ಶಿ ಎ.ಎಸ್.ಇಬ್ರಾಹಿಂ, ಪ್ರಾಧ್ಯಾಪಕ ಡಾ.ಶಫಿ ಅಹಮದ್, ಹಿರಿಯ ಮುಖಂಡ ಅಮಾನುಲ್ಲಾ ಖಾನ್, ವಾಜೀದ್, ಜಾವೀದ್, ಪೊಲೀಸ್ ಅಕ್ರಂಪಾಶ, ಯುವ ಮುಖಂಡ ಹೈದರ್, ಆರೀಫ್, ವಿಜಯಪುರ ಬ್ಲಾಕ್ ಅಧ್ಯಕ್ಷ ಮೌಲಾ ಹಾಗೂ ಕಮಿಟಿಯ ಪದಾಧಿಕಾರಿಗಳು ಇದ್ದರು.
ಜನಪರ ಯೋಜನೆ ಜಾರಿಗೆ :
ತರುವಲ್ಲಿ ಬಿಜೆಪಿ ವಿಫಲ ಈಗಿನ ಬಿಜೆಪಿ ಸರ್ಕಾರ ಧರ್ಮ-ಧರ್ಮಗಳ ಮಧ್ಯೆ, ಜಾತಿ-ಜಾತಿಗಳ ಮಧ್ಯೆ ವಿಷಬೀಜವನ್ನು ಬಿತ್ತಿದ್ದಾರೆ. ಇದರಿಂದ ರಾಜ್ಯದ ಶಾಂತಿ, ಸುವ್ಯವಸ್ಥೆಹದಗೆಟ್ಟಿ ಹೋಗಿದೆ. ಪ್ರತಿನಿತ್ಯ ಒಂದಲ್ಲಾ ಒಂದು ವಿಷಯಗಳನ್ನು ಹುಟ್ಟುಹಾಕಿ ಜನಸಾಮಾನ್ಯರನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ. ಬಿಜೆಪಿಸರ್ಕಾರ ಯಾವುದೇ ಜನಪರ ಯೋಜನೆಗಳನ್ನುತರುವಲ್ಲಿ ವಿಫಲವಾಗಿರುವುದರಿಂದ ಜನರನ್ನು ದಿಕ್ಕು ತಪ್ಪಿಸುವ ಕಾಯಕವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.