Advertisement

ದೇಗುಲ ಸ್ವತಂತ್ರ ವಿಧೇಯಕಕ್ಕೆ ಕಾಂಗ್ರೆಸ್‌ ವಿರೋಧ: ಡಿ.ಕೆ.ಶಿವಕುಮಾರ್‌

01:34 PM Dec 30, 2021 | Team Udayavani |

ಬೆಂಗಳೂರು : ರಾಜ್ಯ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ದೇಗುಲ ಸ್ವತಂತ್ರ ವಿಧೇಯಕಕ್ಕೆ ಕಾಂಗ್ರೆಸ್‌ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಜ.4ರಂದು ಈ ಬಗ್ಗೆ ಚರ್ಚೆ ನಡೆಸುವುದಕ್ಕೆ ಹಿರಿಯ ನಾಯಕರ ಸಭೆ ಆಯೋಜಿಸಿದೆ.

Advertisement

ಇದನ್ನೂ ಓದಿ:ಕಾಂಗ್ರೆಸ್‌ ನಿಂದ ಹೊರ ಬಂದರು ನಾನು ಗಾಂಧಿ, ನೆಹರು ತತ್ವಾದರ್ಶಗಳನ್ನ ಬಿಟ್ಟಿಲ್ಲ: ಪವಾರ್‌

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌,  ಬೇರೆ ರಾಜ್ಯಗಳ ರೀತಿಯಲ್ಲಿ ದೇಗುಲಗಳನ್ನು ಖಾಸಗಿ ಒಡೆತನಕ್ಕೆ ಒಪ್ಪಿಸಲು ನಾವು ಬಿಡುವುದಿಲ್ಲ. ದೇಗುಲಗಳು ಸರಕಾರದ ಆಸ್ತಿ ಮತ್ತು ಖಜಾನೆ. ಈ ಕಾಯಿದೆ ಜಾರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಮೇಕೆದಾಟು ಪಾದಯಾತ್ರೆಯನ್ನು ತಡೆಯುವುದಕ್ಕೆ ನನ್ನ ವಿರುದ್ಧ ದಿಲ್ಲಿಯಲ್ಲಿ ದೊಟ್ಟ ಮಟ್ಟದ ಷಡ್ಯಂತ್ರ ನಡೆಯುತ್ತಿದೆ. ಯಾರ್ಯಾರು ಎಲ್ಲಿ ಸಭೆ ನಡೆಸಿದ್ದಾರೆ ಎಂಬುದು ಗೊತ್ತು. ಐಟಿ, ಇಡಿ ಸೇರಿದಂತೆ ತನಿಖಾ ಸಂಸ್ಥೆಗಳನ್ನು ಯಾವ ರೀತಿ ದುರ್ಬಳಕೆ ಮಾಡಿಕೊಳ್ಳಬಹುದೆಂಬುದೂ ಗೊತ್ತು ಎಂದು ವ್ಯಂಗ್ಯವಾಡಿದರು.

ದಳಪತಿಗಳ ಜತೆಗೆ ನಮ್ಮ ಜತೆ ಯಾವುದೇ ವಿವಾದವಿಲ್ಲ. ಅವರ ಪಾದಯಾತ್ರೆ, ನಮ್ಮ ಪಾದಯಾತ್ರೆಯಲ್ಲಿರುವ ವ್ಯತ್ಯಾಸದ ಬಗ್ಗೆ ನನಗೆ ಗೊತ್ತಿಲ್ಲ. ಪಾದಯಾತ್ರೆಯಲ್ಲಿ ಪಾಲ್ಗೊಳ್ಳಿ ಎಂದು ನಾನು ಈಗಲೂ ಕುಮಾರಸ್ವಾಮಿಯವರಿಗೆ ಆಹ್ವಾನ ನೀಡುತ್ತೇನೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next