ಔರಾದ: ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ ವೈ ಮನಸ್ಸುಳನ್ನು ಬಿಟ್ಟು ತಾಲೂಕಿನ ಯುವಕರು ನಿಸ್ವಾರ್ಥವಾಗಿ ಕಾಂಗ್ರೆಸ್‌ಪಕ್ಷ ಬಲವರ್ಧನೆಗೆ ಮುಂದಾಗಬೇಕೆಂದುಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಮೀನಾಕ್ಷಿ ಸಂಗ್ರಾಮ ಹೇಳಿದರು.
ಪಟ್ಟಣದ ಕನಕ ಭವನದಲ್ಲಿ ನೂತನ ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲಗೆ ಪಪಂ ಹಾಗೂ ಬಾದಲಗಾಂವಗ್ರಾಪಂ ಸದಸ್ಯರಿಂದ ಸೋಮವಾರ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭಉದೇಶಿಸಿ ಅವರು ಮಾತನಾಡಿದರು.
ಪಕ್ಷದಮುಖಂಡ ಹಾಗೂ ಕಾರ್ಯಕರ್ತರ ನಡುವೆಇರುವ ಭಿನ್ನಾಭಿಪ್ರಾಯಗಳನ್ನು ಕಚೇರಿಯಲ್ಲಿಕುಳಿತುಕೊಂಡು ಬಗೆ ಹರಿಸಿಕೊಂಡು ಎಲ್ಲರೂಸೇರಿ ಒಂದಾಗ ಕೆಲಸ ಮಾಡಿದರೆ ವಿಧಾನ ಪರಿಷತ್ ಚುನಾವಣೆಯಂತೆ ಮುಂಬರುವತಾಪಂ, ಜಿಪಂ ಹಾಗೂ ವಿಧಾನಸಭೆ ಚುನಾವಣೆಯಲ್ಲಿಯೂ ಪಕ್ಷದ ಅಭ್ಯರ್ಥಿಗಳು ಗೆಲುವು ಬಹುತ್ಯೇಕ ಖಚಿತವಾಗಿದೆ.ಹೀಗಾಗಿ ಎಲ್ಲರೂ ಭಿನ್ನಾಭಿಪ್ರಾಯ ಮರೆತು ನಾವೆಲ್ಲರೂ ಕೈ ಪಕ್ಷದ ಕಾರ್ಯಕರ್ತರೆಂದುದುಡಿಯೋಣಾ ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ್ ಮಾತನಾಡಿ, ಪಪಂ ಸದಸ್ಯರುಹಾಗೂ ಬಾದಲಗಾಂವ ಗ್ರಾಪಂ ಸದಸ್ಯರು ನಮಗೆ ಮಾಡಿರುವ ಸನ್ಮಾನ ನಮ್ಮ ಜೀವನ ಪೂರ್ತಿ ಬರೆಯಲ್ಲಾ ಎಂದ ಅವರು,ಔರಾದ ತಾಲೂಕಿನ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಮ್ಮ ಮನೆ ದೇವರುಗಳು ಇದ್ದಂತೆ. ನಿಮ್ಮ ಸಮಸ್ಯೆಗಳು ಏನೇ ಇದ್ದರೂ ನಮಗೆ ತಿಳಿಸಿ ಸೂಕ್ತ ಪರಿಹಾರದ ಜೊತೆಗೆನಿಮಗೆ ಶಕ್ತಿ ತುಂಬುವ ಕೆಲಸ ನಾನೂಮಾಡುತ್ತೇನೆ. ಅದರಂತೆ ಔರಾದ ಹಾಗೂಕಮಲನಗರ ತಾಲೂಕು ಕೇಂದ್ರಗಳಲ್ಲಿ ವಿಧಾನಪರಿಷತ್ ಸದಸ್ಯರ ಕಚೇರಿಯು ತೆಗೆಯುವ ಚಿಂತನೆ ನಡೆಯುತ್ತಿದೆ ಎಂದರು.
ತಾಲೂಕು ಕಾಂಗ್ರೆಸ್ ಅಧ್ಯಕ್ಷ ರಾಜಕುಮಾರ ಹಲಬರ್ಗೆ ತುಂಬಾ ಚೆನ್ನಾಗಿ ತಾಲೂಕಿನಲ್ಲಿ ಪಕ್ಷ ಸಂಘಟನೆಯ ಕೆಲಸ ಮಾಡಿದ್ದಾರೆಂದುಬಣ್ಣಿಸಿದರು. ತಾಲೂಕು ಕಾಂಗ್ರೆಸ್ ಅಧ್ಯಕ್ಷರಾಜಕುಮಾರ ಹಲ್ಬರ್ಗೆ, ಬಂಟಿ ದರ್ಬಾರೆ,ಭೀಮಸೇನರಾವ ಸಿಂದೆ, ವಿಶ್ವನಾಥ,ನೆಹರು ಪಾಟೀಲ್, ರಾಮಣ್ಣ ವಡೇಯರ್,ಗೋಪಿಕೃಷ್ಣಾ, ಕನಿಕರಾಮ ರಾಠೊಡ, ಬಾಬುರಾವ ತಾರೆ ಇದ್ದರು.