ಸುವರ್ಣಸೌಧ: ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಜ.9 ರಿಂದ 19 ರವರೆಗೆ ಕಾಂಗ್ರೆಸ್ ಪಾದಯಾತ್ರೆ ನಡೆಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಘೋಷಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಅವರು, ಜ.9ರಂದು ಮೇಕೆದಾಟು ಬಳಿಯಿಂದ ಪಾದಯಾತ್ರೆ ಆರಂಭವಾಗಲಿದ್ದು, ಬೆಂಗಳೂರಿನಲ್ಲಿ ಜ.19ರಂದು ಅಂತ್ಯವಾಗಲಿದೆ. ಸುಮಾರು 169 ಕಿ.ಮೀ. ಪಾದಯಾತ್ರೆ ನಡೆಯಲಿದೆ ಎಂದರು.
“ಇದು ನಿಮ್ಮ ನೀರು, ನಿಮ್ಮ ಹಕ್ಕು, ನಿಮ್ಮ ಹೋರಾಟ” ಘೋಷವಾಕ್ಯದಡಿ ಪಾದಯಾತ್ರೆ ನಡೆಯಲಿದೆ. ಯಾರು ಬೇಕಾದರೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಹುದು ಎಂದು ಡಿ.ಕೆ.ಶಿವಕುಮಾರ್ ಆಹ್ವಾನ ನೀಡಿದರು.
ಇದನ್ನೂ ಓದಿ:ಬೆಳಗಾವಿ:ಗೃಹ ಸಚಿವರಿಂದ ಶಿವಾಜಿ,ಬಸವೇಶ್ವರ ಮತ್ತು ರಾಯಣ್ಣರ ಪ್ರತಿಮೆಗೆ ಮಾಲಾರ್ಪಣೆ
66 ಟಿಎಂಸಿ ನೀರು, ಕೆಲವೊಮ್ಮೆ 200 ಟಿಎಂಸಿವರೆಗೆ ನೀರು ಸಮುದ್ರಕ್ಕೆ ಸೇರುತ್ತಿದೆ. ರಾಜ್ಯದ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳ ಜನರಿಗೆ ಯೋಜನೆಯಿಂದ ಅನುಕೂಲವಾಗುತ್ತದೆ. 440 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಗೂ ಅನುಕೂಲವಾಗುತ್ತದೆ. ಹೀಗಾಗಿ ಯೋಜನೆ ತ್ವರಿತ ಜಾರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಮದು ಡಿ.ಕೆ.ಶಿವಕಮಾರ್ ಹೇಳಿದರು.