Advertisement
ಗುಜರಾತ್ ನ ಗಾಂಧಿ ನಗರದಲ್ಲಿ ಸೋಮವಾರ(ಸೆ16) ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆ ಮತ್ತು ಎಕ್ಸ್‌ಪೋದ 4 ನೇ ಆವೃತ್ತಿ (RE-INVEST 2024) ಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ದೇಶದ ತ್ವರಿತ ಪ್ರಗತಿಗಾಗಿ ಪ್ರತಿಯೊಂದು ಕ್ಷೇತ್ರ ಮತ್ತು ಅಂಶವನ್ನು ಪರಿಹರಿಸಲು ನಮ್ಮ ಸರಕಾರ ಪ್ರಯತ್ನಿಸಿದೆ ಎಂದರು.
Related Articles
Advertisement
ಕಾಂಗ್ರೆಸ್ ಸೇರಿ ವಿಪಕ್ಷಗಳ ಟೀಕಾ ಪ್ರಹಾರ
ತಮ್ಮ ಮೂರನೇ ಅವಧಿಯಲ್ಲಿ ನರೇಂದ್ರ ಮೋದಿ ಅವರು ಊರುಗೋಲನ್ನು ಅವಲಂಬಿಸಿದ್ದಾರೆ. ಯು-ಟರ್ನ್‌ಗಳಿಗಾಗಿ ಹೊಸ ದಾಖಲೆಗಳನ್ನು ನಿರ್ಮಿಸುವ ದುರ್ಬಲ ಪ್ರಧಾನಿ ಎಂದು ಸಾಬೀತುಪಡಿಸಿದ್ದಾರೆ ಎಂದು ಕಾಂಗ್ರೆಸ್ ಸೋಮವಾರ ಟೀಕಾ ಪ್ರಹಾರ ನಡೆಸಿದೆ.
”ಕಳೆದ 100 ದಿನಗಳು ದೇಶದ ರೈತರು, ಯುವಕರು, ಮಹಿಳೆಯರು, ಮೂಲಸೌಕರ್ಯ, ರೈಲ್ವೆ ಮತ್ತು ಒಟ್ಟಾರೆ ಶಾಂತಿಯ ಮೇಲೆ ಹೆಚ್ಚು ತೂಕವನ್ನು ಹೊಂದಿದ್ದು, ಮೋದಿಯವರಿಗೆ ದೇಶದ ಸಮಸ್ಯೆಗಳಿಗೆ ಪರಿಹಾರವೂ ಇಲ್ಲ, ದೂರದೃಷ್ಟಿಯೂ ಇಲ್ಲ ಎಂಬುದನ್ನು ಈ ನೂರು ದಿನಗಳು ಸಾಬೀತುಪಡಿಸಿವೆ” ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಥೆ ಹೇಳಿದ್ದಾರೆ.