Advertisement

Congress; ಮತ್ತೆ ಆಪರೇಶನ್‌ ಕಮಲ ಆರೋಪ; ಮೋದಿ, ಅಮಿತ್‌ ಶಾ ಅವರಿಂದಲೇ ಪ್ರಯತ್ನ: ಕೈ ದೂರು

01:36 AM Aug 26, 2024 | Team Udayavani |

ಬೆಂಗಳೂರು: ವಿವಿಧ ಹಗರಣಗಳ ಸಂಬಂಧ ಸರಕಾರ ಹಾಗೂ ವಿಪಕ್ಷಗಳ ನಡುವೆ ಸಂಘರ್ಷ ತಾರಕಕ್ಕೇರಿರುವ ಸಂದರ್ಭದಲ್ಲೇ ಮತ್ತೆ ಬಿಜೆಪಿ ವಿರುದ್ಧ “ಆಪರೇಷನ್‌ ಕಮಲದ ಆರೋಪ ಕೇಳಿ ಬಂದಿದೆ.ಸರಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್‌ ಶಾಸಕರಿಗೆ 100 ಕೋಟಿ ರೂ.ವರೆಗೂ ಆಮಿಷವೊಡ್ಡಲಾಗು ತ್ತಿದೆ. ಬಿಜೆಪಿಯ ದಿಲ್ಲಿ ನಾಯಕರ ಕಡೆಯಿಂದಲೇ ಈ ಪ್ರಯತ್ನ ನಡೆದಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

Advertisement

ಸ್ವತಃ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಇದರ ಹಿಂದಿದ್ದಾರೆ. ಅಲ್ಲದೆ ರಾಜ್ಯದ ನಾಲ್ಕೈದು ಪ್ರಮುಖ ನಾಯಕರು ಈ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ ಎಂದು ಆಡಳಿತಾರೂಢ ಕಾಂಗ್ರೆಸ್‌ನ ಸಚಿವರು, ಶಾಸ ಕರು ರವಿವಾರ ಗಂಭೀರ ಆರೋಪ ಮಾಡಿದ್ದಾರೆ.

ಆಮಿಷ ನಿಜ: ಸಚಿವ ಮಹದೇವಪ್ಪ
ಬೆಂಗಳೂರಿನ ತಮ್ಮ ನಿವಾಸದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ| ಎಚ್‌. ಸಿ. ಮಹದೇವಪ್ಪ, “ಬಿಜೆಪಿ ನಾಯಕರಿಂದ ನಮ್ಮ ಶಾಸಕರಿಗೆ ಆಮಿಷ ಬರುತ್ತಿರುವುದು ನಿಜ. ಇದೇನೂ ಹೊಸ ಸಂಗತಿ ಅಲ್ಲ. ಬಿಜೆಪಿ-ಜೆಡಿಎಸ್‌ನ ಹಳೆಯ ಚಾಳಿ. ಅವರು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಗಟ್ಟಿಗೊಳಿಸುವುದಾಗಲಿ ಅಥವಾ ಗೌರವಿಸುವುದಾಗಲಿ ಮಾಡುವುದಿಲ್ಲ. ಇತ್ತ ಜನಾ ದೇಶವನ್ನೂ ಗೌರವಿಸುವುದಿಲ್ಲ. ಅಧಿಕಾರದ ಆಸೆ ತೋರಿಸಿ, 2 ಬಾರಿ ಆಪರೇಷನ್‌ ಕಮಲ ಮಾಡಿದರು. ಆದರೆ ಯಶಸ್ವಿ ಆಗಲಿಲ್ಲ. ಮತ್ತೂಂದು ಅಂಥದ್ದೇ ಪ್ರಯೋಗ ನಡೆದಿದೆ’ ಎಂದು ದೂರಿದರು.

ಮೋದಿ, ಶಾ ಷಡ್ಯಂತ್ರ: ಸಚಿವ ಡಾ| ಪಾಟೀಲ್‌
ಕಲಬುರಗಿಯಲ್ಲಿ ಸಚಿವ ಡಾ| ಶರಣಪ್ರಕಾಶ ಪಾಟೀಲ್‌ ಮಾತನಾಡಿ, “100 ಕೋಟಿ ರೂ. ಆಮಿಷ ಒಡ್ಡಿದ್ದಾರೆ ಎಂದು ನಮ್ಮ ಪಕ್ಷದ ಶಾಸಕರೊಬ್ಬರು ಹೇಳಿದ್ದಾರೆ. ಅವರಿಗೆ ಆ ರೀತಿ ಆಮಿಷ ಬಂದದ್ದಕ್ಕೆ ಅವರು ಆ ರೀತಿ ಹೇಳಿರಬಹುದು. ನಮ್ಮ ಕೆಲವು ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನ ಮಾಡುತ್ತಿದೆ ಎಂದು ಇತ್ತೀಚೆಗೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿಯವರೇ ಹೇಳಿದ್ದರು.

