Advertisement

ಕಾಂಗ್ರೆಸ್‌ ಸಂಘಟಿಸಿ: ಕೋಳಿವಾಡ

12:15 PM Aug 04, 2019 | Suhan S |

ಹಿರೇಕೆರೂರ: ಕಾರ್ಯಕರ್ತರು ಇಂದಿನಿಂದಲೇ ಬೂತ್‌ ಮಟ್ಟದಿಂದ ಪಕ್ಷ ಸಂಘಟನೆ ಮಾಡಬೇಕು. ಕಾಂಗ್ರೆಸ್‌ ಪಕ್ಷದಿಂದ ಯಾರೇ ಅಭ್ಯರ್ಥಿ ಆದರೂ ಒಮ್ಮತದಿಂದ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ ಕಾರ್ಯಕರ್ತರಿಗೆ ಕರೆ ನೀಡಿದರು.

Advertisement

ಪಟ್ಟಣದ ಗುರುಭವನದಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದ ಅವರು, 14 ಶಾಸಕರು ಕಾಂಗ್ರೆಸ್‌ ಪಕ್ಷದಿಂದ ಆಯ್ಕೆಯಾಗಿ, ಬೇರೆ ಬೇರೆ ಕಾರಣಗಳಿಂದ ರಾಜ್ಯದ ಸಮ್ಮಿಶ್ರ ಸರ್ಕಾರ ಬೀಳಲು ಕಾರಣೀಬೂತರಾಗಿದ್ದಾರೆ. ಕಾಂಗ್ರೆಸ್‌ ಪಕ್ಷ ತ್ಯಾಗ ಬಲಿದಾನಗಳಿಂದ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದೆ. ಅನೇಕ ಏಳು ಬೀಳುಗಳನ್ನು ಕಂಡ ಕಾಂಗ್ರೆಸ್‌ ಪಕ್ಷಕ್ಕೆ ಯಾವುದು ಹೊಸತೇನಲ್ಲ. ಅನೇಕ ಬಾರಿ ಗೆಲುವು ಮತ್ತು ಸೋಲನ್ನು ಕಂಡಿದೆ. ಕಾಂಗ್ರೆಸ್‌ ಬಹುದೊಡ್ಡ ಪಕ್ಷ, ಇಲ್ಲಿ ಸಮಾಧಾನದಿಂದ ಇರಬೇಕು. ಬಿ.ಸಿ.ಪಾಟೀಲರು ಮಂತ್ರಿ ಮಾಡಲಿಲ್ಲ ಎಂದು ಬೇರೆಡೆಗೆ ಚಿತ್ತ ಹಾಕಿದ್ದಾರೆ ಎಂದರು.

ಯಾವಾಗಲಾದರೂ ಚುನಾವಣೆ ಬರಲಿ ಕಾರ್ಯಕರ್ತರು ಬೂತ್‌ ಮಟ್ಟದಿಂದ ಪಕ್ಷ ಸಂಘಟನೆ ಮಾಡಿ ಕಾಂಗ್ರೆಸ್‌ನ್ನು ಬಲಿಷ್ಠಪಡಿಸಬೇಕು. ಹಿರೇಕೆರೂರ ಮತ ಕ್ಷೇತ್ರದ ಜನತೆ ಬುದ್ದಿವಂತರಿದ್ದು, ಮತದಾರರೇ ಮುಖಂಡರಾಗಿದ್ದಾರೆ. ಇಂದಿನಿಂದಲೇ ಪಕ್ಷ ಸಂಘಟನೆಯತ್ತ ಗಮನ ನೀಡಿ ಪಕ್ಷವನ್ನು ಮತ್ತಷ್ಟು ಬಲಿಷ್ಠವಾಗಿಸಬೇಕು ಎಂದರು.

ಡಿ.ಆರ್‌. ಪಾಟೀಲ ಮಾತನಾಡಿ, ಕ್ಷೇತ್ರದಲ್ಲಿ ಗಟ್ಟಿಯಾಗಿ ಪಕ್ಷ ಕಟ್ಟುವ ಸಂದರ್ಭ ಬಂದಿದೆ. ಕಾರ್ಯಕರ್ತರು ಮುಖಂಡರು ಶ್ರಮಿಸಿ ಕಾಂಗ್ರೆಸ್‌ ಗಟ್ಟಿಗೊಳಿಸಬೇಕು. 17 ಜನ ಶಾಸಕರ ರಾಜೀನಾಮೆಯಲ್ಲಿ ಬಿಜೆಪಿ ಹುನ್ನಾರವಿದೆ. ಪ್ರಾಮಾಣಿಕತೆ ಮತ್ತು ನಿಯತ್ತು ಮುಖ್ಯವಾಗಿದ್ದು, ಪ್ರಜಾಪ್ರಭುತ್ವಕ್ಕೆ ದ್ರೋಹ ಮಾಡಿದವರಿಗೆ ಬುದ್ದಿ ಕಲಿಸಬೇಕು. ಕಾರ್ಯಕರ್ತರು ಹಗಲಿರುಳು ಶ್ರಮಿಸಿ ಪಕ್ಷ ಬಲಪಡಿಸಬೇಕು ಎಂದರು.

ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಎಸ್‌.ಕೆ.ಕರಿಯಣ್ಣನವರ ಮಾತನಾಡಿ, ಹಿರೇಕೆರೂರ ಮತ ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್‌ ಪಕ್ಷದ ಕೂಡುಗೆ ಅಪಾರವಾಗಿದೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರಕ್ಕ ನೀಡಿದೆ. ಈಗಿರುವ ಬಿಜೆಪಿ ಸರ್ಕಾರ ಬಹಳ ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ ಮತ್ತೇ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ ಎಂದರು.

Advertisement

ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವರಾದ ಮನೋಹರ ತಹಶೀಲ್ದಾರ್‌, ರುದ್ರಪ್ಪ ಲಮಾಣಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ಜಿಪಂ ಸದಸ್ಯರಾದ ಕೊಟ್ರೇಶಪ್ಪ ಬಸೇಗಣ್ಣಿ, ಪ್ರಕಾಶ ಬನ್ನಿಕೋಡ, ಮಾದೇವಕ್ಕ ಹೊಳಬಸಪ್ಪ ಗೋಪಕ್ಕಳ್ಳಿ, ಮುಖಂಡರಾದ ಬಿ.ಎನ್‌.ಬಣಕಾರ, ಎಸ್‌.ಬಿ.ತಿಪ್ಪಣ್ಣನವರ, ಪಿ.ಡಿ.ಬಸನಗೌಡ್ರ, ಹನುಮಂತಪ್ಪ ಹಡಗದ, ರಮೇಶ ಮಡಿವಾಳರ, ಸಲೀಂ ಮುಲ್ಲಾ, ಕೆ.ಬಿ.ಕುರಿಯವರ, ಶ್ರೀಧರ ನಾಯ್ಕ ಸೇರಿದಂತೆ ಮುಖಂಡರು ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next