ಸರಕಾರವನ್ನು ಬುಡಮೇಲು ಮಾಡಲು ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಅಮಿತ್‌ ಶಾ ಅವರೇ ಷಡ್ಯಂತ್ರ ರೂಪಿಸಿದ್ದಾರೆ. ರಾಜಭವನದ ಮೂಲಕ ಈ ಪ್ರಯತ್ನ ನಡೆಸಿದ್ದಾರೆ. ಆದರೆ ಇಂತಹ ಪ್ರಯತ್ನಗಳು ಫ‌ಲ ನೀಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

100 ಕೋಟಿ ರೂ. ಆಮಿಷ: ರವಿ ಗಾಣಿಗ
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರವಿ ಗಾಣಿಗ, ಈಗಾಗಲೇ 50 ಶಾಸಕರ ಖರೀದಿಗೆ ಪ್ರಯತ್ನ ನಡೆಸಲಾಗುತ್ತಿದೆ. ಬಿಜೆಪಿಯ ದಲ್ಲಾಳಿಗಳು ಪ್ರತಿನಿತ್ಯ ನಮ್ಮ ಶಾಸಕರನ್ನು ಸಂಪರ್ಕಿಸುತ್ತಿದ್ದಾರೆ. 50 ಕೋಟಿ ರೂ.ದಿಂದ 100 ಕೋಟಿ ರೂ.ವರೆಗೂ ಆಮಿಷ ಇದೆ. ಮೊನ್ನೆಯೂ ಕೆಲವು ಕಾಂಗ್ರೆಸ್‌ ಶಾಸಕರಿಗೆ ಕರೆ ಬಂದಿದೆ ಎಂದು ತಿಳಿಸಿದರು.

“ಕೆಲವು ಶಾಸಕರಿಗೆ ಕರೆ ಮಾಡಿರುವ ವ್ಯಕ್ತಿಯು 100 ಕೋಟಿ ರೂ. ಸಿದ್ಧವಿದೆ. ಎಲ್ಲಿಗೆ ಬರುತ್ತೀರಿ?, 50 ಮಂದಿ ಖರೀದಿಗೆ ಹಂಚಿಕೆ ಹಾಕಲಾಗಿದೆ ಎಂದು ಹೇಳಿ ದ್ದ. ನನಗೆ ಯಾರೋ ಒಬ್ಬ ಫೋನ್‌ ಮಾಡಿದ್ದ, 100 ಕೋಟಿ ಸಿದ್ಧ ಎಂದು ಹೇಳಿದ್ದ. ಆಗ ನಾನು 100 ಕೋಟಿ ರೂ. ನೀನೇ ಇಟ್ಟುಕೋ ಎಂದು ಹೇಳಿದ್ದು, ಇ.ಡಿ.ಯವರಿಗೆ ಕರೆ ಮಾಡಬೇಕು ಎಂದುಕೊಂಡಿದ್ದೆ. ನಮ್ಮ ಸರಕಾರವನ್ನು ಬೀಳಿಸಲು ದಿನನಿತ್ಯ ಪ್ರಯತ್ನ ನಡೆಯುತ್ತಿದೆ’ ಎಂದು ಆರೋಪ ಮಾಡಿದರು.

ಬಿಜೆಪಿಯ ಬಿ.ಎಲ್‌. ಸಂತೋಷ್‌, ಶೋಭಾ ಕರಂದ್ಲಾಜೆ, ಪ್ರಹ್ಲಾದ್‌ ಜೋಷಿ, ಜೆಡಿಎಸ್‌ನ ಎಚ್‌. ಡಿ. ಕುಮಾರಸ್ವಾಮಿ ಇವರೆಲ್ಲ ಒಂದು ಗ್ಯಾಂಗ್‌ ಆಗಿದ್ದಾರೆ. ಕಾಂಗ್ರೆಸ್‌ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಸರಕಾರವನ್ನು ಬೀಳಿಸುವುದಾಗಿ ಮೋದಿಗೆ ಮಾತು ಕೊಟ್ಟಿದ್ದಾರೆ. ಆದರೆ ನಮ್ಮದು 136 ಶಾಸಕರಿರುವ ಬಂಡೆಯಂಥ ಸರಕಾರ. ನಮ್ಮ ಶಾಸ ಕರು ಆಮಿಷಗಳಿಗೆ ಬಲಿಯಾಗುವುದಿಲ್ಲ. ಫೋನ್‌ ಮಾಡಿ ಆಮಿಷ ಒಡ್ಡಿದವನ ಆಡಿಯೋವನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ. ಸಾಕ್ಷಿ ಸಹಿತ ಐ.ಟಿ., ಇ.ಡಿ.ಗೆ ಹಿಡಿದು ಕೊಡುತ್ತೇವೆ ಎಂದರು.

ಶಾಸಕ ರವಿ ಗಾಣಿಗ
ವಿರುದ್ಧ ದೂರು ದಾಖಲು
ಹುಬ್ಬಳ್ಳಿ: ಕಾಂಗ್ರೆಸ್‌ ನಾಯಕರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಬಿಜೆಪಿ ಕೆಂಡ ಕಾರಿದೆ. ಈ ಸಂಬಂಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ ಅವರು ಕಾಂಗ್ರೆಸ್‌ ಶಾಸಕ ರವಿ ಗಾಣಿಗ ವಿರುದ್ಧ ರವಿವಾರ ಇಲ್ಲಿನ ಉಪನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕಾಂಗ್ರೆಸ್‌ ಸರಕಾರವನ್ನು ಕೆಡವಲು ಸಂಚು ರೂಪಿಸಿ ಪ್ರತಿಯೊಬ್ಬ ಶಾಸಕರಿಗೆ 50-100 ಕೋಟಿ ರೂ. ಆಮಿಷ ಒಡ್ಡುತ್ತಿದ್ದಾರೆ ಎಂದು ಬಿಜೆಪಿ ನಾಯಕರ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ರವಿ ಗಾಣಿಗ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next